Anushka Shetty Birthday: ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ: ಅಭಿಮಾನಿಗಳು ಈ 5 ಸಿನಿಮಾಗಳನ್ನು ಮಿಸ್​ ಮಾಡುವಂತಿಲ್ಲ

| Updated By: ಮದನ್​ ಕುಮಾರ್​

Updated on: Nov 07, 2022 | 9:55 AM

Anushka Shetty Movies: ನಟಿ ಅನುಷ್ಕಾ ಶೆಟ್ಟಿ ಅವರು ಇಂದು (ನ.7) 41ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ವೃತ್ತಿಜೀವನದ 5 ಪ್ರಮುಖ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

1 / 5
ಬಾಹುಬಲಿ: ಇದು ಅನುಷ್ಕಾ ಶೆಟ್ಟಿ ಅವರಿಗೆ ವಿಶ್ವಾದ್ಯಂತ ಖ್ಯಾತಿ ತಂದುಕೊಟ್ಟ ಸಿನಿಮಾ. ಈ ಚಿತ್ರದಲ್ಲಿ ಅವರದ್ದು ದೇವಸೇನಾ ಪಾತ್ರ. ಅವರ ಮತ್ತು ಪ್ರಭಾಸ್​ ಜೋಡಿ ಎಂದರೆ ಅಭಿಮಾನಿಗಳಿಗೆ ಹೆಚ್ಚು ಇಷ್ಟ.

2 / 5
ವೇದಂ: ಕ್ರಿಷ್​ ನಿರ್ದೇಶನದ ಈ ಸಿನಿಮಾ 2010ರಲ್ಲಿ ತೆರೆಕಂಡಿತು. ಸರೋಜಾ ಎಂಬ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡರು. ಈ ಚಿತ್ರ ಉತ್ತಮ ವಿಮರ್ಶೆ ಪಡೆದುಕೊಂಡಿತು.

3 / 5
ಜೀರೋ ಸೈಜ್​: ಅನುಷ್ಕಾ ಶೆಟ್ಟಿ ಅವರು ಗ್ಲಾಮರ್​ ಹಂಗು ತೊರೆದು ಮಾಡಿದ ಸಿನಿಮಾ ‘ಜೀರೋ ಸೈಜ್​’. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲಿಲ್ಲವಾದರೂ ನಟನೆ ದೃಷ್ಟಿಯಿಂದ ಇದು ಅವರ ಬೆಸ್ಟ್​ ಸಿನಿಮಾಗಳಲ್ಲೊಂದು.

4 / 5
ರುದ್ರಮದೇವಿ: 2015ರಲ್ಲಿ ತೆರೆಕಂಡ ‘ರುದ್ರಮದೇವಿ’ ಸಿನಿಮಾದಲ್ಲಿನ ಅನುಷ್ಕಾ ಶೆಟ್ಟಿ ಅವರು ನಟನೆ ಎಲ್ಲರಿಗೂ ಇಷ್ಟ ಆಯಿತು. ಐತಿಹಾಸಿಕ ಕಥಾಹಂದರ ಈ ಸಿನಿಮಾದಲ್ಲಿ ಇದೆ.

5 / 5
ಅರುಂಧತಿ: ಅನುಷ್ಕಾ ಶೆಟ್ಟಿ ಅಭಿಮಾನಿಗಳು ‘ಅರುಂಧತಿ’ ಸಿನಿಮಾವನ್ನು ಎಂದಿಗೂ ಮರೆಯುವುದಿಲ್ಲ. ಸೂಪರ್ ನ್ಯಾಚುರಲ್​ ಕಥಾಹಂದರ ಇರುವ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಎರಡು ಶೇಡ್​ನ ಪಾತ್ರ ಮಾಡಿದ್ದಾರೆ.

Published On - 9:55 am, Mon, 7 November 22