- Kannada News Photo gallery Basavaraj Bommai takes oath as Chief Minister of Karnataka today at Raj Bhavan Bengaluru
Basavaraj Bommai Photos: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ; ಫೋಟೋಗಳು ಇಲ್ಲಿವೆ
ಬಸವರಾಜ ಬೊಮ್ಮಾಯಿ: ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಚಿವ ಅರ್. ವಿ. ದೇಶಪಾಂಡೆ, ಸೇರಿದಂತೆ ಹಿಂದಿನ ಸಚಿವ ಸಂಪುಟದ ಬಹುತೇಕ ಸಚಿವರು, ಅನೇಕ ಬಿಜೆಪಿ ಶಾಸಕರು, ಬಿಜೆಪಿ ಮುಖಂಡರು ಸಮಾರಂಭದಲ್ಲಿ ಭಾಗಿಯಾಗಿದ್ದರು.
Updated on:Jul 28, 2021 | 12:06 PM

ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಸವರಾಜ ಬೊಮ್ಮಾಯಿಯವರಿಗೆ ಪ್ರಮಾಣ ವಚನ ಭೋದಿಸಿದ್ದು, ದೇವರ ಹೆಸರಿನಲ್ಲಿ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ

ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ರಾಷ್ಟ್ರ ಗೀತೆ ಮೊಳಗಿತು. ಈ ವೇಳೆ ಎಲ್ಲರು ನಿಂತುಕೊಂಡು ರಾಷ್ಟ್ರ ಗೀತೆಗೆ ಗೌರವ ಸಲ್ಲಿಸಿದರು.

ಪ್ರಮಾಣವಚನ ಸ್ವೀಕರಿಸುವ ಮೊದಲು ಬೊಮ್ಮಾಯಿ ಬಿ.ಎಸ್.ಯಡಿಯೂರಪ್ಪನವರ ಕಾಲು ಮುಟ್ಟಿ ಆಶೀರ್ವಾದ ಪಡೆದರು. ಅಧಿಕಾರ ಸ್ವೀಕಾರದ ಬಳಿಕ ಯಡಿಯೂರಪ್ಪ ಬೊಮ್ಮಾಯಿಗೆ ಹೂವಿನ ಗುಚ್ಚ ನೀಡಿ ಶುಭಕೋರಿದರು.

30ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ವೇದಿಕೆಯಿಂದ ತೆಳಿದರು.

ಮುಖ್ಯಮಂತ್ರಿ ಕಚೇರಿಯಲ್ಲಿ ಯಡಿಯೂರಪ್ಪ ಹೆಸರನ್ನು ಬದಲಿಸಿ ಸಿಎಂ ಬಸವರಾಜ ಬೊಮ್ಮಾಯಿ ಹೆಸರಿನ ನಾಮಫಲಕವನ್ನು ಹಾಕಲಾಗಿದೆ.

ತಂದೆ ಎಸ್.ಆರ್.ಬೊಮ್ಮಾಯಿ ಜೊತೆ ಇರುವ ಬಸವರಾಜ ಬೊಮ್ಮಾಯಿ. ಎಸ್.ಆರ್.ಬೊಮ್ಮಾಯಿ ರಾಜ್ಯದ 11ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 1988ರಿಂದ 1989ರ ವರೆಗೆ ಎಸ್.ಆರ್.ಬೊಮ್ಮಾಯಿ ಸೇವೆ ಸಲ್ಲಿಸಿದ್ದಾರೆ.
Published On - 11:40 am, Wed, 28 July 21



















