AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Carlos Alcaraz: ನಡಾಲ್, ಜೊಕೊವಿಚ್​ರನ್ನು ಸೋಲಿಸಿ ಮ್ಯಾಡ್ರಿಡ್ ಓಪನ್ ಗೆದ್ದ 19 ವರ್ಷದ ಕಾರ್ಲೋಸ್..!

Carlos Alcaraz: ಕಾರ್ಲೋಸ್ ಅಲ್ಕರಾಜ್ ತನ್ನ ಮ್ಯಾಡ್ರಿಡ್ ಓಪನ್ ವಿಜಯದ ನಂತರ ಇತ್ತೀಚಿನ ATP ಶ್ರೇಯಾಂಕಗಳಲ್ಲಿ ವೃತ್ತಿಜೀವನದ ಅತ್ಯುತ್ತಮ ನಂ. 6 ಕ್ಕೆ ಏರಿದರು. ಒಂದು ವರ್ಷದ ಹಿಂದೆ, ಸ್ಪೇನ್ ದೇಶದ ಈ ಯುವ ಆಟಗಾರ 120 ನೇ ಸ್ಥಾನದಲ್ಲಿದ್ದರು.

TV9 Web
| Updated By: ಝಾಹಿರ್ ಯೂಸುಫ್|

Updated on: May 10, 2022 | 2:56 PM

Share
ಟೆನಿಸ್ ಅಂಗಳದ ಅಂಗಳದ ಅತಿರಥ ಮಹಾರಥರು ಎನಿಸಿಕೊಂಡಿರುವ ರೆಫಲ್ ನಡಾಲ್, ನೊವಾಕ್ ಜೊಕೊವಿಚ್​ರಂತಹ ಆಟಗಾರರನ್ನು ಸೋಲಿಸಿ 19 ವರ್ಷದ ಕಾರ್ಲೋಸ್ ಅಲ್ಕರಾಜ್ ಮ್ಯಾಡ್ರಿಡ್​ ಓಪನ್​ ಚಾಂಪಿಯನ್​ ಎನಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-3, 6-1 ರ ನೇರ ಸೆಟ್​ಗಳ ಮೂಲಕ ಸೋಲಿಸಿ ಸ್ಪೆನ್ ಅಂಗಳದ ಹೊಸ ಟೆನಿಸ್ ತಾರೆಯಾಗಿ ಕಾರ್ಲೋಸ್ ಕಾಣಿಸಿಕೊಂಡಿದ್ದಾರೆ.

1 / 6
ಕ್ವಾರ್ಟರ್-ಫೈನಲ್‌ನಲ್ಲಿ ರಫೆಲ್ ನಡಾಲ್‌ ಅವರನ್ನು 6-2, 1-6, 6-3 ಸೆಟ್‌ಗಳಿಂದ ಸೋಲಿಸಿದ್ದ ಕಾರ್ಲೋಸ್ ಅಲ್ಕರಾಜ್ ಇಡೀ ವಿಶ್ವದ ಗಮನ ಸೆಳೆದಿದ್ದರು. ಇದಾದ ಬಳಿಕ ಸೆಮಿಫೈನಲ್​ನಲ್ಲಿ ವಿಶ್ವದ ನಂ. 1 ಆಟಗಾರ ನೊವಾಕ್ ಜೊಕೊವಿಕ್ ಅವರ ವಿರುದ್ದ 3 ಗಂಟೆ, 36 ನಿಮಿಷಗಳಲ್ಲಿ ಹೋರಾಟದಲ್ಲಿ 6-7(5), 7-5, 7-6(5) ಸೆಟ್‌ಗಳಿಂದ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದರು.

2 / 6
ಕ್ಲೇ ಕೋರ್ಟ್ ಈವೆಂಟ್‌ನಲ್ಲಿ ಮತ್ತು ಎಲ್ಲಾ ಅಂಗಳದಲ್ಲೂ 41 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಇಬ್ಬರು ದಂತಕಥೆಗಳಾದ ನಡಾಲ್ ಮತ್ತು ಜೊಕೊವಿಚ್ ಅವರನ್ನು ಸೋಲಿಸಿದ ಹದಿಹರೆಯದ ಆಟಗಾರನಾಗಿ ಇದೀಗ ಕಾರ್ಲೋಸ್ ಅಲ್ಕರಾಜ್ ಹೊಸ ಅಧ್ಯಾಯ ಬರೆದಿದ್ದಾರೆ.

