Abhishek Aviva Sangeet Ceremony: ಅದ್ದೂರಿಯಾಗಿ ನಡೆಯಿತು ಅಭಿಷೇಕ್-ಅವಿವಾ ಸಂಗೀತ್ ಕಾರ್ಯಕ್ರಮ; ಯಶ್, ಜಯಪ್ರದಾ, ಪ್ರಭುದೇವ ಮುಂತಾದವರು ಭಾಗಿ
Abhishek Ambareesh | Aviva Bidapa: ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಂಗೀತ್ ಕಾರ್ಯಕ್ರಮ ನಡೆಸಲಾಯಿತು. ಅವಿವಾ ಬಿಡಪ ಅವರ ತಂದೆ ಪ್ರಸಾದ್ ಬಿಡಪ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಆ ಫೋಟೋಗಳು ಲಭ್ಯವಾಗಿವೆ.
Updated on: Jun 11, 2023 | 7:17 AM

ಜೂನ್ 5ರಂದು ವಿವಾಹ ಆಗಿದ್ದ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ ಅವರ ಸಂಗೀತ್ ಕಾರ್ಯಕ್ರಮ ಶನಿವಾರ (ಜೂನ್ 10) ರಾತ್ರಿ ನಡೆದಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಂಗೀತ್ ಕಾರ್ಯಕ್ರಮ ನಡೆಸಲಾಯಿತು. ಅವಿವಾ ಬಿಡಪ ಅವರ ತಂದೆ ಪ್ರಸಾದ್ ಬಿಡಪ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಆ ಫೋಟೋಗಳು ಲಭ್ಯವಾಗಿವೆ.

ತುಂಬ ಗ್ರ್ಯಾಂಡ್ ಆಗಿ ಸಂಗೀತ್ ಕಾರ್ಯಕ್ರಮ ಜರುಗಿದೆ. ಸ್ಯಾಂಡಲ್ವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ.

ಖ್ಯಾತ ಕಲಾವಿದರಾದ ಯಶ್, ರಿಷಬ್ ಶೆಟ್ಟಿ, ಜಯಪ್ರದಾ, ರಮ್ಯಾಕೃಷ್ಣ, ಶಿವರಾಜ್ಕುಮಾರ್, ಮಾಲಾಶ್ರೀ, ಗುರುಕಿರಣ್, ಭಾರತಿ ವಿಷ್ಣುವರ್ಧನ್ ಪ್ರಭುದೇವ, ಮಂಚು ಮನೋಜ್ ಸೇರಿದಂತೆ ಹಲವರು ಸಂಗೀತ್ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.

ಜೂನ್ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮ ಜರುಗಿತ್ತು. ಅದ್ದಕ್ಕೂ ಕೂಡ ಅನೇಕ ಸೆಲೆಬ್ರಿಟಿಗಳು ಸಾಕ್ಷಿ ಆಗಿದ್ದರು.



















