ಕೋಯಿಕ್ಕೋಡ್ ನಗರ ಈಗ UNESCO ಸಾಹಿತ್ಯ ನಗರ, ಆಶ್ಚರ್ಯವೆಂದರೆ ಕರ್ನಾಟಕದ ಯಾವುದೇ ನಗರಕ್ಕೆ ಇನ್ನೂ ಆ ಸ್ಥಾನಮಾನವಿಲ್ಲ!

ಕೋಲ್ಕತ್ತಾದಂತಹ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿರುವ ನಗರಗಳನ್ನು ಹಿಂದಿಕ್ಕಿ, ಯುನೆಸ್ಕೋದಿಂದ 'ಸಾಹಿತ್ಯ ನಗರ' ಟ್ಯಾಗ್ ಅನ್ನು ಪಡೆಯುವಲ್ಲಿ ಕೋಯಿಕ್ಕೋಡ್ ಯಶಸ್ವಿಯಾಗಿದೆ. ಆದರೆ UCCN ಪಟ್ಟಿಯಲ್ಲಿ ಇದುವರೆಗೆ ದಾಖಲಾಗಿರುವ ಭಾರತದ ಇತರೆ ನಗರಗಳ ಕಡೆ ಕಣ್ಣಾಡಿಸಿದಾಗ ಅತ್ಯಂತ ಶ್ರೀಮಂತ ಸಾಹಿತ್ಯ, ಸಾಂಸ್ಕೃತಿಕ, ಪ್ರಾದೇಶಿಕ ಛಾಯೆಯನ್ನು ಹೊಂದಿರುವ ಕರುನಾಡಿನ ಯಾವುದೇ ನಗರವೂ ಯಾವುದೇ ವಿಭಾಗದಲ್ಲಿಯೂ ಇನ್ನೂ ಸ್ಥಾನ ಪಡೆಯದಿರುವ ಆಶ್ಚರ್ಯಕರವಾಗಿದೆ.

ಕೋಯಿಕ್ಕೋಡ್ ನಗರ ಈಗ UNESCO ಸಾಹಿತ್ಯ ನಗರ, ಆಶ್ಚರ್ಯವೆಂದರೆ ಕರ್ನಾಟಕದ ಯಾವುದೇ ನಗರಕ್ಕೆ ಇನ್ನೂ ಆ ಸ್ಥಾನಮಾನವಿಲ್ಲ!
ಕೋಯಿಕ್ಕೋಡ್ ನಗರ ಈಗ UNESCO ಸಾಹಿತ್ಯ ನಗರ!
Follow us
ಸಾಧು ಶ್ರೀನಾಥ್​
|

Updated on: Jul 11, 2024 | 12:32 PM

ಕೋಯಿಕ್ಕೋಡ್ ( ಅಂದಿನ ಕ್ಯಾಲಿಕಟ್) ಭಾರತದ ಮೊದಲ UNESCO ಸಾಹಿತ್ಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ UNESCO ಮಾನ್ಯತೆಯು ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಮಲಯಾಳಂ ಸಾಹಿತ್ಯಕ್ಕೆ ಕೋಯಿಕ್ಕೋಡ್ ನಗರ ನೀಡಿರುವ ಗಮನಾರ್ಹ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ. ಒಂದು ಪ್ರೀಮಿಯಂ ವರದಿ ಇಲ್ಲಿದೆ

