ನಟಿ ಕುಬ್ರಾ ಸೇಠ್ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಸಿನಿಮಾ ಮಾತ್ರವಲ್ಲದೆ ವೆಬ್ ಸೀರಿಸ್ ಲೋಕದಲ್ಲೂ ಕುಬ್ರಾ ಬೇಡಿಕೆ ಉಳಿಸಿಕೊಂಡಿದ್ದಾರೆ.
ಕುಬ್ರಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅಭಿಮಾನಿಗಳಿಗಾಗಿ ಆಗಾಗ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಇದರ ಜೊತೆಗೆ ಅವರು ಅಡಲ್ಟ್ ಜೋಕ್ಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ಕುಬ್ರಾ ಈಗ ವೆಕೇಶನ್ ತೆರಳಿದ್ದಾರೆ. ಅದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸಖತ್ ಹಾಟ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ಈ ರೀತಿಯ ಫೋಟೋಗಳನ್ನು ಹಂಚಿಕೊಂಡಾಗ ನೆಗೆಟಿವ್ ವಿಮರ್ಶೆಗಳು ಬರುತ್ತವೆ. ‘ಬಟ್ಟೆ ಹಾಕಿಕೊಳ್ಳಿ ಮೇಡಂ’ ಎಂದೆಲ್ಲ ಹೇಳುತ್ತಾರೆ. ಈ ಕಾರಣದಿಂದಲೇ ಕುಬ್ರಾ ಅವರು ಕಮೆಂಟ್ ಆಯ್ಕೆಯನ್ನು ಆಫ್ ಮಾಡಿದ್ದಾರೆ.
ಕುಬ್ರಾ ಟ್ರಿಪ್ ತೆರಳಿದ್ದು ಆಸ್ಟ್ರೇಲಿಯಾಗೆ. ಈ ಕಾರಣಕ್ಕೆ ಅವರು ಆಸ್ಟ್ರೇಲಿಯಾ ಪ್ರವಾಸೋದ್ಯಮಕ್ಕೆ ಧನ್ಯವಾದ ಹೇಳಿದ್ದಾರೆ. ಸಮುದ್ರದಲ್ಲಿ ಕಂಡ ತಿಮಿಂಗಿಲವನ್ನು ನೋಡಿ ಅವರು ಖುಷಿಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಕುಬ್ರಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011ರಲ್ಲಿ. ಸಲ್ಮಾನ್ ಖಾನ್ ನಟನೆಯ ‘ರೆಡಿ’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಅವರು ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿ ಗಮನ ಸೆಳೆದಿದ್ದಾರೆ.
2017ರಲ್ಲಿ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟರು ಕುಬ್ರಾ. ‘ಸೇಕ್ರೆಡ್ ಗೇಮ್ಸ್’ ವೆಬ್ ಸೀರಿಸ್ ಮೂಲಕ ಅವರು ಗಮನ ಸೆಳೆದರು. ಅವರು ಮಾಡಿದ್ದ ಕುಕೂ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು.
Published On - 2:34 pm, Sat, 19 August 23