- Kannada News Photo gallery Aradhya Bachchan celebrate here birthday with Mother Aishwarya Rai Abhishek Bachchan is not there
ಹೇಗಿತ್ತು ನೋಡಿ ಆರಾಧ್ಯಾ ಬರ್ತ್ಡೇ ಸೆಲೆಬ್ರೇಷನ್; ಬಚ್ಚನ್ ಕುಟುಂಬದವರಿಗಿಲ್ಲ ಆಹ್ವಾನ
ಐಶ್ವರ್ಯಾ ರೈ ಅವರು ಮಗಳಿಗೆ ವಿಶ್ ಮಾಡಿ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆರಾಧ್ಯಾ ಅವರು ಸಿಂಪಲ್ ಡ್ರೆಸ್ನಲ್ಲಿ ಗಮನ ಸೆಳೆದಿದ್ದಾರೆ.
Updated on: Nov 21, 2024 | 8:45 AM

ಐಶ್ವರ್ಯಾ ರೈ ಅವರ ಮಗಳು ಆರಾಧ್ಯಾ ಬಚ್ಚನ್ ಅವರು ಇತ್ತೀಚೆಗೆ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಈಗ 13 ವರ್ಷ. ಹುಟ್ಟುಹಬ್ಬವನ್ನು ಐಶ್ವರ್ಯಾ ಅವರು ಅದ್ದೂರಿಯಾಗಿ ಆಚರಿಸಿಕೊಂಡರು. ಈ ಫೋಟೋ ವೈರಲ್ ಆಗಿದೆ.

ಐಶ್ವರ್ಯಾ ರೈ ಅವರು ಮಗಳಿಗೆ ವಿಶ್ ಮಾಡಿ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆರಾಧ್ಯಾ ಅವರು ಸಿಂಪಲ್ ಡ್ರೆಸ್ನಲ್ಲಿ ಗಮನ ಸೆಳೆದಿದ್ದಾರೆ.

ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಅವರ ಫೋಟೋ ಎದುರು ಆರಾಧ್ಯಾ ನಮಸ್ಕರಿಸುತ್ತಿದ್ದಾರೆ. ಐಶ್ವರ್ಯಾ ರೈ ಕೂಡ ತಂದೆಯ ಆಶೀರ್ವಾದ ಪಡೆದಿದ್ದಾರೆ.

ಈ ಬರ್ತ್ಡೇ ಪಾರ್ಟಿಲಿ ಕೆಲವೇ ಕೆಲವರು ಭಾಗಿ ಆಗಿದ್ದರು. ಐಶ್ವರ್ಯಾ, ಆರಾಧ್ಯಾ ಹಾಗೂ ಐಶ್ವರ್ಯಾ ತಾಯಿ ಇರುವ ಫೋಟೋ ಇದೆಉ. ಎಲ್ಲಿಯೂ ಬಚ್ಚನ್ ಕುಟುಂಬದವರು ಇಲ್ಲ.

ಅಭಿಷೇಕ್ ಬಚ್ಚನ್ ಆಗಲೀ ಅಮಿತಾಭ್ ಆಗಲಿ ಫೋಟೋದಲ್ಲಿ ಇಲ್ಲ. ಮಗಳಿಗೆ ಅಭಿಷೇಕ್ ಕಡೆಯಿಂದ ಯಾವುದೇ ವಿಶ್ ಬಂದಿಲ್ಲ. ಸದ್ಯ ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇವರು ಬೇರೆ ಆಗಿರೋದು ಖಚಿತ ಎನ್ನಲಾಗುತ್ತಿದೆ.




