ಆಲಿಯಾ ಭಟ್ ಒಳ್ಳೆಯ ನಟಿ ಮಾತ್ರವಲ್ಲ, ಒಳ್ಳೆಯ ಉದ್ಯಮಿ ಸಹ ಹೌದು
Alia Bhatt: ಆಲಿಯಾ ಭಟ್ ಭಾರತದ ಉತ್ತಮ ನಟಿಯಾಗಿರುವ ಜೊತೆಗೆ ಬಹಳ ಒಳ್ಳೆಯ ಉದ್ಯಮಿಯೂ ಹೌದು. ಯಾವ-ಯಾವ ಸಂಸ್ಥೆಗಳಲ್ಲಿ ಆಲಿಯಾ ಹೂಡಿಕೆ ಮಾಡಿದ್ದಾರೆ ಇಲ್ಲಿ ತಿಳಿಯಿರಿ.
Updated on: Mar 15, 2024 | 6:01 PM

ನಟಿ ಆಲಿಯಾ ಭಟ್ಗೆ ಇಂದು (ಮಾರ್ಚ್ 15) ಹುಟ್ಟುಹಬ್ಬದ ಸಂಭ್ರಮ. ಆಲಿಯಾ ಭಟ್ ಭಾರತದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಒಳ್ಳೆಯ ನಟಿಯಾಗಿರುವ ಜೊತೆಗೆ ಒಳ್ಳೆಯ ಉದ್ಯಮಿಯೂ ಹೌದು.

ಆಲಿಯಾ ಭಟ್ ಹಲವು ಬ್ಯುಸಿನೆಸ್ಗಳಲ್ಲಿ ಹಣ ತೊಡಗಿಸಿದ್ದಾರೆ. ಕೆಲವು ಉದ್ಯಮಗಳಿಗೆ ಸಿಂಗಲ್ ಓನರ್ ಸಹ ಆಗಿದ್ದಾರೆ. ಅಂದಹಾಗೆ ಪತಿ ರಣ್ಬೀರ್ ಕಪೂರ್ಗಿಂತಲೂ ಶ್ರೀಮಂತರು ಆಲಿಯಾ.

ಜನಪ್ರಿಯ ಸೌಂದರ್ಯವರ್ಧಕ ಬ್ರ್ಯಾಂಡ್ ನೈಕಾನಲ್ಲಿ ಆಲಿಯಾ ಭಟ್ ಹೂಡಿಕೆ ಮಾಡಿದ್ದಾರೆ. ನೈಕಾನಲ್ಲಿ ಹೂಡಿಕೆ ಮಾಡಿದ ಮೊದಲಿಗರಲ್ಲಿ ಒಬ್ಬರು ಆಲಿಯಾ.

ಆಲಿಯಾ ಬಟ್ ರಿಯಲ್ ಎಸ್ಟೇಟ್ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ಮುಂಬೈ, ಪುಣೆ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಜಮೀನು, ಅಪಾರ್ಟ್ಮೆಂಟ್ ಖರೀದಿಸಿ ಬಾಡಿಗೆಗೆ ನೀಡಿದ್ದಾರೆ.

ಎಡ್ ಎ ಮಾಮ ಹೆಸರಿನ ಬಟ್ಟೆ ಬ್ರ್ಯಾಂಡ್ನ ಮಾಲಕಿ ಆಲಿಯಾ ಭಟ್. ಈ ಬ್ರ್ಯಾಂಡ್ ಮೂಲಕ ಮಕ್ಕಳ ಹಾಗೂ ತಾಯಂದಿರ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ ಆಲಿಯಾ.

ಆಲಿಯಾ ಭಟ್ ಫೂಲ್ ಡಾಟ್ ಕೋ ಎಂಬ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. ಹೂಗಳ ತ್ಯಾಜ್ಯದಿಂದ ಸುಗಂಧ ದ್ರವ್ಯ, ಅಗರಬತ್ತಿಗಳನ್ನು ತಯಾರಿಸುವ ಸಂಸ್ಥೆಯಿದು.

ಸ್ಟೈಲ್ ಕೇರ್ ಹೆಸರಿನ ಫ್ಯಾಷನ್ ಸಂಸ್ಥೆಯಲ್ಲಿ ಆಲಿಯಾ ಹೂಡಿಕೆ ಮಾಡಿದ್ದಾರೆ. ಆಲಿಯಾರ ಫ್ಯಾಷನ್ ಡಿಸೈನರ್ ನಡೆಸುತ್ತಿರುವ ಸಂಸ್ಥೆಯಿದು. ಫ್ಯಾಷನ್ ಹಾಗೂ ತಂತ್ರಜ್ಞಾನವನ್ನು ಒಟ್ಟಿಗೆ ಬಳಸಿಕೊಂಡು ವಿನ್ಯಾಸ ಮಾಡುವ ಸಂಸ್ಥೆಯಿದು.

ಎಟರ್ನಲ್ ಸನ್ಶೈನ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಆಲಿಯಾ ಭಟ್ ನಡೆಸುತ್ತಿದ್ದು, ನಿರ್ಮಾಣ ಸಂಸ್ಥೆ ಮೂಲಕ ಕೆಲವು ಒಳ್ಳೆಯ ಸಿನಿಮಾ ಹಾಗೂ ವೆಬ್ ಸರಣಿಗಳನ್ನು ನಿರ್ಮಾಣ ಮಾಡಿದ್ದಾರೆ.




