Analysis: ವಿಧಾನಮಂಡಲ ಉದ್ದೇಶಿಸಿ ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಭಾಷಣ: ವಿರೋಧ ಪಕ್ಷ ಬಹಿಷ್ಕಾರ ಎಷ್ಟು ಸರಿ?

ಲೋಕಸಭೆಯ ಸ್ಪೀಕರ್​ ಓಂ​ ಬಿರ್ಲಾ ವಿಧಾನಸಭೆಯಲ್ಲಿ ಮಾತನಾಡಿದ್ದು ಅಸಂಸದೀಯ ನಡವಳಿಕೆ ಎಂದಿದೆ ಕಾಂಗ್ರೆಸ್​. ಇದು ತಪ್ಪು ನಡವಳಿಕೆಯೇ? ಈ ಹಿಂದೆಯೂ ಇಂಥ ಬೆಳವಣಿಗೆ ನಡೆದಿತ್ತೆ? ವಿಶ್ಲೇಷಣೆ ಇಲ್ಲಿದೆ.

Analysis: ವಿಧಾನಮಂಡಲ ಉದ್ದೇಶಿಸಿ ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಭಾಷಣ: ವಿರೋಧ ಪಕ್ಷ ಬಹಿಷ್ಕಾರ ಎಷ್ಟು ಸರಿ?
ಓಂ ಬಿರ್ಲಾ ಮತ್ತು ಡಿ.ಕೆ.ಶಿವಕುಮಾರ್
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 24, 2021 | 6:47 PM

ರಾಜಕೀಯ ಪಕ್ಷಗಳಿಗೆ ಜಾಣ ಮರೆವು ಹೊಸದಲ್ಲ. ಇದು ಪಕ್ಷಾತೀತ ಮತ್ತು ಕಾಲಾತೀತ. ವಿರೋಧ ಪಕ್ಷದ ಸ್ಥಾನಕ್ಕೆ ಬಂದಾಗ, ಒಮ್ಮಿಂದೊಮ್ಮೆಲೆ ಸಾಧುವಾಗುವ ರಾಜಕೀಯ ಪಕ್ಷಗಳು ಆಡಳಿತದಲ್ಲಿರುವ ಪಕ್ಷದ ನಿಲುವನ್ನು ವಿರೋಧಿಸುವುದು ಮತ್ತು ತಮ್ಮ ನಿಲುವನ್ನು ಬೌದ್ಧಿಕಗೊಳಿಸಿ (Intellectualise) ಜನರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುವುದು ಹೊಸದಲ್ಲ. ಬಿಜೆಪಿ ಈ ಹಿಂದೆ ಮಾಡಿತ್ತು ಅದನ್ನು ಈಗ ಕಾಂಗ್ರೆಸ್ ಮಾಡುತ್ತಿದೆ.

ಈಗ ಈ ವಿಚಾರ ಏಕೆ? ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಇಂದು (ಸೆ.24) ಮಾತನಾಡಿದ್ದರ ಕುರಿತಾಗಿ ಇಂದು ಚರ್ಚೆ ನಡೆದಿದೆ. ಇಂದು ಓಂ ಬಿರ್ಲಾ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, ‘ಪ್ರಜಾಪ್ರಭುತ್ವ: ಸಂಸದೀಯ ಮೌಲ್ಯಗಳ ರಕ್ಷಣೆ’ ಎಂಬ ವಿಚಾರದ ಕುರಿತಾಗಿ ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದು, ಅದನ್ನು ಕಾಂಗ್ರೆಸ್​ ಬಹಿಷ್ಕರಿಸಿತ್ತು. ಬಿರ್ಲಾ ಅವರ ಭಾಷಣದಲ್ಲಿ ಯಾವ ರಾಜಕೀಯ ಇರಲಿಲ್ಲ.

