Chandra Grahan 2022 effect many temples closed in karnataka on november 8
ರಾಹುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆ ಮೈಸೂರಿನ ಚಾಮುಂಡಿದೇವಿ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ನಾಳೆ(ನ.08) ಮಧ್ಯಾಹ್ನ 1 ಗಂಟೆ ಬಳಿಕ ಚಾಮುಂಡಿಬೆಟ್ಟಕ್ಕೆ ಭಕ್ತರ ನಿಷೇಧವಿರಲಿದೆ. ಸ್ಪರ್ಶ ಕಾಲ ಹಾಗೂ ಮೋಕ್ಷ ಕಾಲದಲ್ಲಿ ವಿಶೇಷ ಪೂಜೆ ಇರಲಿದೆ ಎಂದು ಚಾಮುಂಡಿಬೆಟ್ಟದ ದೇವಸ್ಥಾನ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ತುಮಕೂರು ಜಿಲ್ಲೆ ದೇವರಾಯನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಂದ್ ಆಗಲಿದೆ. ನಾಳೆ ಮಧ್ಯಾಹ್ನ 1 ಗಂಟೆಯಿಂದಲೇ ದೇವಸ್ಥಾನ ಬಂದ್ ಆಗಲಿದೆ. ಹಾಗೂ ನಾಳೆ ಸಂಜೆಯಿಂದ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲ ಕೂಡ ಬಂದ್ ಆಗಲಿದೆ. ನಾಳೆ ಸಂಜೆ 5ರಿಂದ ಬುಧವಾರ ಬೆಳಗ್ಗೆ 6.30ರವರೆಗೆ ಬಂದ್ ಇರಲಿದೆ.
ನಾಳೆ ರಾಹುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆ ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕಟೀಲು ದೇವಸ್ಥಾನಗಳ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ. ಧರ್ಮಸ್ಥಳ ದೇವಸ್ಥಾನ ನಾಳೆ ಮಧ್ಯಾಹ್ನ 1.30ರಿಂದ ಸಂಜೆ 7ರವರೆಗೆ ಬಂದ್ ಆಗಿರಲಿದೆ. ನಾಳೆ ಸೇವೆ, ಅನ್ನಪ್ರಸಾದ ಇರುವುದಿಲ್ಲ. ನಾಳೆ ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30ರವರೆಗೆ ದರ್ಶನಕ್ಕೆ ನಿರ್ಬಂಧವಿರಲಿದೆ. ನಂತರ ಸಂಜೆ 7.30ರಿಂದ ರಾತ್ರಿ 9ರವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇನ್ನು ನಾಳೆ ಬೆಳಗ್ಗೆ 9.30ರ ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರವೇಶ ನಿಷೇಧ ಹೇರಿದ್ದು ರಾತ್ರಿ 8 ಗಂಟೆಗೆ ಕಟೀಲು ದೇಗುಲದಲ್ಲಿ ಪೂಜೆ, ಅನ್ನಪ್ರಸಾದ ಇರಲಿದೆ.
ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮ ದೇವಿಯ ದರ್ಶನ ನಾಳೆ ಇರುವುದಿಲ್ಲ. ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ದೇವಸ್ಥಾನ ಬಂದ್ ಇರಲಿದೆ. ಹುಣ್ಣಿಮೆ ಹಾಗೂ ಮಂಗಳವಾರದಂದು ಹುಲಿಗೇಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಆದರೆ ಗ್ರಹಣದಿಂದಾಗಿ ಮಧ್ಯಾಹ್ನದವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಕೊಪ್ಪಳ ನಗರದಲ್ಲಿರುವ ಪ್ರಸಿದ್ಧ ಗವಿಸಿದ್ದೇಶ್ವರ ಮಠ ಎಂದಿನಂತೆ ತೆರದಿರಲಿದೆ. ಚಂದ್ರ ಗ್ರಹಣದ ಸಮಯದಲ್ಲೂ ಗವಿಮಠದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಂದ್ರಗ್ರಹಣ ಮುಕ್ತಾಯದ ಬಳಿಕ ಅರ್ಚಕರು ಅಭಿಷೇಕ ನೆರವೇರಿಸಲಿದ್ದಾರೆ.
ಚಂದ್ರಗ್ರಹಣ ಹಿನ್ನೆಲೆ ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ದೇವಾಲಯದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ನಾಳೆ ಬೆಳಿಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಂದಿನಂತೆ ವಿವಿಧ ಪೂಜಾ ವಿಧಿವಿಧಾನ ನೆರವೇರಲಿದ್ದು ಭಕ್ತರಿಗೆ ದರ್ಶನ ಭಾಗ್ಯವೂ ಇರಲಿದೆ. ಅನ್ನಸಂತರ್ಪಣೆಯೂ ಮಧ್ಯಾಹ್ನ 1 ಗಂಟೆವರೆಗೆ ಇರಲಿದೆ. 2 ಗಂಟೆಯ ನಂತರ ಭಕ್ತರಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ಇಲ್ಲ. ಆದ್ರೆ ಗರ್ಭಗುಡಿ ಬಿಟ್ಟು ಹೊರಗಿನಿಂದ ದರ್ಶನ ಪಡೆಯಬಹುದು. ಗ್ರಹಣದ ವೇಳೆ ದೇವಿಗೆ ನಿರಂತರ ಜಲಾಭಿಷೇಕ ಮಾಡಲಾಗುತ್ತೆ. ಗ್ರಹಣಮೋಕ್ಷದ ನಂತರ ಯಥಾವತ್ತಾಗಿ ದೇವಿಗೆ ಅಭಿಷೇಕ ವಿವಿಧ ಪೂಜೆ, ಷೋಡಶೋಪಚಾರ ಅಲಂಕಾರ ಮಾಡಲಾಗುತ್ತೆ.
Published On - 11:25 am, Mon, 7 November 22