AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಪಾಲಿಕೆಗೆ ಹಿಡಿಶಾಪ ಹಾಕುತ್ತಾ ರಸ್ತೆ ರಿಪೇರಿ ಮಾಡುತ್ತಿರುವ ಜನರು

ಸಿಲಿಕಾನ್ ಸಿಟಿ ಬೆಂಗಳೂರು ನಂತರ ಇದೀಗ ಗಣಿ ನಾಡ ಜನರು ರಕ್ಕಸ ರಸ್ತೆಗಳ ವಿರುದ್ದ ರೊಚ್ಚಿಗೆದ್ದಿದ್ದಾರೆ. ಮಕ್ಕಳೊಂದಿಗೆ ಬೀದಿಗೀಳಿದಿರುವ ಜನರು ಪಾಲಿಕೆ ವಿರುದ್ದ ಹಿಡಿಶಾಪ ಹಾಕುತ್ತಲೇ ಸ್ವಂತ ಹಣದಲ್ಲೇ ರಸ್ತೆ ರಿಪೇರಿಗೆ ಮುಂದಾಗಿದ್ದಾರೆ.

TV9 Web
| Updated By: Rakesh Nayak Manchi|

Updated on:Nov 07, 2022 | 12:53 PM

Share
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಬೇಸತ್ತ ಜನರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಪಾಲಿಕೆ ಮತ್ತು ಜನರ ನಡುವಿನ ಹಗ್ಗಜಗ್ಗಾಟ ಈಗಲೂ ಮುಂದುವರಿದಿದೆ. ಇದೀಗ ಇಂತಹದ್ದೇ ಸ್ಥಿತಿ ಬಳ್ಳಾರಿಯಲ್ಲೂ ನಿರ್ಮಾಣಗೊಂಡಿದೆ. ರಸ್ತೆಯಲ್ಲಿ ಹೊಂಡಗುಂಡಿಗಳು ಒಂದೆಡೆಯಾದರೆ, ಮತ್ತೊಂದೆಡೆ ಧೂಳು. ಸಮಸ್ಯೆ ಪರಿಹಾರಕ್ಕೆ ಮುಂದಾಗದ ಬಳ್ಳಾರಿ ಪಾಲಿಕೆ ವಿರುದ್ಧ ಇದೀಗ ಜನಾಕ್ರೋಶ ವ್ಯಕ್ತವಾಗಿದ್ದು, ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.

Ballari Public anger against the municipal corporation People came forward to road repair Ballari news in kannada

1 / 6
ರಸ್ತೆ ತುಂಬಾ ಧೂಳು, ಜನರ ಆರೋಗ್ಯ ಹಾಳು, ರಸ್ತೆ ನಿರ್ಮಿಸಿ ಅಪಘಾತ ತಪ್ಪಿಸಿ, ತಗ್ಗು ಗುಂಡಿ ಮುಚ್ಚೋಣ ಜನರ ಪ್ರಾಣ ಉಳಿಸೋಣ ಎಂಬಿತ್ಯಾದಿ ಘೋಷಣೆಗಳನ್ನು ಬರೆದಿರುವ ಭಿತ್ತಪತ್ರಗಳನ್ನ ಹಿಡಿದು ಹಿಡಿಶಾಪ ಹಾಕುತ್ತಿದ್ದಾರೆ. ಈ ಹೋರಾಟದಲ್ಲಿ ಮಕ್ಕಳು, ವೈದ್ಯರು, ಇಂಜನೀಯರ್​ಗಳು ಸೇರಿದಂತೆ ಪಕ್ಷಾತೀತವಾಗಿ ತೊಡಗಿಕೊಂಡಿದ್ದಾರೆ.

Ballari Public anger against the municipal corporation People came forward to road repair Ballari news in kannada

2 / 6
Ballari Public anger against the municipal corporation People came forward to road repair Ballari news in kannada

ಬಳ್ಳಾರಿ ನಗರದ ತಗ್ಗು ಗುಂಡಿಮಯ ರಸ್ತೆಗಳ ವಿರುದ್ದ ಗಾಂಧಿಗಿರಿ ಶುರು ಮಾಡಿದ್ದಾರೆ. ನಗರದ ರಸ್ತೆಗಳು ಸಂಪೂರ್ಣವಾಗಿ ತಗ್ಗು ಗುಂಡಿಮಯವಾಗಿರುವುದರಿಂದ ಪಾಲಿಕೆ ವಿರುದ್ದ ಸ್ಥಳೀಯರು ಹೋರಾಟಕ್ಕೆ ಇಳಿದಿದ್ದಾರೆ. ನಗರದ ರಸ್ತೆಗಳ ರಿಪೇರಿ ವಿಚಾರದಲ್ಲಿ ಪಾಲಿಕೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಸ್ವತಂ ಹಣದಿಂದ ಸ್ಥಳೀಯರೇ ತಗ್ಗು ಗುಂಡಿಗಳನ್ನ ಮುಚ್ಚಲು ಮುಂದಾಗಿದ್ದಾರೆ.

