
ನಮ್ಮ ಮೆಟ್ರೋದಲ್ಲಿ 37 ನಿಮಿಷದಲ್ಲಿ ಮಾನವ ಮೂತ್ರಪಿಂಡವನ್ನು ಬೆಂಗಳೂರಿನ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಗೆ ಸಾಗಾಟ ಮಾಡಲಾಗಿದೆ. ಆ ಮೂಲಕ ನಮ್ಮ ಮೆಟ್ರೋ ವೈದ್ಯಕೀಯ ನೆರವು ನೀಡಿದೆ.
ಕೋಲಾರದ ಜಾಲಪ್ಪ ಆಸ್ಪತ್ರೆಯಿಂದ ಬೆಂಗಳೂರಿನ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಗೆ ಮಾನವ ಮೂತ್ರಪಿಂಡ ಸಾಗಿಸಲು ನಮ್ಮ ಮೆಟ್ರೋ ನೆರವು ನೀಡಿದೆ. ಅಂಗಾಂಗ ಸಾಗಣೆಗೆ ಬಿಎಂಆರ್‌ಸಿಎಲ್ ವಿಶೇಷ ವ್ಯವಸ್ಥೆ ಮಾಡಿದ್ದು, ಆಸ್ಪತ್ರೆಗಳ ವೈದ್ಯಕೀಯ ತಂಡಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ.
ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದಿಮದ ಮಧ್ಯಾಹ್ನ 2:58ಕ್ಕೆ ಮೆಟ್ರೋ ರೈಲಿನಲ್ಲಿ ಕಿಡ್ನಿ ಸಾಗಿಸಲು ಆರಂಭಿಸಲಾಗಿದ್ದು, ಮಧ್ಯಾಹ್ನ 3:35ಕ್ಕೆ ಅತ್ತಿಗುಪ್ಪೆ ಮೆಟ್ರೋ ನಿಲ್ಹಾಣ ತಲುಪಿತು. ಕೇವಲ 37 ನಿಮಿಷಗಳಲ್ಲಿ ಸಾಗಾಟ ಮಾಡಲಾಗಿದೆ.
ಇನ್ನು ಅಂಗಾಂಗ ಸಾಗಣೆಯಲ್ಲಿ ಸಮಯದ ಮಹತ್ವ ಅರಿತು ಬಿಎಂಆರ್‌ಸಿಎಲ್‌ನಿಂದ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ವೈದೈಕೀಯ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಕಾರ್ಯಕ್ಕೆ ನೆರವಾಗಲು ಆಸ್ಪತ್ರೆಗಳ ವೈದ್ಯಕೀಯ ತಂಡದೊಂದಿಗೆ ಸಮನ್ವಯ ಸಾಧಿಸಿ ಅಂಗಾಂಗ ಸಾಗಣೆಗೆ ಸಹಕರಿಸಲಾಗಿದೆ.
ನಮ್ಮ ಮೆಟ್ರೋ ಇದುವರೆಗೆ ಒಟ್ಟು ಏಳು ಬಾರಿ ಮಾನವ ಅಂಗಾಂಗ ಸಾಗಣೆಗೆ ನೆರವು ನೀಡಿದೆ. ಒಂದು ಬಾರಿ ಯಕೃತ್ತು, ನಾಲ್ಕು ಬಾರಿ ಹೃದಯಗಳು ಹಾಗೂ ಒಂದು ಬಾರಿ ಒಂದು ಜೋಡಿ ಶ್ವಾಸಕೋಶಗಳ ಸಾಗಾಣೆ ಮಾಡಲಾಗಿದೆ.