ಬಿರ್ಲಾ ಭೇಟಿಯ ಕುರಿತು ಕಾಂಗ್ರೆಸ್ ಪಕ್ಷ, ಅದರಲ್ಲಿಯೂ ಮುಖ್ಯವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಡಿ.ಕೆ. ಶಿವಕುಮಾರ್ ಬಹಳ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ತಮ್ಮ ಹೇಳಿಕೆ ಪ್ರಸಾರವಾಗಬೇಕೆಂಬ ಕಾರಣಕ್ಕೋ ಏನೋ ಕನ್ನಡವೊಂದೇ ಅಲ್ಲ ಇಂಗ್ಲೀಷಿನಲ್ಲಿ ಕೂಡ ಡಿಕೆಶಿ ಹೇಳಿಕೆ ನೀಡಿದ್ದರು. ಓಂ​ ಬಿರ್ಲಾ ಅವರು ವಿಧಾನಸಭೆಯೊಳಗೆ ಬಂದಿದ್ದು ಬಹಳ ದೊಡ್ಡ ಅಪರಾಧವಾಗಿದೆ ಎನ್ನುವ ರೀತಿಯಲ್ಲಿ ವಿರೋಧ ಪಕ್ಷದ ನಾಯಕ, ಸಿದ್ಧರಾಮಯ್ಯ ಟ್ವೀಟ್​ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಕಾಂಗ್ರೆಸ್ ನಾಯಕರ ವಾದ ಇಷ್ಟೇ; ಜಂಟಿ ಅಧಿವೇಶನವನ್ನು ರಾಷ್ಟ್ರಪತಿ ಅಥವಾ ರಾಜ್ಯಪಾಲರು ಉದ್ದೇಶಿಸಿ ಮಾತನಾಡಬೇಕು. ಲೋಕಸಭಾ ಸ್ಪೀಕರ್​ಗೆ ಈ ರೀತಿ ಮಾಡುವ ಅಧಿಕಾರ ಇಲ್ಲ. ಇದು ಅಂಸಸದೀಯ. ಈ ಹಿಂದೆ ಈ ರೀತಿ ಆಗಿಲ್ಲ, ಈ ಬಾರಿ ಎಲ್ಲ ಸಂಪ್ರದಾಯ ಗಾಳಿಗೆ ತೂರಿದ್ದರಿಂದ ತಾವು ಸದನವನ್ನು ಬಹಿಷ್ಕರಿಸುತ್ತೇವೆ ಎಂದು ಹೇಳುತ್ತ ಕಾಂಗ್ರೆಸ್ ನಾಯಕರು ಜಂಟಿ ಅಧಿವೇಶನವನ್ನು ಬಹಿಷ್ಕರಿಸಿದರು.

ಸಂಸದೀಯ ನೀತಿ ನಿಯಮ ಮತ್ತು ನಡವಳಿಕೆ ತಿಳಿದುಕೊಂಡವರು ಕಾಂಗ್ರೆಸ್​ನಲ್ಲಿ ಜಾಸ್ತಿ ಇದ್ದಾರೆ. ಹಾಗೆ ನೋಡಿದರೆ ಬಿಜೆಪಿಯಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಈ ಕುರಿತು ಆಳವಾಗಿ ತಿಳಿದುಕೊಂಡಿದ್ದಾರೆ. ಕಾಂಗ್ರೆಸ್ ಇತಿಹಾಸವನ್ನು ಮರೆಯಿತೇ? ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭೆಯ ಪ್ರಾಂಗಣದಲ್ಲಿ ಈ ಹಿಂದೆ ಅನೇಕ ಐತಿಹಾಸಿಕ ಸಭೆಗಳು ನಡೆದಿವೆ. ಇದು ಮಾಜೀ ಸಭಾಧ್ಯಕ್ಷ, ಕೆ.ಆರ್. ರಮೇಶ್ ಕುಮಾರ್ ಅವರಿಗೆ ಗೊತ್ತಿಲ್ಲ ಅಂತಲ್ಲ. ತೀರಾ ಇತ್ತೀಚಿನ ಉದಾಹರಣೆಯನ್ನು ನೋಡೋಣ.

2012ರಲ್ಲಿ, ಕರ್ನಾಟಕ ವಿಧಾನಸಭೆಯ ವಜ್ರ ಮಹೋತ್ಸವ ಸಂದರ್ಭದಲ್ಲಿ ಉಭಯ ಸದನಗಳ ಜಂಟಿ ಅಧಿವೇಶನ ನಡೆದಿತ್ತು. ಆಗ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ದಿಕ್ಸೂಚಿ ಭಾಷಣವನ್ನು ಮಾಡಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಅಂದು ಆ ಸಭೆಯಲ್ಲಿ ಭಾಗವಹಿಸಿತ್ತು. ಆ ಸಂದರ್ಭದಲ್ಲಿ ಕೂಡ ಒಂದು ವಿಚಾರ ಸುದೀರ್ಘವಾಗಿ ಚರ್ಚೆ ಆಗಿತ್ತು.