3 / 6
Ballari Public anger against the municipal corporation People came forward to road repair Ballari news in kannada

ನಗರದ ಎಲ್ಲ ರಸ್ತೆಗಳು ತಗ್ಗು ಗುಂಡಿಗಳಿಂದ ಹಾಳು ಬಿದ್ದಿವೆ. ಹೀಗಾಗಿ ಪ್ರಯಾಣಿಕರು ನಗರದಲ್ಲಿ ಓಡಾಡಲು ಭಯದಿಂದ ಸಂಚರಿಸಬೇಕಾಗಿದೆ. ತಗ್ಗು ಗುಂಡಿಗಳಲ್ಲಿ ಬೈಕ್ ಸವಾರರು ಬಿದ್ದು ಆಸ್ಪತ್ರೆಗೆ ದಾಖಲಾಗುತ್ತಿರುವ ಪರಿಣಾಮ ಸ್ಥಳೀಯರು ಇದೀಗ ರಕ್ಕಸ ರಸ್ತೆಗಳು ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ತಮ್ಮ ಸ್ವತಂ ಹಣದಿಂದಲೇ ತಗ್ಗು ಗುಂಡಿಗಳಿಗೆ ಕ್ರಾಂಕ್ರೀಟ್ ತುಂಬಿ ತಗ್ಗು ಸರಿಪಡಿಸುತ್ತಿದ್ದಾರೆ. ನಗರದ ದುರ್ಗಮ್ಮ ರಸ್ತೆ, ಮೋಕಾ ರಸ್ತೆ, ಮೋತಿ ಸರ್ಕಲ್ ಸೇರಿದಂತೆ ನಗರದ ಎಲ್ಲ ರಸ್ತೆಗಳ ತಗ್ಗು ಗುಂಡಿಗಳನ್ನ ಮುಚ್ಚಲು ಸ್ಥಳೀಯರೇ ಇದೀಗ ಮುಂದಾಗಿದ್ದಾರೆ. ಇದರೊಂದಿಗೆ ಪಾಲಿಕೆಗೆ ಹಿಡಿಶಾಪ ಹಾಕಲಾಗುತ್ತಿದೆ.

4 / 6
Ballari Public anger against the municipal corporation People came forward to road repair Ballari news in kannada

ಬಳ್ಳಾರಿ ನಗರದ ರಸ್ತೆಗಳ ರಿಪೇರಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಪಾಲಿಕೆ ಮಾತ್ರ ಕುಂಟು ನೆಪ ಹೇಳಿ ನಿರ್ಲಕ್ಷ್ಯ ನೀತಿ ಮುಂದುವರಿಸಿದೆ. ಹೀಗಾಗಿ ಪಾಲಿಕೆ ವಿರುದ್ದ ಸ್ಥಳೀಯರು ಹಿಡಿಶಾಪ ಹಾಕುತ್ತಲೇ ಗಾಂಧಿಗಿರಿ ಹೋರಾಟದ ಮೂಲಕ ರಸ್ತೆಗಳ ರಿಪೇರಿ ಶುರು ಮಾಡಿದ್ದಾರೆ.

5 / 6
Ballari Public anger against the municipal corporation People came forward to road repair Ballari news in kannada

ಇನ್ನಾದರೂ ಅಭಿವೃದ್ದಿಯೇ ನಮ್ಮ ದೇಯ್ಯ ಅನ್ನೋ ಸಚಿವರು, ಶಾಸಕರು ಬಳ್ಳಾರಿ ನಗರದಲ್ಲಿನ ತಗ್ಗು ಗುಂಡಿಗಳನ್ನ ಮುಚ್ಚಿ ರಸ್ತೆಗಳ ರಿಪೇರಿ ಮಾಡಲು ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಪಾಲಿಕೆ ಮತ್ತು ಸಚಿವರು ಶಾಸಕರು ಕಾರ್ಯ ನಿರ್ವಹಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. (ವರದಿ: ವೀರಪ್ಪ ದಾನಿ, ಟಿವಿ9 ಬಳ್ಳಾರಿ)

6 / 6

Published On - 12:53 pm, Mon, 7 November 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