ಹಸಿರು ಸೀರೆಯುಟ್ಟು ನಿಂತ ಉತ್ತರ ಕರ್ನಾಟಕದ ಸಹ್ಯಾದ್ರಿ; ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಪ್ಪತ್ತಗುಡ್ಡದ ಸೊಬಗು

ಅದು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತ ಹೊಂದಿದ ಔಷಧಿಯ ಬೀಡು. ತನ್ನ ಸೌಂದರ್ಯ ಮೈತುಂಬಿಕೊಂಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲಿ ನಿಂತರೆ ಸಾಕು ಆಗಸವೇ ನಮ್ಮ ಕೈಯಲ್ಲಿ ಎಂಬಂತೆ ಭಾಸವಾಗುತ್ತದೆ. ಆ ಸೌಂದರ್ಯ ಲೋಕಕ್ಕೆ ಎಂಟ್ರಿ ಕೊಟ್ಟರೆ ಸಾಕು ನಾವು ಮಲೆನಾಡಿನ ಸೆರಗಿನಲ್ಲಿ ಇದ್ದೆವೆನೋ ಎನ್ನುವ ಭಾವ ಮುಡುತ್ತದೆ. ಅದರಲ್ಲೂ ಡ್ರೋನ್ ಕ್ಯಾಮರಾ ಕಣ್ಣಲ್ಲಿ ಕಪ್ಪತ್ತಗುಡ್ಡವನ್ನು ನೋಡೋದು ಕಣ್ಣಿಗೆ ಹಬ್ಬ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 03, 2024 | 7:56 PM

 ಉತ್ತರ ಕರ್ನಾಟಕದ ಸಹ್ಯಾದ್ರಿಯೆಂದೇ ಹೆಸರಾಗಿರುವ ಈ ಕಪ್ಪತಗುಡ್ಡವೀಗ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬೆಳ್ಳಂಬೆಳಗ್ಗೆಯೇ ಕಪ್ಪತಗುಡ್ಡಕ್ಕೆ ಮುತ್ತಿಡುವ ಮೋಡಗಳು, ಹೊಗೆಯಂತಿರುವ ಮೋಡಗಳ ನಡುನಡುವೆ ಇಣುಕಿ ನೋಡುವ ಹಸಿರ ಗುಡ್ಡ.

1 / 6
ಇದನ್ನು ನೋಡುತ್ತಿದ್ದರೆ ಎಲ್ಲರಿಗೂ ಸಹ ಇದು ಕಪ್ಪತಗುಡ್ಡಾನ ಎಂದು ಅನುಮಾನ ಬರುವುದು ಸಹಜ. ಗದಗ ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳ ಸುಮಾರು 33 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮೈಚಾಚಿಕೊಂಡಿರುವ ಕಪ್ಪತುಡ್ಡದ ಸೌಂದರ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಅದರಲ್ಲೂ ಡ್ರೋನ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಈ ಸೌಂದರ್ಯವನ್ನು ನೋಡೋದು ಕಣ್ಣಿಗೆ ಹಬ್ಬ.

2 / 6
ಕಪ್ಪತ್ತಗುಡ್ಡ ಪ್ರದೇಶದಲ್ಲಿ ಬೀಸುವ ಗಾಳಿ ದೇಶದಲ್ಲೇ ಶುದ್ಧ ಗಾಳಿ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಕಪ್ಪತ್ತಗುಡ್ಡ ಸೌಂದರ್ಯ ಸವಿಯಲು ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಒಮ್ಮೆ ಕಪ್ಪತ್ತಗುಡ್ಡದೊಳಗೆ ಹೋದರೆ ಸಾಕು ಅಲ್ಲಿಂದ ಹೊರಗೆ ಬರುವುದಕ್ಕೆ ಮನಸೆ ಆಗುವುದಿಲ್ಲ.

3 / 6
ಅಪಾರ ಔಷಧೀಯ ಸಸ್ಯಗಳೇ ತನ್ನೊಡಲಿನಲ್ಲಿ ಇಟ್ಟುಕೊಂಡು ಶುದ್ಧ ಗಾಳಿಯನ್ನು ನೀಡುತ್ತಿದೆ. ಮುಂಜಾನೆಯ ಸಮಯದಲ್ಲಿ ಚುಮು ಚುಮು ಚಳಿ, ಇಬ್ಬನಿಯ ಹನಿಗಳು, ಆ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಅಂದಹಾಗೇ ಗದಗ ಅರಣ್ಯ ಇಲಾಖೆ ಅಧಿಕಾರಿ ಆರ್​ಎಫ್​ಓ ಮಂಜುನಾಥ ಮೇಗಲನಿಯವರು, ತಮ್ಮ ಡ್ರೋನ ಕ್ಯಾಮೆರಾದಲ್ಲಿ ಕಪ್ಪತ್ತಗುಡ್ಡದ ಸೌಂದರ್ಯವನ್ನು ಸೆರೆ ಹಿಡದಿದ್ದಾರೆ.

4 / 6
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಭೂ ತಾಯಿಯ ರಮಣೀಯ ದೃಶ್ಯವನ್ನು ನೋಡುವುದು ಕಣ್ಣಿಗೆ ಹಬ್ಬವೇ ಸರಿ. ಕಳೆದ ಎರಡು ವರ್ಷಗಳಿಂದ ಕಪ್ಪತ್ತಗುಡ್ಡದಲ್ಲಿ ಟ್ರೆಕ್ಕಿಂಗ್ ಆರಂಭ ಮಾಡಲಾಗಿದ್ದು, ಟ್ರೆಕ್ಕಿಂಗ್ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

5 / 6
ಬರದನಾಡು, ಬಯಲು ಸೀಮೆಯಲ್ಲಿ ಮಲೆನಾಡಿನ ವೈಭವ ಕಾಣುತ್ತಿದೆ. ಅದರಲ್ಲೂ ಡ್ರೋನ್ ಕ್ಯಾಮೆರಾದಲಿ ಕಪ್ಪತ್ತಗುಡ್ಡದ ಸೌಂದರ್ಯ ನೋಡುವುದು ಕಣ್ಣಿಗೆ ಹಬ್ಬವೇ ಸರಿ. ಕಪ್ಪತ್ತಗುಡ್ಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದರಿಂದಲೇ ಕಪ್ಪತ್ತಗುಡ್ಡ ಸೌಂದರ್ಯ ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ನೀವು ಒಂದು ಸಾರಿ ಕಪ್ಪತ್ತಗುಡ್ಡದ ಸೌಂದರ್ಯ ಸವಿಯಲು ಮಿಸ್ ಮಾಡದಿರಿ.

6 / 6
Follow us