ನಟಿ ಅನುಪಮಾ ಪರಮೇಶ್ವರನ್ ಅವರು ಸಖತ್ ಟ್ರೆಡಿಷನಲ್ ಆಗಿ ಫೋಟೋ ಹಂಚಿಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ ಅವರು ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ. ಇದರ ಜೊತೆ ಅವರು ಎದೆ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಹಳದಿ ಬಣ್ಣದ ಉಡುಗೆ ತೊಟ್ಟು, ಎದೆ ಭಾಗದಲ್ಲಿ ಹಾಕಿಸಿಕೊಂಡಿರುವ ಟ್ಯಾಟೂ ಕಾಣುವ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ ಅನುಪಮಾ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋಗೆ ಬಹುತೇಕರು ನೆಗೆಟಿವ್ ಕಮೆಂಟ್ ಹಾಕಿದ್ದಾರೆ. ‘ನಿಮ್ಮ ಮೇಲಿದ್ದ ಗೌರವ ಕಡಿಮೆ ಆಗುತ್ತಿದೆ’ ಎಂದು ಅನೇಕರು ಹೇಳಿದ್ದಾರೆ.
‘ನಿಜಕ್ಕೂ ಇದು ನೀವೇನಾ? ನಿಮ್ಮನ್ನು ಈ ರೀತಿ ನೋಡಲು ನಾವು ಇಷ್ಟಪಡಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಆದರೆ, ಅನುಪಮಾ ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ.
ಈ ಫೋಟೋಗೆ ಬರೋಬ್ಬರಿ 12 ಲಕ್ಷ ಲೈಕ್ಸ್ ಬಂದಿದೆ. ಒಂದು ವರ್ಗದ ಜನರಿಗೆ ಅನುಪಮಾ ಪರಮೇಶ್ವರನ್ ಟ್ಯಾಟೂ ಇಷ್ಟ ಆಗಿದೆ.
Published On - 8:55 am, Fri, 16 June 23