‘ಬಾಹುಬಲಿ’ಗೆ ಹತ್ತು ವರ್ಷ, ಒಂದೆಡೆ ಸೇರಿ ಸಂಭ್ರಮಿಸಿದ ಘಟಾನುಘಟಿಗಳು
Bahubali the beginning: ಭಾರತದ ಸಿನಿಮಾ ರಂಗದ ದಿಕ್ಕನ್ನು ಬದಲಾಯಿಸಿದ ‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಜುಲೈ 10) ಹತ್ತು ವರ್ಷಗಳಾಗಿದೆ. ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾ 2015, ಜುಲೈ 10ರಂದು ಬಿಡುಗಡೆ ಆಗಿತ್ತು. ‘ಬಾಹುಬಲಿ’ ಸಿನಿಮಾಕ್ಕೆ ಹತ್ತು ವರ್ಷ ತುಂಬಿದ ಖುಷಿಯನ್ನು ಸಂಭ್ರಮಿಸಲು ‘ಬಾಹುಬಲಿ’ ಸಿನಿಮಾ ತಂಡ ಒಂದೆಡೆ ಸೇರಿ ಈ ಸಂಭ್ರಮಾಚರಣೆಯನ್ನು ಮಾಡಿದೆ. ಇಲ್ಲಿವೆ ಚಿತ್ರಗಳು...
Updated on: Jul 10, 2025 | 10:25 PM

ಭಾರತದ ಸಿನಿಮಾ ರಂಗದ ದಿಕ್ಕನ್ನು ಬದಲಾಯಿಸಿದ ‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಜುಲೈ 10) ಹತ್ತು ವರ್ಷಗಳಾಗಿದೆ. ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾ 2015, ಜುಲೈ 10ರಂದು ಬಿಡುಗಡೆ ಆಗಿತ್ತು.

‘ಬಾಹುಬಲಿ’ ಸಿನಿಮಾಕ್ಕೆ ಹತ್ತು ವರ್ಷ ತುಂಬಿದ ಖುಷಿಯನ್ನು ಸಂಭ್ರಮಿಸಲು ‘ಬಾಹುಬಲಿ’ ಸಿನಿಮಾ ತಂಡ ಒಂದೆಡೆ ಸೇರಿ ಈ ಸಂಭ್ರಮಾಚರಣೆಯನ್ನು ಮಾಡಿದೆ.

‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗಿ 10 ವರ್ಷ ಆಗಿರುವ ಕಾರಣ ಸಿನಿಮಾಗಳನ್ನು ಒಂದು ಮಾಡಿ ಒಂದೇ ಸಿನಿಮಾ ಆಗಿ ಬಿಡುಗಡೆ ಮಾಡಲಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಎರಡೂ ಸಿನಿಮಾಗಳನ್ನು ಒಂದೇ ಸಿನಿಮಾ ಆಗಿಸಿ ಬಿಡುಗಡೆಗೊಳಿಸಲಿದ್ದಾರೆ.

ನಿರ್ದೇಶಕ ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ನಾಸರ್, ಸತ್ಯರಾಜ್, ರಮ್ಯಾಕೃಷ್ಣ ಇನ್ನೂ ಹಲವಾರು ಮಂದಿ ಸಿನಿಮಾದಲ್ಲಿ ನಟಿಸಿದ ಪ್ರಮುಖ ನಟರು ಒಟ್ಟಿಗೆ ಸೇರಿ ಸಂಭ್ರಮಾಚರಣೆ ಮಾಡಿದ್ದಾರೆ.

ಸಿನಿಮಾದಲ್ಲಿ ಕೆಲಸ ಮಾಡಿದ ಹಲವಾರು ಮಂದಿ ತಂತ್ರಜ್ಞರು ಸಹ ಒಂದೆಡೆ ಸೇರಿ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿದ್ದರು. ಕ್ಯಾಮೆರಾಮ್ಯಾನ್ ಸೆಂಥಿಲ್, ಪ್ರೊಡಕ್ಷನ್ ಡಿಸೈನ್ ಸಬು ಸಿರಿಲ್, ಶ್ರೀನಿವಾಸ್ ಮೋಹನ್ ಹಾಜರಿದ್ದರು.

ಸಿನಿಮಾಕ್ಕಾಗಿ ಹಗಲು ರಾತ್ರಿ ದುಡಿತ ರಾಜಮೌಳಿ ಪತ್ನಿ ರಮಾ ರಾಜಮೌಳಿ ಮತ್ತು ರಾಜಮೌಳಿಯ ಅತ್ತಿಗೆ ಶ್ರೀವಲ್ಲಿ ಅವರುಗಳು ಇದ್ದರು. ಜೊತೆಗೆ ರಾಜಮೌಳಿ ಪುತ್ರ ಕಾರ್ತಿಕೇಯ ಸಹ ಇದ್ದರು. ಆದರೆ ಸಿನಿಮಾದ ನಾಯಕಿಯರು ಮಾತ್ರ ಹಾಜರಿರಲಿಲ್ಲ.