ಒಮ್ಮೆ ಝಮೊರಿನ್ಸ್ ನಗರ (Zamorins) ಎಂದು ಕರೆಯಲ್ಪಡುತ್ತಿದ್ದ ಕೋಯಿಕ್ಕೋಡ್ ಪ್ರಾಚೀನವಾದ ಕಡಲತೀರಗಳು ಮತ್ತು ಶ್ರೀಮಂತ ಪಾಕಪದ್ಧತಿಯನ್ನು ಹೊಂದಿರುವ ಉತ್ತರ ಕೇರಳದ ಸುಂದರ ನಗರ (Kozhikode, Kerala). ನಗರವು ಮನಂಚಿರಾ ಸ್ಕ್ವೇರ್‌ನಿಂದ ಎಸ್‌ಎಂ ಸ್ಟ್ರೀಟ್‌ವರೆಗೆ ಸಾಹಿತ್ಯ ಪ್ರಿಯರು ಮತ್ತು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಂತಹ ಪ್ರಾಚೀನ ಕೋಯಿಕ್ಕೋಡ್ ಭಾರತದ ಮೊದಲ ‘ಯುನೆಸ್ಕೋ ಸಾಹಿತ್ಯ ನಗರ’ ಎಂದೆನಿಸಿಕೊಂಡಿದೆ (UNESCO City of Literature). ಕಳೆದ ತಿಂಗಳು (ಜೂನ್ 23) ಈ ನಗರಕ್ಕೆ ಅದರ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ಎತ್ತಿ ತೋರಿಸುವ ಪ್ರತಿಷ್ಠಿತ ಮನ್ನಣೆ ಸಂದಾಯವಾಗಿದೆ.

ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ( United Nations Educational, Scientific and Cultural Organization -UNESCO) ಅಕ್ಟೋಬರ್ 31 ರಂದು ಯುಸಿಸಿಎನ್‌ ದಿನವಾಗಿ ಆಚರಿಸುತ್ತದೆ. ಅಂದು ಯುಸಿಸಿಎನ್‌ಗೆ ಸೇರ್ಪಡೆಗೊಂಡ 55 ವಿವಿಧ ನಗರಗಳಲ್ಲಿ ಭಾರತದಿಂದ ಗ್ವಾಲಿಯರ್ ಮತ್ತು ಕೋಝಿಕ್ಕೋಡ್ ಸೇರಿವೆ. ಮಧ್ಯಪ್ರದೇಶದ ಗ್ವಾಲಿಯರ್ ‘ಸಂಗೀತ’ ವಿಭಾಗದಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದರೆ, ಕೋಝಿಕ್ಕೋಡ್ ‘ಸಾಹಿತ್ಯ’ ವಿಭಾಗದಲ್ಲಿ ಸ್ಥಾನ ಗಳಿಸಿದೆ.

ಯುಸಿಸಿಎನ್‌ (UCCN) ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದ್ದು ಶಿಕ್ಷಣ, ಕಲೆ, ವಿಜ್ಞಾನ ಮತ್ತು ಸಂಸ್ಕೃತಿಯಲ್ಲಿ ಅಂತರಾಷ್ಟ್ರೀಯ ಸಹಕಾರದ ಮೂಲಕ ವಿಶ್ವ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಸೇರ್ಪಡೆಯೊಂದಿಗೆ, UCCN ಈಗ ನೂರಕ್ಕೂ ಹೆಚ್ಚು ದೇಶಗಳಲ್ಲಿ 350 ನಗರಗಳನ್ನು ತನ್ನ ಎಣಿಕೆಗೆ ಸೇರಿಸಿಕೊಂಡಿದೆ. ಅದು ಏಳು ಸೃಜನಶೀಲ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ: ಕರಕುಶಲ ಮತ್ತು ಜಾನಪದ ಕಲೆ, ವಿನ್ಯಾಸ, ಚಲನಚಿತ್ರ, ಗ್ಯಾಸ್ಟ್ರೊನೊಮಿ, ಸಾಹಿತ್ಯ, ಮಾಧ್ಯಮ ಕಲೆಗಳು ಮತ್ತು ಸಂಗೀತ.

Also Read: ಕಳೆದ 3 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಸೈಬರ್ ವಂಚನೆಗಳು! ಇದಕ್ಕೆ ಕಡಿವಾಣ ಹೇಗೆ?

