Updated on: Aug 04, 2022 | 6:30 PM
‘ಲವ್ ಮಾಕ್ಟೇಲ್’ ಸಿನಿಮಾ ಮೂಲಕ ನಟಿ ಮಿಲನಾ ನಾಗರಾಜ್ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈಗ ಅವರಿಗೆ ಸ್ಯಾಂಡಲ್ವುಡ್ನಲ್ಲಿ ಹಲವು ಆಫರ್ಗಳು ಬರುತ್ತಿವೆ. ಒಂದು ವಿಚಾರಕ್ಕೆ ಅವರು ಸಖತ್ ಖುಷಿಯಾಗಿದ್ದಾರೆ.
ಇತ್ತೀಚೆಗೆ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಅವರದ್ದು ಅತಿಥಿ ಪಾತ್ರ. ಆದರೆ, ಇಡೀ ಚಿತ್ರಕ್ಕೆ ದೊಡ್ಡ ತಿರುವು ನೀಡುತ್ತದೆ. ಅವರ ಪಾತ್ರವನ್ನು ಪ್ರೇಕ್ಷಕರು ಸಖತ್ ಇಷ್ಟಪಟ್ಟಿದ್ದಾರೆ. ಇದು ಅವರ ಖುಷಿಯನ್ನು ಹೆಚ್ಚಿಸಿದೆ.
‘ವಿಕ್ರಾಂತ್ ರೋಣ’ ಪಾತ್ರದ ಗೆಟಪ್ನಲ್ಲಿ ಮಿಲನಾ ನಾಗರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಥಿಯೇಟರ್ಗೆ ಹೋಗಿ ಸಿನಿಮಾ ನೋಡಿ ಎಂದು ಅವರು ಕೋರಿದ್ದಾರೆ.
ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಕಳೆದ ವರ್ಷ ಬಾಳ ಬಂಧನಕ್ಕೆ ಒಳಗಾದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರ ನಟನೆಯ ‘ಲವ್ ಮಾಕ್ಟೇಲ್ 2’ ಈ ವರ್ಷದ ಆರಂಭದಲ್ಲಿ ತೆರೆಗೆ ಬಂದು ಗೆಲುವು ಕಂಡಿದೆ.