AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ.3ಕ್ಕೆ ರಿಲೀಸ್ ಆಗಲಿದೆ ಶ್ರೀಮಹದೇವ್​, ಅದಿತಿ ಪ್ರಭುದೇವ ನಟನೆಯ ‘ಗಜಾನನ ಆ್ಯಂಡ್​ ಗ್ಯಾಂಗ್​’​ ಚಿತ್ರ

ಟ್ರೇಲರ್​ ಮೂಲಕ ನಿರೀಕ್ಷೆ ಮೂಡಿಸಿರುವ ‘ಗಜಾನನ ಆ್ಯಂಡ್​ ಗ್ಯಾಂಗ್​’ ಸಿನಿಮಾ ಜೂ.3ರಂದು ರಿಲೀಸ್​ ಆಗಲಿದೆ. ಈ ಬಗ್ಗೆ ಸಿನಿಮಾ ತಂಡ ಅಧಿಕೃತ ಘೋಷಣೆ ಮಾಡಿದೆ.

TV9 Web
| Updated By: ಮದನ್​ ಕುಮಾರ್​|

Updated on: Apr 09, 2022 | 3:39 PM

Share
ಖ್ಯಾತ ನಟ ಶ್ರೀಮಹದೇವ್ ಹಾಗೂ ನಟಿ ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸಿರುವ ‘ಗಜಾನನ ಆ್ಯಂಡ್​ ಗ್ಯಾಂಗ್’ ಸಿನಿಮಾದ ಬಿಡುಗಡೆಗೆ‌ ದಿನಾಂಕ ನಿಗದಿ ಆಗಿದೆ. ಜೂನ್ 3ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅದಕ್ಕಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ.

Aditi Prabhudeva Sri Mahadev starrer Gajanana And Gang movie will release on 3rd June

1 / 5
ಎಲ್ಲವೂ ಪ್ಲ್ಯಾನ್​ ಪ್ರಕಾರವೇ ನಡೆದಿದ್ದರೆ ಫೆಬ್ರವರಿ ತಿಂಗಳಲ್ಲೇ ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ರಿಲೀಸ್​ ದಿನಾಂಕ ಮುಂದೂಡಲಾಗಿತ್ತು. ಈಗ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

Aditi Prabhudeva Sri Mahadev starrer Gajanana And Gang movie will release on 3rd June

2 / 5
ಜೂನ್ 3ರಂದು ರಾಜ್ಯಾದ್ಯಂತ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಗಜಾನನ ಆ್ಯಂಡ್​ ಗ್ಯಾಂಗ್​’ ಸಿನಿಮಾ ರಿಲೀಸ್ ಆಗಲಿದೆ. ‘ನಮ್ ಗಣಿ ಬಿಕಾಂ ಪಾಸ್‌’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ / ನಟ ಅಭಿಷೇಕ್‌ ಅವರು ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾಗೆ ಈಗ ನಿರ್ದೇಶನ ಮಾಡಿದ್ದಾರೆ.

3 / 5
ನಿರ್ದೇಶನದ ಮಾಡುವುದರ ಜೊತೆಗೆ ಅಭಿಷೇಕ್​ ಅವರು ಒಂದು ಪಾತ್ರವನ್ನೂ ನಿಭಾಯಿಸಿದ್ದಾರೆ. ಯು.ಎಸ್‌. ನಾಗೇಶ್‌ ಕುಮಾರ್‌ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರದ್ಯೋತನ್‌ ಸಂಗೀತ ನಿರ್ದೇಶನ, ವಿಜೇತ್​ ಚಂದ್ರ ಸಂಕಲನ ಹಾಗೂ ಉದಯ್​ ಲೀಲಾ ಅವರು ಛಾಯಾಗ್ರಹಣ ಮಾಡಿದ್ದಾರೆ.

4 / 5
ಅದಿತಿ ಪ್ರಭುದೇವ, ಶ್ರಿಮಹದೇವ್​, ಅಭಿಷೇಕ್​ ಜೊತೆಗೆ ಬಿಗ್‌ಬಾಸ್‌ ಖ್ಯಾತಿಯ ರಘು ಗೌಡ, ಚೇತನ್‌ ದುರ್ಗ, ನಾಟ್ಯರಂಗ, ಅಶ್ವಿನ್‌ ಹಾಸನ್‌ ಹಾಗೂ ಶಮಂತ್‌ ಬ್ರೋ ಗೌಡ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ತಿಂಗಳ ಹಿಂದೆ ರಿಲೀಸ್​ ಆಗಿದ್ದ ಟ್ರೇಲರ್​ ಸಖತ್​ ಗಮನ ಸೆಳೆದಿದೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