ಪುರಾತನ ಕೋಯಿಕ್ಕೋಡ್ (ಕ್ಯಾಲಿಕಟ್) ಅಂದರೆ ಅದೊಂದು ಸುಂದರ ನಗರ:

ಇದು ಕೇರಳದ ಮಲಬಾರ್ ಕರಾವಳಿಯಲ್ಲಿದೆ. ಮತ್ತು ಯುನೆಸ್ಕೋ ಕ್ರಿಯೇಟಿವ್ ಸಿಟೀಸ್ ನೆಟ್‌ವರ್ಕ್ (ಯುಸಿಸಿಎನ್ -UCCN) ಅಡಿಯಲ್ಲಿ ಅಕ್ಟೋಬರ್ 2023 ರಲ್ಲಿ ಭಾರತದ ಮೊದಲ UNESCO ‘ಸಾಹಿತ್ಯ ನಗರ’ ಎಂದು ಗೊತ್ತುಪಡಿಸಲಾಗಿತ್ತು. ಐತಿಹಾಸಿಕವಾಗಿ ಕ್ಯಾಲಿಕಟ್ ಎಂದು ಕರೆಯಲ್ಪಡುವ ನಗರವು ಮಧ್ಯಕಾಲೀನ ಕಾಲದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇದನ್ನು ಸಮೂತಿರಿಸ್ (ಝಮೊರಿನ್) ಆಳಿದರು. ಯಹೂದಿಗಳು, ಅರಬ್ಬರು, ಫೀನಿಷಿಯನ್ನರು ಮತ್ತು ಚೀನಿಯರೊಂದಿಗೆ ಮಸಾಲೆ ಪದಾರ್ಥಗಳ ವ್ಯಾಪಾರ ಮಾಡಿದರು. ಇಬ್ನ್ ಬಟ್ಟೂಟಾ ಮತ್ತು ವಾಸ್ಕೋ ಡ ಗಾಮಾ ಅವರಂತಹ ಪ್ರಸಿದ್ಧ ಕಡಲು ಪ್ರಯಾಣಿಕರು ಇದರ ತೀರಕ್ಕೆ ಭೇಟಿ ನೀಡಿದ್ದರು.

ಇಂದು, ಕೋಯಿಕ್ಕೋಡ್ 500 ಗ್ರಂಥಾಲಯಗಳು, 70 ಪ್ರಕಾಶಕರು ಮತ್ತು ಸದೃಢ ಸಾಹಿತ್ಯಿಕ ಶಿಕ್ಷಣ ನೆಲೆಯನ್ನು ಹೊಂದಿದೆ. ಇದು 2012 ರಲ್ಲಿ ‘ಶಿಲ್ಪಗಳ ನಗರ’ ಎಂಬ ಟ್ಯಾಗ್ ಅನ್ನು ಸಹ ಗಳಿಸಿದೆ. ಜೂನ್ 23 ಅನ್ನು ‘ಸಾಹಿತ್ಯದ ನಗರ’ ದಿನವನ್ನು ಕೋಯಿಕ್ಕೋಡ್ ನಲ್ಲಿ ಘೋಷಿಸಲಾಗಿದೆ. ಅದರ ಸಾಹಿತ್ಯಿಕ ಸಾಧನೆಗಳು ಮತ್ತು ಸಾಂಸ್ಕೃತಿಕ ಮಹತ್ವವನ್ನು ಆಚರಿಸುವಂತಾಗಿದೆ.

ಕರ್ನಾಟಕದ ಯಾವುದೇ ನಗರ ಇನ್ನೂ UCCN ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ!

