
ನಟಿ ಆಲಿಯಾ ಭಟ್ ಅವರು ‘ಬ್ರಹ್ಮಾಸ್ತ್ರ’ ಸಿನಿಮಾದ ರಿಲೀಸ್ ಖುಷಿಯಲ್ಲಿ ಇದ್ದಾರೆ. ಒಂದು ವರ್ಗದ ಜನರು ಸಿನಿಮಾ ಅನ್ನು ಟೀಕೆ ಮಾಡುತ್ತಿದ್ದಾರೆ. ಆದರೆ, ಆಲಿಯಾ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಆಲಿಯಾ ಭಟ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ಅವರ ಬೇಬಿ ಬಂಪ್ ಹೈಲೈಟ್ ಆಗಿದೆ. ಈ ಫೋಟೋದ ಕಮೆಂಟ್ ಬಾಕ್ಸ್ನಲ್ಲಿ ಎಲ್ಲರೂ ಹಾರ್ಟ್ ಎಮೋಜಿಯನ್ನು ಪೋಸ್ಟ್ ಮಾಡುತ್ತಿದ್ದಾರೆ.

ಏಪ್ರಿಲ್ 14ರಂದು ಆಲಿಯಾ ಭಟ್ ಮದುವೆ ಆದರು. ಮದುವೆ ಆದ ಎರಡೂವರೆ ತಿಂಗಳಿಗೆ ತಾವು ಗರ್ಭಿಣಿ ಎಂದು ಘೋಷಿಸಿದರು.

ಈಗ ಆಲಿಯಾ ಭಟ್ಗೆ ಐದು ತಿಂಗಳು ತುಂಬುತ್ತಾ ಬಂದಿದೆ ಎನ್ನಲಾಗಿದೆ. ಇನ್ನು ನಾಲ್ಕು ತಿಂಗಳ ಒಳಗೆ ಕಪೂರ್ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಆಗಲಿದೆ.

ಆಲಿಯಾ ಭಟ್

ಆಲಿಯಾ ಭಟ್