- Kannada News Photo gallery Archeology Department project was affected to Chitradurga Fort beauty, Chitradurga News in Kannada
ಪುರಾತತ್ವ ಇಲಾಖೆ ಯೋಜನೆಯಿಂದ ಕಳೆಗುಂದಿದ ಚಿತ್ರದುರ್ಗ ಕೋಟೆ, ಪ್ರವಾಸಿಗರ ಕಿಡಿ
ಚಿತ್ರದುರ್ಗ ಅಂದಾಕ್ಷಣ ಏಳುಸುತ್ತಿನ ಕೋಟೆ ನೆನಪಾಗುತ್ತದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಐತಿಹಾಸಿಕ ಕೋಟೆ ಕಳೆಗುಂದಿದೆ. ಅಧಿಕಾರಿಗಳ ನಡೆ ಇತಿಹಾಸ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Updated on:Aug 19, 2024 | 10:45 AM

ಚಿತ್ರದುರ್ಗ ಅಂದಾಕ್ಷಣ ಏಳುಸುತ್ತಿನ ಕೋಟೆ ನೆನಪಾಗುತ್ತದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಐತಿಹಾಸಿಕ ಕೋಟೆ ಕಳೆಗುಂದಿದೆ. ಸಿಡಿಲಿಗೂ ಜಗ್ಗದ ಉಕ್ಕಿನ ಕೋಟೆ ಗೋಡೆಯೇ ಕಾಣದಂತೆ ಟಿಕೆಟ್ ಕೌಂಟರ್ ನಿರ್ಮಾಣ ಮಾಡುತ್ತಿರುವುದು ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣ ಆಗಿದೆ.

ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಕೋಟೆ ತನ್ನದೆಯಾದ ಇತಿಹಾಸ ಹೊಂದಿದೆ. ಕೋಟೆ ರಸ್ತೆಯಲ್ಲಿ ಕೋಟೆಯ ಗೋಡೆ ನೋಡುತ್ತ ಸಾಗುವುದೇ ಆನಂದ. ಆದರೆ, ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಕೋಟೆ ಆವರಣದಲ್ಲೇ ಸಾಲಾಗಿ ಟಿಕೆಟ್ ಕೌಂಟರ್ ಮತ್ತಿತರೆ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ.

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಟಿಕೆಟ್ ಕೌಂಟರ್ ಹಾಗೂ ಮತ್ತಿತರೆ ಕಟ್ಟಡಗಳನ್ನು ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಆದರೆ, ಈ ಯೋಜನೆಯಿಂದ ಕೋಟೆಯ ನೈಜ ಚಿತ್ರಣ, ಐತಿಹಾಸಿಕ ಹಿನ್ನೆಲೆಯ ಕೋಟೆಯ ಲಕ್ಷಣಕ್ಕೆ ಕುತ್ತು ಬಂದಿದೆ ಎಂಬುದು ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದರಿಂದ ಐತಿಹಾಸಿಕ ಕೋಟೆಯ ಗೋಡೆ ಹೊರ ನೋಟ ಕಾಣದಂತಾಗಿದ್ದು ಕೋಟೆಯನ್ನು ಮರೆಮಾಚಿದಂತಾಗುತ್ತಿದೆ. ಅಧಿಕಾರಿಗಳ ನಡೆ ಇತಿಹಾಸ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೆ ಈ ಬಗ್ಗೆ ಸರ್ಕಾರ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂಬುದು ಪ್ರವಾಸಿಗರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದು ಜಾರಿಕೊಂಡಿದ್ದಾರೆ.

ಒಟ್ಟಾರೆಯಾಗಿ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಏಳುಸುತ್ತಿನ ಕೋಟೆ ಅಂದಗೆಡುವಂತೆ ಮಾಡಿದ್ದಾರೆ.ಹೀಗಾಗಿ, ಕೇಂದ್ರ ಸರ್ಕಾರ, ಭಾರತೀಯ ಪುರಾತತ್ವ ಇಲಾಖೆ ಮತ್ತು ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ. ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಏಳುಸುತ್ತಿನ ಕೋಟೆ ಯಥಾಸ್ಥಿತಿ ಉಳಿಸಿಕೊಳ್ಳಬೇಕಿದೆ.
Published On - 10:45 am, Mon, 19 August 24