ಕ್ಯಾಲಿಕಟ್ ನಗರಕ್ಕೆ ಸಂದಿರುವ ಈ ಪ್ರತಿಷ್ಠಿತ ಪದನಾಮವು ಅನ್ವೇಷಣೆ, ಸಾಂಸ್ಕೃತಿಕ ಪ್ರವಾಸೋದ್ಯಮ ಮತ್ತು ಸಂರಕ್ಷಣೆಗೆ ಹೊಸ ಅವಕಾಶಗಳು/ ಮಾರ್ಗಗಳನ್ನು ತೆರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ UCCN ಪಟ್ಟಿಯಲ್ಲಿ ಇದುವರೆಗೆ ದಾಖಲಾಗಿರುವ ಭಾರತದ ಇತರೆ ನಗರಗಳ ಕಡೆ ಕಣ್ಣಾಡಿಸಿದಾಗ ಅತ್ಯಂತ ಶ್ರೀಮಂತ ಸಾಹಿತ್ಯ, ಸಾಂಸ್ಕೃತಿಕ, ಪ್ರಾದೇಶಿಕ ಛಾಯೆಯನ್ನು ಹೊಂದಿರುವ ಕರುನಾಡಿನ ಯಾವುದೇ ನಗರವೂ ಯಾವುದೇ ವಿಭಾಗದಲ್ಲಿಯೂ ಇನ್ನೂ ಸ್ಥಾನ ಪಡೆಯದಿರುವ ಆಶ್ಚರ್ಯಕರವಾಗಿದೆ.

UCCN ಪಟ್ಟಿಯಲ್ಲಿರುವ ಭಾರತದ ಇತರೆ ನಗರಗಳು:

ಜೈಪುರ: ಕರಕುಶಲ ಮತ್ತು ಜಾನಪದ ಕಲೆಗಳು (2015) ವಾರಣಾಸಿ: ಕ್ರಿಯೇಟಿವ್ ಸಿಟಿ ಆಫ್ ಮ್ಯೂಸಿಕ್ (2015) ಚೆನ್ನೈ: ಕ್ರಿಯೇಟಿವ್ ಸಿಟಿ ಆಫ್ ಮ್ಯೂಸಿಕ್ (2017) ಮುಂಬೈ: ಚಲನಚಿತ್ರ (2019) ಹೈದರಾಬಾದ್: ಗ್ಯಾಸ್ಟ್ರೋನಮಿ (2019) ಶ್ರೀನಗರ: ಕರಕುಶಲ ಮತ್ತು ಜಾನಪದ ಕಲೆ (2021)

ಕೋಯಿಕ್ಕೋಡ್ ನಗರಕ್ಕೆ ಈ ಐತಿಹಾಸಿಕ ಗರಿ ಸಿಕ್ಕಿರುವುದು ಮಲಯಾಳಂ ಸಾಹಿತ್ಯಕ್ಕೆ ಅದರ ಗಮನಾರ್ಹ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ. ನಗರವು ಹಲವಾರು ಸಾಹಿತ್ಯಿಕ ಹೆಗ್ಗುರುತುಗಳನ್ನು ಹೊಂದಿದೆ ಮತ್ತು ಅದರ ಸಾಹಿತ್ಯಿಕ ವ್ಯಕ್ತಿಗಳನ್ನು ಗೌರವಿಸುವ ದೀರ್ಘಕಾಲದ ಸಂಪ್ರದಾಯವನ್ನು ಎತ್ತಿಹಿಡಿದಿದೆ.

ಮುಂದಿನ ನಾಲ್ಕು ವರ್ಷಗಳಲ್ಲಿ ಕೋಯಿಕ್ಕೋಡ್ ದೊಡ್ಡ ಮಟ್ಟದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿದೆ. ಮಾನಂಚಿರ, ತಾಳಿ ಮತ್ತು ಕುಟ್ಟಿಚಿರಗಳಂತಹ ಸಾಂಪ್ರದಾಯಿಕ ತಾಣಗಳು ಸಾಹಿತ್ಯಿಕ ಕೂಟಗಳಿಗೆ ಉತ್ಸಾಹಭರಿತ ಕೇಂದ್ರಗಳಾಗುತ್ತವೆ. ಸೃಜನಶೀಲ ವಿನಿಮಯ ಮತ್ತು ಸಾಹಿತ್ಯದ ಆವಿಷ್ಕಾರಕ್ಕೆ ರೋಮಾಂಚಕ ವಾತಾವರಣವನ್ನು ಸೃಷ್ಟಿಸುತ್ತವೆ.

