ಚುನಾವಣಾ ಸಂದರ್ಭದಲ್ಲಿ ಪಕ್ಷಗಳ ಕಾರ್ಯಕರ್ತರ ಆರೋಗ್ಯದ ಕಾಳಜಿ ಅಗತ್ಯ: ಡಾ ರವಿಕಿರಣ ಪಟವರ್ಧನ ಶಿರಸಿ
ಮನೆ ಮನೆಗೆ ಪ್ರಚಾರಕ್ಕೆ ಹೋಗುವ ರಾಜಕೀಯ ಧುರೀಣರು ಹಾಗೂ ಕಾರ್ಯಕರ್ತರಿಗೆ ಪ್ರಚಾರಕ್ಕೆ ಹೋಗುವಾಗ ತೆಗೆದುಕೊಳ್ಳಬೇಕಾದಂತಹ ಒಂದಿಷ್ಟು ಕ್ರಮಗಳ ಬಗ್ಗೆ ಮುಂದೆ ನೋಡೋಣ.
ಇನ್ನು ಸರಿಸುಮಾರು ಒಂದು ತಿಂಗಳ ಕಾಲ ಪ್ರಖರವಾದ ಬಿಸಿಲು ಇರುವ ಹವಾಮಾನ ಇಲಾಖೆಯ ಮಾಹಿತಿಯಾಗಿದೆ ಇಂತಹ ಸಂದರ್ಭದಲ್ಲಿ ಮನೆಯಿಂದ ಹೊರಡುವಾಗ ಅಥವಾ ಪಕ್ಷದ ಕಾರ್ಯಾಲಯದಿಂದ ಹೊರಡುವಾಗ ಸಕ್ಕರೆ ಉಪ್ಪು ನೀರು ಸೇವಿಸಿ ಹೊರಡಿ. ಪದೇ ಪದೇ ಚಹಾ ಸೇವನೆ ಆದಷ್ಟು ತಪ್ಪಿಸಿ. ತಲೆಗೆ ಅಂಪಯರ್ ಕ್ಯಾಂಪ್ ತಿಳಿ ಬಣ್ಣದ್ದು ಇದ್ದರೆ ಬಹಳ ಉತ್ತಮ, ಪೂರ್ಣ ದೇಹವನ್ನು ಮುಚ್ಚುವ ಧಿರಿಸು ಇವತ್ತಿನ ಬಿಸಿಲಿನಿಂದ ರಕ್ಷಣೆಗೆ ಮಹತ್ವದ್ದು ಆದರೆ ನೆನಪಿಡಿ ಇದು ಹತ್ತಿಯ ಬಟ್ಟೆಯಿಂದ ಮಾಡಿದ್ದು ಆಗಿರಬೇಕು. ಈ ರೀತಿ ನಡೆದುಕೊಂಡು ಪ್ರಚಾರಕ್ಕೆ ಹೋಗುವಾಗ ಧರಿಸುವ ಬಟ್ಟೆಗಳು ಆದಷ್ಟು ಗಾಳಿ ಆಡುವಂತಿರಲಿ. ಮನೆಯಿಂದ ಹೊರಗೆ ಹೋಗುವ ಮೊದಲು ಬೆವರು ಬರುವಂತಹ ಭಾಗಗಳಿಗೆ ಟಾಲ್ಕಂ ಪೌಡರ್ ಗಳನ್ನು ಬಳಸುವುದು ಅತ್ಯುತ್ತಮ. ವಾಹನದ ಮೇಲೆ ಸಂಚರಿಸುವಾಗ ರೇಗ್ಜಿನ್ ಸೀಟ್ ಮೇಲೆ ಕುಳಿತುಕೊಳ್ಳುವ ಪ್ರಸಂಗವಿದ್ದಲ್ಲಿ ಪುಟ್ಟ ಟಕಿಷ್ ಟವಲ್ಲ ಅದರ ಮೇಲೆ ಹಾಕಿ ಕುಳಿತುಕೊಳ್ಳಿ.
ಹವಾನಿಯಂತ್ರಿತ ವಾಹನದಲ್ಲಿ ಸಂಚರಿಸುವಂತಹ ಪ್ರಸಂಗ ಇದ್ದಲ್ಲಿ ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳಿ ನೆಗಡಿ ಕೆಮ್ಮಿನ ತೊಂದರೆ ಪದೇಪದೇ ಆಗುವವರು ಕಡ್ಡಾಯವಾಗಿ ಅನುಸರಿಸುವುದು ಉತ್ತಮ. ಪಕ್ಷದ ಕಾರ್ಯಕರ್ತರ ಮನೆಗೆ ವಿವಿಧ ಕಾರ್ಯಾಲಯಗಳಿಗೆ ಭೇಟಿ ನೀಡಿದಾಗ ಕುಡಿಯಲು ಶುದ್ಧ ನೀರನ್ನು ಬಳಸಿ ಅದು ಸಹಜ ನೀರು ಇದ್ದಲ್ಲಿ ಉತ್ತಮ ತಂಪಾದ ನೀರಿನ ಬಳಕೆ ಆದಷ್ಟು ಬೇಡ ಒಮ್ಮೆ ಬಿಸಿನೀರು ಕುಡಿಯೋದು ಒಮ್ಮೆ ತಂಪು ನೀರು ಕುಡಿಯುವುದು ಬೇಡ. ಸಂಪೂರ್ಣ ದಿನದಲ್ಲಿ ಎರಡು ರಿಂದ ಮೂರು ಲೀಟರ್ ನೀರನ್ನು ಕುಡಿರಿ.
