- Kannada News Photo gallery Actress Samantha Shares Smiling Photos On social media A head Of Khushi Movie release
ಸಖತ್ ಖುಷಿ ಖುಷಿಯಾಗಿದ್ದಾರೆ ಸಮಂತಾ; ಇದಕ್ಕೆ ಕಾರಣವೇನು?
ಸಮಂತಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಕೆಲವರು ಅವರ ನಟನೆಯನ್ನು ಇಷ್ಟಪಟ್ಟು ಅಭಿಮಾನಿ ಆದರೆ, ಇನ್ನೂ ಕೆಲವರು ಅವರ ಅಂದಕ್ಕೆ ಮರುಳಾಗಿದ್ದಾರೆ.ಸಮಂತಾ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ಖುಷಿ ಖುಷಿಯಾಗಿ ಪೋಸ್ ನೀಡಿ ಗಮನ ಸೆಳೆದಿದ್ದಾರೆ. ಇದಕ್ಕೆ ಕಾರಣ ಆಗಿರೋದು ‘ಖುಷಿ’ ಸಿನಿಮಾ.
Updated on: Aug 15, 2023 | 1:07 PM

ನಟಿ ಸಮಂತಾ ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಅವರ ವೈಯಕ್ತಿಕ ಹಾಗೂ ವೃತ್ತಿ ಬದುಕು ಚರ್ಚೆಯಲ್ಲಿದೆ. ಇದಕ್ಕೆ ಕಾರಣಗಳು ಹಲವು. ಈಗ ಸಮಂತಾ ಹೊಸ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಸಮಂತಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಕೆಲವರು ಅವರ ನಟನೆಯನ್ನು ಇಷ್ಟಪಟ್ಟು ಅಭಿಮಾನಿ ಆದರೆ, ಇನ್ನೂ ಕೆಲವರು ಅವರ ಅಂದಕ್ಕೆ ಮರುಳಾಗಿದ್ದಾರೆ.

ಸಮಂತಾ ಅವರ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಅವರಿಗೆ ಎದುರಾಗಿರೋ ವಿಚಿತ್ರ ಕಾಯಿಲೆ.

ಸಮಂತಾ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ಖುಷಿ ಖುಷಿಯಾಗಿ ಪೋಸ್ ನೀಡಿ ಗಮನ ಸೆಳೆದಿದ್ದಾರೆ. ಇದಕ್ಕೆ ಕಾರಣ ಆಗಿರೋದು ‘ಖುಷಿ’ ಸಿನಿಮಾ.

‘ಖುಷಿ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ರಿಲೀಸ್ಗಾಗಿ ಅವರು ಕಾದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಖುಷಿಯಿಂದ ಪೋಸ್ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡಗೆ ಅವರು ಜೊತೆಯಾಗಿದ್ದಾರೆ.

ಸಮಂತಾ ಅವರು ಆ್ಯಕ್ಷನ್ ಮೂಲಕವೂ ಗಮನ ಸೆಳೆಯುತ್ತಾರೆ. ಹಾಲಿವುಡ್ನ ‘ಸಿಟಾಡೆಲ್’ ವೆಬ್ ಸರಣಿಯ ಹಿಂದಿ ವರ್ಷನ್ನಲ್ಲಿ ಸಮಂತಾ ಬಣ್ಣ ಹಚ್ಚುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮಾಡಿದ ಪಾತ್ರವನ್ನು ಸಮಂತಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಸಮಂತಾ ಸಾಕಷ್ಟು ಆ್ಯಕ್ಷನ್ ಮೆರೆಯಲಿದ್ದಾರೆ.