ಭವಿಷ್ಯದಲ್ಲಿ ಕೋಯಿಕ್ಕೋಡ್ ತನ್ನೀ UNESCO ಸ್ಥಾನಮಾನದ ಮೂಲಕ ಅಂತರರಾಷ್ಟ್ರೀಯ ಮನ್ನಣೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದಲ್ಲಿ ಅಭಿವರ್ಧನೆ ಕಾಣುವ ಗುರಿಯನ್ನು ಹೊಂದಿದೆ. ತುಂಜತ್ ಎಜುತಚ್ಚನ್ ಅವರ ತಿರೂರ್ ನಿಂದ ವೈಕೊಮ್ ಮುಹಮ್ಮದ್ ಬಶೀರ್ ಅವರ ಬೇಪೋರ್ ವರೆಗೆ ಪ್ರಮುಖ ಸಾಹಿತ್ಯದ ಹೆಗ್ಗುರುತುಗಳನ್ನು ಪೋಣಿಸುವ ಮೂಲಕ ನಗರದ ಸಾಹಿತ್ಯ ವಲಯವನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಕೋಯಿಕ್ಕೋಡ್ ನಲ್ಲಿ ಮಾಡಬೇಕಾದ 5 ಅತ್ಯುತ್ತಮ ಕೆಲಸಗಳು:

1. ಕೋಯಿಕ್ಕೋಡ್ ಬೀಚ್ ಉದ್ದಕ್ಕೂ ಅಡ್ಡಾಡುವುದು: ಸುಂದರವಾದ ಕರಾವಳಿಯ ಉದ್ದಕ್ಕೂ ವಿಶ್ರಾಮ ನಡಿಗೆಯನ್ನು ಕೈಗೊಳ್ಳಿ, ಅದ್ಭುತ ಎನಿಸುವ ಸೂರ್ಯಾಸ್ತಗಳನ್ನು ಆನಂದಿಸಿ ಮತ್ತು ಬೀಚ್‌ಸೈಡ್ ಸ್ಟಾಲ್‌ಗಳಲ್ಲಿ ಸಿಗುವ ಸ್ಥಳೀಯ ಸತ್ಕಾರಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಿ

2. ಮಲಬಾರ್ ಪಾಕಪದ್ಧತಿಯ ರುಚಿಗಳನ್ನು ಸವಿಯಿರಿ: ಕೋಯಿಕ್ಕೋಡ್ ನ ಪಾಕಶಾಲೆಯ ಸಂಪತ್ತನ್ನು ಆಸ್ವಾದಿಸಿ, ಆನಂದಿಸಿ. ವಿಶೇಷವಾಗಿ ಪರಿಮಳಯುಕ್ತ ಮಲಬಾರ್ ಪಾಕಪದ್ಧತಿಯನ್ನು ಅದರ ಶ್ರೀಮಂತ ಮಸಾಲೆಗಳು ಮತ್ತು ಸೊಗಸಾದ ಸಮುದ್ರಾಹಾರ ಭಕ್ಷ್ಯಗಳಿಗಾಗಿ ಗುರುತಿಸಲಾಗುತ್ತದೆ.

3. ಕೊಜಿಪ್ಪಾರ ಜಲಪಾತಕ್ಕೆ ಸಾಕ್ಷಿಯಾಗಿ: ಪ್ರಕೃತಿಯನ್ನು ಅತ್ಯುತ್ತಮವಾಗಿ ಅನುಭವಿಸಲು ಬಯಸುವ ಹಾಗಿದ್ದಲ್ಲಿ ಇದು ಪ್ರಶಸ್ತ ಸ್ಥಳವಾಗಿದೆ! ಈ ಅದ್ಭುತ ಜಲಪಾತಕ್ಕೆ ತೆರಳಲು ಚಾರಣ ಮಾಡಿ, ಮತ್ತು ಹಚ್ಚ ಹಸಿರಿನಿಂದ ಸುತ್ತುವರಿದ ಜಲಪಾತದ ಜೊತೆಗೆ ಅದ್ಭುತ ವನಸಿರಿಯನ್ನು ವೀಕ್ಷಿಸಿ.

