ಸಾಮಾನ್ಯವಾಗಿ ರಾಜಕಾರಣಿಗಳಿಗಿಂತ ನಟರ ಬಗ್ಗೆ ಜನರಿಗೆ ಕುತೂಹಲ ಜಾಸ್ತಿ, ಒಂದೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ಅವರನ್ನು ಮುತ್ತಿಕೊಳ್ಳುತ್ತಾರೆ, ಅಂಥದ್ದೇ ಘಟನೆ ತಮಿಳುನಾಡಿನ ದೇವಸ್ಥಾನದಲ್ಲೂ ನಡೆಯಿತು. ನಟಿ ಹಾಗೂ ವೈಎಸ್ಆರ್ಪಿ ನಾಯಕಿ ರೋಜಾ ಸೆಲ್ವಸ್ವಾಮಿ ತಮ್ಮ ಪತಿ ಜತೆಗೆ ತಮಿಳುನಾಡಿನ ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ತೆರಳಿದ್ದರು.
ಅಲ್ಲಿದ್ದವರು ನಾ ಮುಂದು ತಾ ಮುಂದು ಎಂದು ಸೆಲ್ಫಿಗೆ ಮುಗಿ ಬಿದ್ದರು, ಆದರೆ ಸ್ವಚ್ಛತಾ ಸಿಬ್ಬಂದಿ ಅವರ ಬಳಿಗೆ ಬಂದಾಗ ಅಂತರ ಕಾಯ್ದುಕೊಳ್ಳುವಂತೆ ಸನ್ನೆ ಮಾಡಿರುವ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ.
ರೋಜಾ ಮತ್ತು ಅವರ ಪತಿ ಮತ್ತು ನಿರ್ದೇಶಕ ಆರ್‌ಕೆ ಸೆಲ್ವಮಣಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತಿರುಚೆಂದೂರಿನಲ್ಲಿ ಈ ಘಟನೆ ಸಂಭವಿಸಿದೆ. ಹಲವಾರು ಭಕ್ತರು ಮತ್ತು ದೇವಾಲಯದ ಸಿಬ್ಬಂದಿ ದಂಪತಿ ಬಳಿಗೆ ಬಂದು ತಮ್ಮ ಸೆಲ್ ಫೋನ್‌ಗಳೊಂದಿಗೆ ಸೆಲ್ಫಿ ತೆಗೆದುಕೊಂಡರು.
ಮತ್ತಷ್ಟು ಓದಿ:ಚಂದ್ರಬಾಬು ನಾಯ್ಡು ಜೊತೆ ಸೇರಿ ಎನ್ಟಿಆರ್ ಅವರನ್ನು ಮತ್ತೆ ಕೊಂದಿದ್ದಾರೆ ರಜಿನೀಕಾಂತ್: ನಟಿ ರೋಜಾ
ಆ ಸಮಯದಲ್ಲಿ, ದೇವಸ್ಥಾನದಲ್ಲಿ ಕೆಲಸ ಮಾಡುವ ಇಬ್ಬರು ಮಹಿಳಾ ಶುಚಿಗೊಳಿಸುವ ಸಿಬ್ಬಂದಿ ಫೋಟೊಗಾಗಿ ರೋಜಾ ಅವರ ಬಳಿಗೆ ಬಂದಾಗ ಅವರು ಅಂತರ ಕಾಯ್ದುಕೊಳ್ಳುವಂತೆ ಸನ್ನೆ ಮಾಡಿದ್ದು ಸಿಬ್ಬಂದಿ ಮುಜುಗರಕ್ಕೀಡಾಗಿದ್ದಾರೆ.
Original video Roja Caste Discrimination:
While leaders like DyCM @PawanKalyan are trying to close gap with Sanitation workers by with:
“Nenu mi relli kulasthudini”
YCP leaders still in Caste Discrimination,
Remaining SC/ST should realize & leave YCP pic.twitter.com/S7z3cTq0J6— 𝗚𝗹𝗮𝘀𝘀𝗶𝘁 (@LetsGlassIt) July 16, 2024
ಮಹಿಳಾ ಕಾರ್ಮಿಕರು ತಮ್ಮ ಹಿಂದೆ ಕೈ ಕಟ್ಟಿಕೊಂಡು ರೋಜಾ ಅವರೊಂದಿಗೆ ಸೆಲ್ಫಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿತು. ವೈಎಸ್‌ಆರ್‌ಸಿಪಿ ಅಥವಾ ಆಂಧ್ರ ಪ್ರದೇಶ ಸರ್ಕಾರವು ವೀಡಿಯೊಗೆ ಪ್ರತಿಕ್ರಿಯಿಸಿಲ್ಲ.
ರೋಜಾ ಅವರ ನಡವಳಿಕೆಯಿಂದ ಬೇಸರಗೊಂಡ ಸಿಬ್ಬಂದಿ ದೂರದಲ್ಲೇ ನಿಂತು ಒಲ್ಲದ ಮನಸ್ಸಿನಿಂದ ಸೆಲ್ಫಿ ತೆಗೆದುಕೊಂಡು ತೆರಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಎಲ್ಲರೂ ನಟಿಯನ್ನು ಟೀಕಿಸಲು ಶುರು ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:35 am, Wed, 17 July 24