3 / 6
ಪ್ರಸ್ತುತ ಕಾರ್ಲೋಸ್ ಅವರ ಆಟದ ಶೈಲಿಯನ್ನು ನಡಾಲ್‌ ಅವರ ಆಟಕ್ಕೆ ಹೋಲಿಸಲಾಗುತ್ತಿರುವುದು ವಿಶೇಷ. ನಡಾಲ್‌ನಂತೆಯೇ, 19 ವರ್ಷದ ಯುವ ಆಟಗಾರ ಫೋರ್‌ಹ್ಯಾಂಡ್ ಅನ್ನು ಗ್ರೌಂಡ್‌ಸ್ಟ್ರೋಕ್‌ಗಳಲ್ಲಿ ಅತ್ಯುತ್ತಮ ನಿಯಂತ್ರಣ ಹೊಂದಿದ್ದಾರೆ. ಹಾಗೆಯೇ ಬೇಸ್‌ಲೈನ್‌ನಿಂದ ಅಂಕಗಳನ್ನು ನಿಯಂತ್ರಿಸುವ ಮತ್ತು ಗೆಲ್ಲುವ ಕೌಶಲ್ಯವನ್ನು ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಕಾರ್ಲೋಸ್ ಅಲ್ಕರಾಜ್ ಟೆನಿಸ್ ಅಂಗಳವನ್ನು ಆಳಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

4 / 6
ಕಾರ್ಲೋಸ್ ಅವರ ಸಾಧನೆಗಳನ್ನು ಮೆಲುಕು ಹಾಕುವುದಾದರೆ, ವಿಶ್ವ ನಂ.3 ಸ್ಟೆಫಾನೋಸ್ ಸಿಟ್ಸಿಪಾಸ್‌ ವಿರುದ್ದ US ಓಪನ್ 2021 ರ 4 ನೇ ಸುತ್ತನ್ನು ತಲುಪಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ವರ್ಷದ ಆರಂಭದಲ್ಲಿ, ಅಲ್ಕಾರಾಜ್ ಆಸ್ಟ್ರೇಲಿಯನ್ ಓಪನ್‌ನೊಂದಿಗೆ ತನ್ನ ಗ್ರ್ಯಾಂಡ್ ಸ್ಲಾಮ್ ಚೊಚ್ಚಲ ಪಂದ್ಯವನ್ನು ಆಡಿದ್ದರು. ಹಾಗೆಯೇ ವಿಂಬಲ್ಡನ್‌ ಮತ್ತು ಫ್ರೆಂಚ್ ಓಪನ್‌ನಲ್ಲಿ ಅವರ ಓಟವು 3 ನೇ ಸುತ್ತಿನಲ್ಲಿ ಕೊನೆಗೊಂಡಿತು.

5 / 6
ಕಾರ್ಲೋಸ್ ಅಲ್ಕರಾಜ್ ತನ್ನ ಮ್ಯಾಡ್ರಿಡ್ ಓಪನ್ ವಿಜಯದ ನಂತರ ಇತ್ತೀಚಿನ ATP ಶ್ರೇಯಾಂಕಗಳಲ್ಲಿ ವೃತ್ತಿಜೀವನದ ಅತ್ಯುತ್ತಮ ನಂ. 6 ಕ್ಕೆ ಏರಿದರು. ಒಂದು ವರ್ಷದ ಹಿಂದೆ, ಸ್ಪೇನ್ ದೇಶದ ಈ ಯುವ ಆಟಗಾರ 120 ನೇ ಸ್ಥಾನದಲ್ಲಿದ್ದರು. ಅಂದರೆ ಕೇವಲ ಒಂದೇ ವರ್ಷದಲ್ಲಿ ಕಾರ್ಲೋಸ್ ಅಲ್ಕರಾಜ್ ಬರೋಬ್ಬರಿ 114 ಸ್ಥಾನ ಮೇಲೇಕ್ಕೇರಿದ್ದಾರೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