4. ಮಾನಂಚಿರಾ ಚೌಕದಲ್ಲಿ ಸಮಯ ಕಳೆಯಿರಿ: ಪುರಾತನ ಚರ್ಚುಗಳು ಮತ್ತು ದೇವಾಲಯಗಳಿಂದ ಹಿಡಿದು ಮಾನವ ನಿರ್ಮಿತ ಕೊಳದವರೆಗೆ, ಕೋಯಿಕ್ಕೋಡ್ ನ ಮನಂಚಿರಾ ಚೌಕವು ಎಲ್ಲರಿಗೂ ಮನ್​ಪಸಂದ್​ ಸ್ಥಳವಾಗಿದೆ. ನೀವು ಸ್ವಲ್ಪ ಬಿಡುವಿನ ಸಮಯವನ್ನು ಕಳೆಯಲು ಬಯಸಿದರೆ, ನಗರದ ಈ ಪ್ರಮುಖ ಆಕರ್ಷಣೆಯನ್ನು ಅನ್ವೇಷಿಸಲು ಮರೆಯಬೇಡಿ.

5. SM ಸ್ಟ್ರೀಟ್‌ನಲ್ಲಿ ಶಾಪಿಂಗ್ ಶಾಪಿಂಗ್… ಸಣ್ಣಪುಟ್ಟ ಚಿಲ್ಲರೆ ಮಳಿಗೆಗಳು ನಿಮ್ಮ ಮನವನ್ನು ತಣಿಸುತ್ತದೆ. SM ಸ್ಟ್ರೀಟ್ ನಿಮ್ಮನ್ನು ಮೋಡಿಮಾಡುವುದು ಖಚಿತ. ಹೆಸರಾಂತ ಹಲ್ವಾದಿಂದ ಹಿಡಿದು ವಿಶೇಷ ಜವಳಿ ವರೆಗೆ, ಈ ಮಾರುಕಟ್ಟೆಯು ಶಾಪಿಂಗ್ ಪ್ರಿಯರಿಗಾಗಿ ವ್ಯಾಪಕ ಶ್ರೇಣಿಯ ವಸ್ತುಗಳಸನ್ನು ನೀಡುತ್ತದೆ.

Also Read: Political Crime Thriller – ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

ಮಾನವೀಯತೆ, ಸೌಹಾರ್ದತೆ, ಬಲವಾದ ನ್ಯಾಯ ಪ್ರಜ್ಞೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಕೂಡಿದ ಆತ್ಮವುಳ್ಳ ನಗರ ಕೋಯಿಕ್ಕೋಡ್. ಈ ಮೂಲ ಮೌಲ್ಯಗಳು ಕೋಯಿಕ್ಕೋಡ್ ನ ರೋಮಾಂಚಕ ಕಲೆಗೆ ಜನ್ಮ ನೀಡಿವೆ ಎಂದು ರಾಜ್ಯ ಸ್ಥಳೀಯ ಆಡಳಿತ ಇಲಾಖೆ ಸಚಿವ ಎಂಬಿ ರಾಜೇಶ್ ವ್ಯಾಖ್ಯಾನಿಸಿರುವುದು ಕೋಯಿಕ್ಕೋಡ್ ನಗರದ ಮಹತ್ವವನ್ನು ಸಾರುತ್ತದೆ.

ಕೋಲ್ಕತ್ತಾದಂತಹ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿರುವ ನಗರಗಳನ್ನು ಸೋಲಿಸಿ, ಯುನೆಸ್ಕೋದಿಂದ ‘ಸಾಹಿತ್ಯ ನಗರ’ ಟ್ಯಾಗ್ ಅನ್ನು ಪಡೆಯುವಲ್ಲಿ ಕೋಯಿಕ್ಕೋಡ್ ಯಶಸ್ಸು ಸಾಧಿಸಿರುವುದು ಗಮನಾರ್ಹವಾಗಿದೆ.