ಆಹಾರವನ್ನು ಸ್ವೀಕರಿಸಿಯೇ ಮನೆಯಿಂದ ಹೊರಡುವುದು ಉತ್ತಮ ಪ್ರವಾಸದ ಸಂದರ್ಭದಲ್ಲಿ ಆಹಾರವನ್ನು ಕಟ್ಟಿಕೊಂಡು ಹೋಗುವುದು ಹಲವು ತೊಂದರೆಗಳನ್ನು ದೂರ ಮಾಡಬಹುದು.ಇಲ್ಲವಾದಲ್ಲಿ ಲಭ್ಯವಿರುವ ಆಹಾರವನ್ನ ಆಹಾರ ಸೇವಿಸುವ ಸಮಯಕ್ಕೆ ಸ್ವೀಕರಿಸಿ. ಯಾವತ್ತೂ ಕಿಸೆಯಲ್ಲಿ ಸಕ್ಕರೆ ಪುಡಿ ಮತ್ತು ಉಪ್ಪು ಖಂಡಿತವಾಗಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ ನಿಮಗೆ ಅಥವಾ ನಿಮ್ಮ ಕಾರ್ಯಕರ್ತರ ಮಿತ್ರರಿಗೆ ತುರ್ತು ಆರೋಗ್ಯ ತೊಂದರೆ ಉಪಯೋಗಿಸಲು ಅವಶ್ಯ.
ಮನೆ ತಲುಪಿದ ನಂತರ ಅತ್ಯಂತ ಮುಖ್ಯವಾಗಿ ತಾವೆಲ್ಲರೂ ಮಾಡಬೇಕಾದ ಸಂಗತಿ ಎಂದರೆ ಸಾಬೂನು ಬಳಸಿ ಸ್ವಚ್ಛವಾಗಿ ಕೈಯನ್ನು ತೊಳೆಯಿರಿ ಯಾಕೆಂದರೆ ಪ್ರಚಾರದ ಸಾಮಗ್ರಿಗಳಿಗೆ ಅಂಟಿದಂತಹ ರಾಸಾಯನಿಕ ಹಾಗೂ ಧೂಳು ದಿನವಿಡಿ ನಿಮಗೆ ನಿಮ್ಮ ಕೈಯ ಸಂಪರ್ಕದಲ್ಲಿ ಬರುತ್ತದೆ ಇದನ್ನ ದೂರ ಮಾಡಲು ಕಡ್ಡಾಯವಾಗಿ ಸಾಬೂನು ಬಳಸಿ ಕೈಯನ್ನ ಸ್ವಚ್ಛಗೊಳಿಸಿ. ಇಂದಿನ ಕಾರ್ಯಕ್ರಮಗಳು ಮುಗಿಸಿ ರಾತ್ರಿ ಮನೆ ತಲುಪಿದಾಗ ಊಟದ ಮೊದಲು ಕಾಲು ಮೇಲಕ್ಕೆ ಮಾಡಿ ಅಂದರೆ ಹೊಟ್ಟೆ ಹಾಗೂ ಕಾಲಿಗೆ 120 ಕೊನ ಆಗುವಂತೆ ಇಟ್ಟುಕೊಂಡು 10 ನಿಮಿಷ ಮಲಗಿ. ಅನಂತರ ಆಹಾರ ಸ್ವೀಕರಿಸಿ ಇದು ಕಾಲಿಗೆ ಆದ ಹೆಚ್ಚಿನ ಆಯಾಸವನ್ನು ಕಡಿಮೆ ಮಾಡುವುದರಲ್ಲಿ ಮಹತ್ವದ ಪತ್ರವನ್ನು ವಹಿಸುತ್ತದೆ. ಇನ್ನು ಕರೋನಾ ವಿಧವಾದಂತ ಆರೋಗ್ಯ ಸಮಸ್ಯೆ ಬಗ್ಗೆ ಈಗಾಗಲೇ ವೃತ್ತ ಪತ್ರಿಕೆಗಳು ಹಾಗೂ ಸರಕಾರ ಹೇಳಲು ಪ್ರಾರಂಭಿಸಿದೆ ಕಾರಣ ಎನ್ 95 ಮಾಸ್ಕ ಹಾಕಿಕೊಂಡು ಹೋಗುವುದನ್ನು ಮರೆಯೋದು ಬೇಡ.
– ಡಾ ರವಿಕಿರಣ ಪಟವರ್ಧನ ಶಿರಸಿ.
Published On - 5:54 pm, Sun, 19 March 23