- Kannada News Photo gallery Apart from 2000,1000 and 500 rupees currency notes these notes also have been baned by rbi in India
Note ban: ಭಾರತದಲ್ಲಿ ಇದುವರೆಗೆ ಯಾವೆಲ್ಲ ನೋಟುಗಳು ರದ್ದಾಗಿವೆ ಗೊತ್ತಾ? ನೀವು ಈ ಹಿಂದೆ ನೋಡಿರದ ನೋಟ್ ಬ್ಯಾನ್ ವೃತ್ತಾಂತ ಇಲ್ಲಿದೆ!
ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ, ಮೇ 19 ರಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡು ಚಲಾವಣೆಯಿಂದ ರೂ. 2000 ನೋಟು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಈ ನೋಟನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ತಿಳಿಸಲಾಗಿದೆ.
Updated on:May 21, 2023 | 1:05 AM

Bengaluru RBI complaints Against Bank Managers Over Fake Notes

Bengaluru Man Files Complaints On Rs 25 lakh cheated in 2000 note exchange at tirupati

ಅದೇ ಸಮಯದಲ್ಲಿ, ಮೊದಲ ನೋಟು ಅಮಾನ್ಯೀಕರಣವು 1946 ರಲ್ಲಿ ನಡೆಯಿತು. ಈ ವೇಳೆ ಬ್ರಿಟಿಷರ ಆಳ್ವಿಕೆಯಲ್ಲಿದ್ದ 500, 1000 ಹಾಗೂ 10 ಸಾವಿರ ನೋಟುಗಳನ್ನು ರದ್ದುಗೊಳಿಸಲಾಗಿತ್ತು.

ಇದಾದ ನಂತರ 1978ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ಕಪ್ಪುಹಣದ ವಿರುದ್ಧ ಕ್ರಮ ಕೈಗೊಂಡು ರೂ. 1,000 ರೂ. 5,000 ಮತ್ತು ರೂ.10,000 ನೋಟುಗಳನ್ನು ರದ್ದುಗೊಳಿಸಿತ್ತು.

ಈ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ 1000 ರೂಪಾಯಿ ನೋಟುಗಳನ್ನು ಸಹ ಅಮಾನ್ಯಗೊಳಿಸಲಾಗಿತ್ತು. ನಂತರ ಅದನ್ನು ಚಲಾವಣೆಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಮತ್ತೆ ಆ ನೋಟುಗಳನ್ನು 2016 ರಲ್ಲಿ ಮತ್ತೆ ನಿಲ್ಲಿಸಲಾಯಿತು.

ನಿರ್ದಿಷ್ಟವಾಗಿ ಹೇಳುವುದಾದರೆ, 2000 ರೂಪಾಯಿಗಳನ್ನು ಚಲಾವಣೆಯಿಂದ ತೆಗೆದುಹಾಕುವ ನಿರ್ಧಾರವು ನೋಟು ಅಮಾನ್ಯೀಕರಣವಲ್ಲ. ನೀವು ಅದನ್ನು ಬಳಸಬಹುದು. ಮಾರುಕಟ್ಟೆಯಲ್ಲಿ ಚಲಾವಣೆ ಮಾಡಬಹುದಾಗಿದೆ. ಆದರೆ ನೋಟು ಅಮಾನ್ಯೀಕರಣ ಮಾಡಿದಾಗ ಹೀಗೆ ಚಲಾವಣೆ ಮಾಡಲು ಆಗುವುದಿಲ್ಲ.

2000 ರೂಪಾಯಿ ಕರೆನ್ಸಿ ನೋಟು: 2000, 1000, 500 ಹೊರತುಪಡಿಸಿ ಚಿತ್ರದಲ್ಲಿರುವ ಈ ನೋಟುಗಳು ಸಹ ಗತಕಾಲಕ್ಕೆ ಸಂಬಂಧಿಸಿದ ವಿಷಯವಾಗಿದೆ. ಇಂದಿನ ಪೀಳಿಗೆಯ ಅನೇಕ ಜನರು ಇವುಗಳನ್ನು ನಿಜವಾಗಿ ನೋಡಿಲ್ಲ.
Published On - 1:03 am, Sun, 21 May 23




