- Kannada News Photo gallery Basavaraj Bommai elected as New Chief Minister of Karnataka here are some rare photos
ಚಿತ್ರನೋಟ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದುಕಿನ ಮಹತ್ವದ ಕ್ಷಣಗಳು
Basavaraj Bommai Photos: ಹಿರಿಯ ನಾಯಕ ಅಜಾತಶತ್ರು ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಶಾಸಕಾಂಗ ಸಭೆ ಆಯ್ಕೆ ಮಾಡಿದೆ. ಆಡಳಿತದ ಛಾತಿ ಮತ್ತು ಸಂಘಟನೆಯ ಚಾತುರ್ಯದ ಜೊತೆಗೆ ಹೈಕಮಾಂಡ್ ಅನುಮೋದನೆ, ಶಾಸಕರ ವಿಶ್ವಾಸ ಮತ್ತು ಯಡಿಯೂರಪ್ಪ ಅವರ ನಂಬಿಕೆಯಿಂದ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಗಾದಿ ಒಲಿದು ಬಂದಿದೆ. ಬಸವರಾಜ ಬೊಮ್ಮಾಯಿ ಅವರ ಬದುಕನ್ನು ಚಿತ್ರಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
Updated on:Jul 27, 2021 | 10:43 PM

1996ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮವಾಗಿದ್ದ ಬಸವರಾಜ ಬೊಮ್ಮಾಯಿ ನಂತರದ ದಿನಗಳಲ್ಲಿ ಹಲವು ಮಹತ್ವದ ಜವಾಬ್ದಾರಿ ನಿರ್ವಹಿಸಿದರು. ಕಳೆದ ಅವಧಿಯ ಬಿಜೆಪಿ ಸರ್ಕಾರದಲ್ಲಿ ಹಿಂದೆ ಜಲಸಂಪನ್ಮೂಲ ಸಚಿವರು, 2019ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Bommai-Smiling

ಬಸವರಾಜ ಬೊಮ್ಮಾಯಿ ಅವರಿಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ. ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ನಾಯಕರ ಪೈಕಿ ಬಸವರಾಜ ಬೊಮ್ಮಾಯಿ ಸಹ ಒಬ್ಬರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಬಿಜೆಪಿಯ ಹಿರಿಯ ನಾಯಕರು ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇರಿಸಿದ್ದಾರೆ.

mp renukacharya and dn devaraj appointed as political secretary to cm basavaraj bommai

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಬಸವರಾಜ ಬೊಮ್ಮಾಯಿ. ಬಿಜೆಪಿಯ ಹಲವು ರಾಜ್ಯಗಳ ಮುಂಚೂಣಿ ನಾಯಕರ ಒಡನಾಟ ಬೊಮ್ಮಾಯಿ ಅವರಿಗಿದೆ.

ಕೊರೊನಾ ಸಂಕಷ್ಟದ ವೇಳೆ ಗೃಹ ಸಚಿವರಾಗಿ ಆಡಳಿತ ಯಂತ್ರವನ್ನು ಸುಸ್ಥಿತಿಯಲ್ಲಿಡಲು ಬಸವರಾಜ ಬೊಮ್ಮಾಯಿ ಶ್ರಮಿಸಿದ್ದರು.

ರಾಜಕೀಯ ಜೀವನದ ಆರಂಭಿಕ ದಿನಗಳನ್ನು ಜನತಾ ಪರಿವಾರದಲ್ಲಿ ಕಳೆದ ಬಸವರಾಜ ಬೊಮ್ಮಾಯಿ ಬಿಜೆಪಿಗೆ ಬಂದಿದ್ದು ಮಧ್ಯ ವಯಸ್ಸು ದಾಟಿದ ಮೇಲೆ. ಆದರೆ ಅವರ ಪಕ್ಷನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ.
Published On - 10:40 pm, Tue, 27 July 21




