AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ 2026: ಬ್ಯಾಂಕಿಂಗ್​ನಿಂದ ಹಿಡಿದು ರೈತರವರೆಗೆ ವಿವಿಧ ಕ್ಷೇತ್ರಗಳ ನಿರೀಕ್ಷೆಗಳಿವು

ನವದೆಹಲಿ, ಜನವರಿ 30: ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು 2026-27ರ ಸಾಲಿನ ವರ್ಷಕ್ಕೆ ಬಜೆಟ್ ಮಂಡಿಸುತ್ತಿದ್ದಾರೆ. ಹಲವು ಕ್ಷೇತ್ರಗಳಿಂದ ಈ ಬಜೆಟ್ ಬಗ್ಗೆ ನಿರೀಕ್ಷೆಗಳು ಹಲವಿವೆ. ತೆರಿಗೆ ಪಾವತಿದಾರರು, ಉದ್ಯಮ ವಲಯ, ಹಣಕಾಸು ಮಾರುಕಟ್ಟೆ, ಬ್ಯಾಂಕ್, ಕೃಷಿ, ಎಂಎಸ್​ಎಂಇ ಕ್ಷೇತ್ರದವರು ಈ ಬಜೆಟ್​ನಿಂದ ಏನೇನು ಅಪೇಕ್ಷಿಸುತ್ತಿದ್ದಾರೆ ಎನ್ನುವ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 30, 2026 | 11:52 AM

Share
ಹಣಕಾಸು ಮಾರುಕಟ್ಟೆ: ಜನರ ಉಳಿತಾಯ ಹಣ ಈಕ್ವಿಟಿ ಮತ್ತು ಮ್ಯೂಚುವಲ್ ಫಂಡ್​ಗಳತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಲಿಕ್ವಿಡಿಟಿ ಹೆಚ್ಚಿಸುವಂತಹ ಕ್ರಮಗಳನ್ನು ಬಜೆಟ್​ನಲ್ಲಿ ಕೈಗೊಳ್ಳಲಾಗಬಹುದು ಎಂದು ಹಣಕಾಸು ಮಾರುಕಟ್ಟೆ ಅಪೇಕ್ಷಿಸುತ್ತಿದೆ. ಸಾಲದ ಗುಣಮಟ್ಟ ರಾಜಿಯಾಗದ ರೀತಿಯಲ್ಲಿ ಸಾಲ ನೀಡುವಿಕೆಯನ್ನು ಹೆಚ್ಚಿಸಲು ಅಗತ್ಯವಾದ ವಿತ್ತೀಯ ಚೌಕಟ್ಟನ್ನು ಸರ್ಕಾರ ರೂಪಿಸಲಿ ಎಂದು ಬ್ಯಾಂಕಿಂಗ್ ಸೆಕ್ಟರ್ ಬಯಸುತ್ತಿದೆ.

1 / 5
ಕೃಷಿ: ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಅನುಭೋಗದ ಪಾಲು ಹೆಚ್ಚಿದೆ. ಅನುಭೋಗ ಹೆಚ್ಚಾಗಿ ಹರಿದುಬರುತ್ತಿರುವುದು ಗ್ರಾಮೀಣ ಭಾಗದಿಂದ. ಈ ಸೆಕ್ಟರ್​ನಲ್ಲಿ ಮೂಲಸೌಕರ್ಯ ಮತ್ತು ಸಾಲದ ಹರಿವು ಹೆಚ್ಚಿಸಿದರೆ ಮತ್ತಷ್ಟು ಪುಷ್ಟಿ ಸಿಗಬಹುದು. ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು, ಪಿಎಂ ಕಿಸಾನ್ ಇತ್ಯಾದಿ ರೈತಪರ ಯೋಜನೆಗಳಿಗೆ ಅನುದಾನ ಹೆಚ್ಚಬೇಕು ಎನ್ನುವ ಕೂಗು ಇದೆ.

2 / 5
ಗೃಹ ಮತ್ತು ತೆರಿಗೆ ಪಾವತಿದಾರರು: ಆದಾಯ ತೆರಿಗೆ ಸ್ವರೂಪದಲ್ಲಿ ಮತ್ತಷ್ಟು ಸರಳತೆ ಅಥವಾ ಸುಧಾರಣೆ ಆಗಬೇಕೆಂದು ನಿರೀಕ್ಷಿಸುತ್ತಿದ್ದಾರೆ ತೆರಿಗೆ ಪಾವತಿದಾರರು. ಹೊಸ ಟ್ಯಾಕ್ಸ್ ರೆಜೀಮ್​ನಲ್ಲಿ ಡಿಡಕ್ಷನ್ ಅವಕಾಶ ಹೆಚ್ಚಿಸುವುದು; ಗೃಹಸಾಲದ ಬಡ್ಡಿ ಹಣಕ್ಕೆ ಡಿಡಕ್ಷನ್ ಸೌಲಭ್ಯ ನೀಡುವುದು; ರಿಟೈರ್ಮೆಂಟ್ ಸೇವಿಂಗ್ಸ್ ವಿಸ್ತೃತಗೊಳಿಸುವುದು ಇತ್ಯಾದಿ ಕ್ರಮ ತೆಗೆದುಕೊಳ್ಳಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

3 / 5
ಎಂಎಸ್​ಎಂಇಗಳು: ಮಧ್ಯಮ ಮತ್ತು ಸಣ್ಣ ಉದ್ದಿಮೆಗಳು ಬಲಗೊಂಡಷ್ಟೂ ಆರ್ಥಿಕ ವಿಕಾಸ ಹೆಚ್ಚಾಗುತ್ತದೆ, ಜನರ ತಲಾದಾಯವೂ ಹೆಚ್ಚುತ್ತದೆ. ಸಣ್ಣ ಉದ್ದಿಮೆಗಳಿಗೆ ಸುಲಭ ಸಾಲ, ಉದ್ಯಮ ಸ್ನೇಹಿ ವಾತಾವರಣ ಇತ್ಯಾದಿ ಸೌಕರ್ಯಗಳನ್ನು ಹೆಚ್ಚಿಸಬೇಕು ಎನ್ನುವುದು ಈ ಕ್ಷೇತ್ರದ ಒತ್ತಾಯ.

4 / 5
ಉದ್ಯಮ ಮತ್ತು ವ್ಯವಹಾರ: ಕೈಗಾರಿಕಾ ಉತ್ಪನ್ನ ಹಾಗೂ ಹೂಡಿಕೆ ಭರವಸೆದಾಯಕವಾಗಿರುವ ಹಿನ್ನೆಲೆಯಲ್ಲಿ ಉದ್ಯಮ ವಲಯ, ಈ ಪರಿಸ್ಥಿತಿಯನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳಲೆಂದು ಆಶಿಸಿದೆ. ಉದ್ಯಮ ವಲಯದ ನಿಯಮಗಳನ್ನು ಸರಳಗೊಳಿಸುವುದು, ಇನ್​ಫ್ರಾಸ್ಟ್ರಕ್ಚರ್​ಗೆ ವೆಚ್ಚ ಮಾಡುವುದು, ಬಂಡವಾಳ ಸುಲಭವಾಗಿ ಸಿಗುವಂತಾಗುವುದು ಈ ನಿಟ್ಟಿನಲ್ಲಿ ಸರ್ಕಾರ ನೀತಿ ರೂಪಿಸಲಿ ಎಂದು ಉದ್ಯಮ ವಲಯ ಬಯಸುತ್ತಿದೆ.

5 / 5