ದಿವಂಗತ ಎಸ್ ಕೆ ಪೊಟ್ಟಕ್ಕಾಡ್ ಮತ್ತು ವೈಕೊಮ್ ಮುಹಮ್ಮದ್ ಬಶೀರ್ ಅವರಂತಹ ಸಾಹಿತ್ಯಿಕ ದಿಗ್ಗಜರಿಗೆ ಹೆಸರುವಾಸಿಯಾದ ಕೋಯಿಕ್ಕೋಡ್ ‘ಸಾಹಿತ್ಯ ನಗರ’ ದಿನವನ್ನು ಮುಂದೆ ಪ್ರತಿ ವರ್ಷ ಜೂನ್ 23 ರಂದು ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸಾಂಕೇತಿಕವಾಗಿದೆ. ಈ ದಿನ ಆರು ವಿಭಾಗಗಳಲ್ಲಿ ವಿಶೇಷ ಪ್ರಶಸ್ತಿಗಳನ್ನು ಪ್ರಕಟಿಸಲಾಗುವುದು ಎಂದು ಯುನೆಸ್ಕೋದ ‘ಸಾಹಿತ್ಯ ನಗರ’ದ ಲೋಗೋವನ್ನು ಅನಾವರಣಗೊಳಿಸಿದ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ತಿಳಿಸಿದ್ದಾರೆ.

ಬ್ರಿಟಿಷರ ಆಳ್ವಿಕೆಯಲ್ಲಿ ಕ್ಯಾಲಿಕಟ್ ಎಂದೂ ಕರೆಯಲ್ಪಡುವ ಕೋಯಿಕ್ಕೋಡ್ ಅನ್ನು ಒಮ್ಮೆ ಝಮೋರಿನ್ಸ್ ನಗರ ಎಂದು ಕರೆಯಲಾಗುತ್ತಿತ್ತು, ಇದು ಶತಮಾನಗಳ ಹಿಂದೆ ಪರ್ಷಿಯನ್ನರು, ಅರಬ್ಬರು, ಚೈನೀಸ್ ಮತ್ತು ಅಂತಿಮವಾಗಿ ಯುರೋಪಿಯನ್ನರಂತಹ ಅನೇಕ ವಿದೇಶಿಯರಿಗೆ ಕರಾವಳಿಯ ಹೆಬ್ಬಾಗಿಲು ಆಗಿತ್ತು.

ಕೇರಳದ ಸ್ವಾತಂತ್ರ್ಯ ಚಳವಳಿಯ ತೊಟ್ಟಿಲು, ಕೋಯಿಕ್ಕೋಡ್ ಹಲವು ದಶಕಗಳಿಂದ ಪುಸ್ತಕೋತ್ಸವಗಳಿಗೆ ಪ್ರಮುಖ ತಾಣವಾಗಿದೆ. ಕೋಯಿಕ್ಕೋಡ್ ನಗರದಲ್ಲಿ 500 ಕ್ಕೂ ಹೆಚ್ಚು ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಹಲವಾರು ದಶಕಗಳಿಂದ ಮಲಯಾಳಂನ ಪ್ರಸಿದ್ಧ ಬರಹಗಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂ ಟಿ ವಾಸುದೇವನ್ ನಾಯರ್ ಅವರ ಸಾಹಿತ್ಯಿಕ ಚಟುವಟಿಕೆಗಳ ಆಧಾರವಾಗಿದೆ.

ಹೊಸದಾಗಿ ಗೊತ್ತುಪಡಿಸಿದ ಸೃಜನಾತ್ಮಕ ನಗರಗಳನ್ನು ಪೋರ್ಚುಗಲ್‌ನ ಬ್ರಾಗಾದಲ್ಲಿ 2024 ಇದೇ ಜುಲೈ ತಿಂಗಳಲ್ಲಿ ನಡೆಯುವ UCCN ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?