ಸದಸ್ಯರಲ್ಲದವರು ವಿಧಾನಸಭಾ ಪ್ರಾಂಗಣಕ್ಕೆ ಬರಬಹುದೇ? ಈ ರೀತಿ ಭಾಷಣ ಮಾಡಬಹುದೇ? ಆಗ ನಡೆದ ಆ ಸಭೆಯನ್ನು ವಿಧಾನಸಭಾ ವಿಶೇಷ ಅಧಿವೇಶನ ಎಂದು ಕರೆಯಲಾಗಿತ್ತು. ಅನೇಕ ಹಿಂದಿನ ಸದಸ್ಯರನ್ನು, ಮಾಜಿ ಮುಖ್ಯಮಂತ್ರಿಗಳನ್ನು ಕರೆದು ಆ ಪ್ರಾಂಗಣದಲ್ಲಿ ಕುಳ್ಳಿರಿಸಿ ಆಮೇಲೆ ಸನ್ಮಾನಿಸಲಾಗಿತ್ತು. ಇದರ ಅರ್ಥ ಇಷ್ಟೇ: ಅಧಿವೇಶನ ಇಲ್ಲದಿರುವ ಸಂದರ್ಭದಲ್ಲಿ ಈ ಪ್ರಾಂಗಣಕ್ಕೆ ಯಾರು ಬೇಕಾದರೂ ಬರಬಹುದು. ಇದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ ಅಂತಲ್ಲ.

ಬಿಜೆಪಿ ನಾಯಕರು ತಪ್ಪು ಮಾಡಿಲ್ಲವೇ? ಒಂದು ಸಣ್ಣ ತಪ್ಪನ್ನು ಬಿಜೆಪಿ ನಾಯಕರು ಮಾಡಿದ್ದು ನಿಜ. ಇಂದು ನಡೆದ ಸಭೆಯನ್ನು ಪ್ರಾಯಶಃ ‘ಜಂಟಿ ಅಧಿವೇಶನ’ ಎಂದು ಕರೆದಿದ್ದು ತಪ್ಪಿರಬಹುದು. ಈ ಹೆಸರನ್ನು ವಿಶೇಷ ಜಂಟಿ ಸಭೆ ಎಂದೋ ಅಥವಾ ಬೇರೆ ಏನಾದರೂ ಹೆಸರಿನಲ್ಲಿ ಕರೆಯಬಹುದಿತ್ತು. ಸರಕಾರ ಮತ್ತು ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿಯ ತಪ್ಪನ್ನು ಆಡಳಿತ ಪಕ್ಷದ ಅನನುಭವ ಎಂದು ಪರಿಗಣಿಸುತ್ತಾರೆ. ಬಿಜೆಪಿ ಮತ್ತೊಮ್ಮೆ ಒಂದು ತಪ್ಪು ಮಾಡಿದ್ದು ನಿಜ. ಹಾಗಂತ ಕಾಂಗ್ರೆಸ್ ಮಾಡಿದ್ದು ಸರಿಯೇ? ವಿರೋಧ ಪಕ್ಷದ ರಾಜಕಾರಣ ನಡೆಯುವುದು ಹೀಗೇನೆ. ಕಾಂಗ್ರೆಸ್ ನಾಯಕರು​ ತಮ್ಮ ಈ ನಡೆಗೆ ಕೊಡುವ ನೈತಿಕ ಲೇಪವನ್ನು ಕೂಡ ರಾಜಕೀಯದ ಭಾಗವಾಗಿ ಜನ ನೋಡಿದರೆ ಕಾಂಗ್ರೆಸ್​ಗೆ ಈ ವಿಚಾರದಲ್ಲಿ ಯಾವ ಲಾಭವೂ ಆಗದು.

ಇದನ್ನೂ ಓದಿ: Om Birla: ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಲು ಶ್ರಮಿಸಿದ ಕನ್ನಡಿಗರಿಗೆ ನಾನು ಕೃತಜ್ಞ: ವಿಧಾನಮಂಡಲದಲ್ಲಿ ಓಂ ಬಿರ್ಲಾ

ಇದನ್ನೂ ಓದಿ: ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಿ ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಪಾಠ: ಸಿದ್ದರಾಮಯ್ಯ ಆಕ್ರೋಶ

(Congress boycotts joint session of Karnataka legislature and kicks up a debate on high moral ground about Lok Sabha speaker Om Birla addressing the joint session)

Published On - 6:19 pm, Fri, 24 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