KBC ಹೊಸ ಸೀಸನ್ಗಾಗಿ 81ನೇ ವಯಸ್ಸಿನಲ್ಲೂ ಬ್ರೇಕ್ ಇಲ್ಲದೆ ಕೆಲಸ ಮಾಡಿದ ಅಮಿತಾಭ್; ಕಾರಿನಲ್ಲೇ ಊಟ
KBC Season 16 | Amitabh Bachchan: ಸದ್ಯ ‘ಕೌನ್ ಬನೇಗಾ ಕರೋಡ್ಪತಿ’ಯ 16ನೇ ಸೀಸನ್ ಆರಂಭ ಆಗುತ್ತಿದೆ. ಅಮಿತಾಭ್ ಬಚ್ಚನ್ ಅವರು ಈ ಶೋಗೆ ಹೋಸ್ಟ್ ಆಗಿ ಮರಳುತ್ತಿದ್ದಾರೆ. ಈ ಮೂಲಕ ಗಮನ ಸೆಳೆಯಲು ರೆಡಿ ಆಗಿದ್ದಾರೆ. ವಿಶೇಷ ಎಂದರೆ ಈಗಾಗಲೇ ಶೂಟಿಂಗ್ ಕೂಡ ಆರಂಭ ಆಗಿದೆ.
Updated on:Apr 24, 2024 | 10:20 AM

ಹಿಂದಿಯ ಫೇಮಸ್ ಶೋ ‘ಕೌನ್ ಬನೇಗಾ ಕರೋಡ್ಪತಿ’ ಅನ್ನು ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುತ್ತಾ ಬರುತ್ತಿದ್ದಾರೆ. ಅವರಿಗಾಗಿಯೇ ಈ ಶೋ ನೋಡುವವರ ಸಂಖ್ಯೆ ದೊಡ್ಡದಿದೆ. ಸಾಮಾನ್ಯ ಜ್ಞಾನದ ಜೊತೆ ಒಂದಷ್ಟು ಮನರಂಜನೆ ಕೂಡ ವೀಕ್ಷಕರಿಗೆ ಸಿಗಲಿದೆ.

ಸದ್ಯ ‘ಕೌನ್ ಬನೇಗಾ ಕರೋಡ್ಪತಿ’ಯ 16ನೇ ಸೀಸನ್ ಆರಂಭ ಆಗುತ್ತಿದೆ. ಅಮಿತಾಭ್ ಬಚ್ಚನ್ ಅವರು ಈ ಶೋಗೆ ಹೋಸ್ಟ್ ಆಗಿ ಮರಳುತ್ತಿದ್ದಾರೆ. ಈ ಮೂಲಕ ಗಮನ ಸೆಳೆಯಲು ರೆಡಿ ಆಗಿದ್ದಾರೆ. ವಿಶೇಷ ಎಂದರೆ ಈಗಾಗಲೇ ಶೂಟಿಂಗ್ ಕೂಡ ಆರಂಭ ಆಗಿದೆ.

ಸೆಟ್ನಲ್ಲಿ ಮೊದಲ ದಿನ ಹೇಗಿತ್ತು ಎಂಬುದನ್ನು ಅಮಿತಾಭ್ ಬಚ್ಚನ್ ಅವರು ವಿವರಿಸಿದ್ದಾರೆ. ಕೆಲಸದ ಒತ್ತಡದಿಂದ ಅವರಿಗೆ ಊಟದ ಬ್ರೇಕ್ನ ಸರಿಯಾಗಿ ತೆಗೆದುಕೊಳ್ಳೋಕೆ ಸಾಧ್ಯವಾಗಿಲ್ಲ. ಈ ಕಾರಣದಿಂದಲೇ ಕಾರಿನಲ್ಲೇ ಕುಳಿತು ಅವರು ಊಟ ಮಾಡಿದರು.

‘ಬೆಳಿಗ್ಗೆ 9ರಿಂದ ಸಂಜೆ ಐದು ಗಂಟೆವರೆಗೆ ಬ್ರೇಕ್ ಇಲ್ಲದೆ ಕೆಲಸ ಮಾಡಬೇಕಾಯಿತು. ಕಾರಿನಲ್ಲಿ ಊಟ ಮಾಡಿದೆ. ಸಿಎಸ್ಕೆ ಹಾಗೂ ಎಲ್ಎಸ್ಜಿ ಪಂದ್ಯ ಆರಂಭದ ವೇಳೆಗೆ ಮನೆಗೆ ಬಂದೆ’ ಎಂದಿದ್ದಾರೆ ಅಮಿತಾಭ್.

ಅಮಿತಾಭ್ ಬಚ್ಚನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ಅಭಿನಯದ ಈ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಅಶ್ವತ್ಥಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Published On - 10:17 am, Wed, 24 April 24



















