Sapthami Gowda: ಕಪ್ಪು ಬಣ್ಣದ ಸೀರೆಯಲ್ಲಿ ಗಮನ ಸೆಳೆದ ‘ಕಾಂತಾರ’ ಸುಂದರಿ ಸಪ್ತಮಿ ಗೌಡ
ಸಪ್ತಮಿ ಗೌಡ ಅವರು ಕಪ್ಪು ಬಣ್ಣದ ಸೀರೆ ಉಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Updated on: Jul 14, 2023 | 11:59 AM

‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟಿ ಸಪ್ತಮಿ ಗೌಡ ಅವರ ಖ್ಯಾತಿ ಹೆಚ್ಚಿದೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ.

ಸಪ್ತಮಿ ಗೌಡ ಅವರು ಅಭಿಮಾನಿಗಳಿಗಾಗಿ ಆಗಾಗ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಭಿನ್ನ ಫೋಟೋಶೂಟ್ ಮಾಡಿಸಿ ಅವರು ಎಲ್ಲರ ಗಮನ ಸೆಳೆಯುತ್ತಾರೆ.

ಈಗ ಅವರು ಕಪ್ಪು ಬಣ್ಣದ ಸೀರೆ ಉಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋಗೆ ವಿವಿಧ ಕಮೆಂಟ್ಗಳು ಬಂದಿವೆ.

‘ಬ್ಲಾಕ್ ಬರ್ಡ್’, ‘ಕಪ್ಪು ಬಣ್ಣದ ಸೀರೆಯಲ್ಲಿ ನೀವು ಸುಂದರವಾಗಿ ಕಾಣುತ್ತಿದ್ದೀರಿ’ ಎಂಬಿತ್ಯಾದಿ ಕಮೆಂಟ್ಗಳು ಈ ಫೋಟೋಗೆ ಬಂದಿದೆ.

‘ಕಾಂತಾರ’ ಯಶಸ್ಸಿನ ಬಳಿಕ ಸಪ್ತಮಿ ಗೌಡ ಜನಪ್ರಿಯತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಬ್ಬಿತು. ಈ ಕಾರಣಕ್ಕೆ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಸಪ್ತಮಿ ಗೌಡಗೆ ಅವಕಾಶ ನೀಡಿದರು.

ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿರುವ ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಸಪ್ತಮಿ ಗೌಡ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಕಪ್ಪು ಬಣ್ಣದ ಸೀರೆಯಲ್ಲಿ ಗಮನ ಸೆಳೆದ ‘ಕಾಂತಾರ’ ಸುಂದರಿ ಸಪ್ತಮಿ ಗೌಡ
























