ಬೆಣ್ಣೆನಗರಿ ದಾವಣಗೆರೆಯಲ್ಲೊಂದು ವಿಶೇಷ ಜಾತ್ರೆ: ಸಮಾನತೆಯ ಪ್ರತಿರೂಪ, ಸ್ತ್ರೀ ಕೈ ಹಾಕಿದ್ರೆ ಮಾತ್ರ ಇಲ್ಲಿ ತೇರು ಮುಂದೆ ಸಾಗೋದು

ದಾವಣಗೆರೆ ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಕರಿಬಸವೇಶ್ವರ ಗದ್ದಿಗೆ ಇದೆ. ಈ ಗದ್ದಿಗೆಗೆ ಪರಮೇಶ್ವರ ಸ್ವಾಮೀಜಿಗಳು ಬಂದ ಬಳಿಕ ಇಲ್ಲೊಂದು ಸಾಮಾಜಿಕ ಕ್ರಾಂತಿಯಾಗಿದೆ.

TV9 Web
| Updated By: ಆಯೇಷಾ ಬಾನು

Updated on: Dec 21, 2022 | 3:45 PM

ಮಹಿಳೆಯರಿಂದಲೇ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ದಾವಣಗೆರೆಯಲ್ಲೊಂದು ಜಾತ್ರೆ ನಡೆಯುತ್ತೆ. ವಿಶೇಷ ಅಂದ್ರೆ ಮಹಿಳೆಯರು ಬಂದು ಹಗ್ಗ ಹಿಡಿದರೇ ಮಾತ್ರ ಆ ದೇವರ ರಥೋತ್ಸವ ಮುಂದೆ ಸಾಗೋದು.

A special unique fair in Davangere only women performs pooja in the temple Davanagere karibasaveshwara swamy

1 / 7
ದಾವಣಗೆರೆ ತಾಲೂಕಿನ ಯರಗುಂಟೆ ಗ್ರಾಮದಲ್ಲಿ  ಕರಿಬಸವೇಶ್ವರ ಗದ್ದಿಗೆ ಇದೆ. ಈ ಗದ್ದಿಗೆಗೆ ಪರಮೇಶ್ವರ  ಸ್ವಾಮೀಜಿಗಳು ಬಂದ ಬಳಿಕ ಇಲ್ಲೊಂದು ಸಾಮಾಜಿಕ ಕ್ರಾಂತಿಯಾಗಿದೆ. ಅದೇನಪ್ಪ ಅಂದ್ರೆ ಇಲ್ಲಿ ನಡೆಯುವ  ಪ್ರತಿಯೊಂದು  ಧಾರ್ಮಿಕ ಕಾರ್ಯಕ್ರಮದಲ್ಲಿ  ಮಹಿಳೆಯರಿಗೆ ಸಮಪಾಲು ನೀಡಿದ್ದಾರೆ.

2 / 7
ವಿಶೇಷ ಅಂದ್ರೆ ಇಲ್ಲಿನ ರಥೋತ್ಸವ ನಡೆಯುವುದು  ಮಹಿಳೆಯರಿಗಾಗಿ. ಮಹಿಳೆಯರೇ ರಥ ಎಳೆದುಕೊಂಡು ಹೋಗಬೇಕು. ಹೀಗಾಗಿ ಇದಕ್ಕೆ ಮಹಿಳಾ ಯಾತ್ರೆ  ಎಂದೇ ಪ್ರಸಿದ್ಧಿ ಪಡೆದಿದೆ.

3 / 7
ಎಲ್ಲಿ ನೋಡಿದರಲ್ಲಿ ಸಂಭ್ರಮದಲ್ಲಿ ಮಹಿಳೆಯರು ಮುಳುಗಿರುತ್ತಾರೆ. ಮಹಿಳೆಯರೇ ಇಲ್ಲಿ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಾರೆ.

4 / 7
ಕಳೆದ 11 ವರ್ಷಗಳಿಂದ ಈ ರಥತ್ಸೋವ ನಡೆಯುತ್ತಿದೆ. ವಾರದಲ್ಲಿ ಎರಡು ದಿನಗಳ ಕಾಲ ಇಲ್ಲಿ ಪೂಜೆ  ಮತ್ತು ಅಪ್ಪಣೆ ನಡೆಯುತ್ತೆ. ಅಂದ್ರೆ ಮನೆಯಲ್ಲಿ ಯಾವುದೇ ತೊಂದರೆಗಳಿದ್ದರೇ ಅದಕ್ಕೆ ಪರಿಹಾರ ಹೇಳುವ ಕಾಯಕ ಇಲ್ಲಿದೆ.

5 / 7
ಇದೇ ಪರಮೇಶ್ವರ ಸ್ವಾಮೀಜಿಗಳ ಮನಸ್ಸಿನಲ್ಲಿ  ಕರಿಬಸಜ್ಜಯ್ಯ  ಬಂದು ಸಂದೇಶ ನೀಡುತ್ತಾರೆ ಎಂಬುದು ಜನರ ನಂಬಿಕೆ. ಈ ಜಾತ್ರೆಯ ದಿನ ಗ್ರಾಮದ ತುಂಬೆಲ್ಲಾ ಸಡಗರ ತುಂಬಿರುತ್ತೆ.

6 / 7
ಧನುರ್ಮಾಸ ಬಂದ್ರೆ ಸಾಕು ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಮಹಿಳೆಯರು ಈ ಪುಣ್ಯ ಕ್ಷೇತ್ರಕ್ಕೆ ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಮಾನತೆಯ  ಪ್ರತಿರೂಪ ಎಂಬಂತೆ ಇಲ್ಲಿ ನಡೆಯೋ ರಥೋತ್ಸವ ನಿಜಕ್ಕೂ ಭಕ್ತರ ಮನಸೆಳೆದಿದೆ.

7 / 7
Follow us