ಪತ್ನಿ, ಮಗನೊಡನೆ ತಿರುಪತಿ, ಕಾಳಹಸ್ತಿ ದೇವಾಲಯಗಳಿಗೆ ದರ್ಶನ್ ಭೇಟಿ

Updated on: Feb 09, 2024 | 9:28 PM

Darshan Family: ನಟ ದರ್ಶನ್ ತೂಗುದೀಪ್ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಜೊತೆ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

1 / 7
ನಟ ದರ್ಶನ್ ತೂಗುದೀಪ ಅವರು ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಪುತ್ರ ವಿನೀಶ್ ಜೊತೆ ತಿರುಪತಿ ಹಾಗೂ ಕಾಳಹಸ್ತಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

ನಟ ದರ್ಶನ್ ತೂಗುದೀಪ ಅವರು ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಪುತ್ರ ವಿನೀಶ್ ಜೊತೆ ತಿರುಪತಿ ಹಾಗೂ ಕಾಳಹಸ್ತಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

2 / 7

ದರ್ಶನ್​ರ ಹುಟ್ಟುಹಬ್ಬ ಹತ್ತಿರದಲ್ಲಿದ್ದು, ಜೊತೆಗೆ ಹೊಸ ಸಿನಿಮಾ ಸಹ ಪ್ರಾರಂಭವಾಗಲಿದೆ. ಇದರ ನಡುವೆ ಕುಟುಂಬದೊಡನೆ ದೇವಾಲಯಕ್ಕೆ ದರ್ಶನ್ ಭೇಟಿ ನೀಡಿದ್ದಾರೆ.

3 / 7

ಕುಟುಂಬ ಮಾತ್ರವೇ ಅಲ್ಲದೆ ಕೆಲವು ಗೆಳೆಯರನ್ನು ಸಹ ದರ್ಶನ್ ತಮ್ಮೊಟ್ಟಿಗೆ ಕರೆದೊಯ್ದಿದ್ದಾರೆ. ಎಂಎಲ್​ಎ ಸತೀಶ್ ರೆಡ್ಡಿ, ಸಚ್ಚಿದಾನಂದ ಅವರು ದರ್ಶನ್ ಜೊತೆಗಿದ್ದರು.

4 / 7

ದರ್ಶನ್ ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುವುದುಂಟು. ಈ ಹಿಂದೆ ‘ರಾಬರ್ಟ್’ ಸಿನಿಮಾ ಸಂದರ್ಭದಲ್ಲಿ ತಿರುಪತಿಗೆ ದರ್ಶನ್ ಭೇಟಿ ನೀಡಿದ್ದರು.

5 / 7

ಕೆಲ ದಿನಗಳ ಹಿಂದಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತೆ ಪವಿತ್ರಾ ಗೌಡ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಟೀಕೆ, ಮೂದಲಿಕೆ ನಡೆದಿತ್ತು.

6 / 7

ವಿವಾದವಾದ ಬೆನ್ನಲ್ಲೆ ಪವಿತ್ರಾ ಗೌಡ, ದರ್ಶನ್ ಜೊತೆಗಿನ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದರು. ಆದರೆ ಈಗ ದರ್ಶನ್, ಪತ್ನಿಯೊಟ್ಟಿಗೆ ದೇವಾಲಯಗಳಿಗೆ ಭೇಟಿ ನೀಡಿ ಪರೋಕ್ಷ ಸಂದೇಶ ರವಾನಿಸಿದಂತಿದೆ.

7 / 7

ದರ್ಶನ್ ಫೆಬ್ರವರಿ 17ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅದರ ಜೊತೆಗೆ ಅವರ ಹೊಸ ಸಿನಿಮಾ ‘ಡೆವಿಲ್’ ಸಹ ಪ್ರಾರಂಭವಾಗಲಿದೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us