- Kannada News Photo gallery Beauty Tips Try this 8 Simple Ways To Get Rid Of Wrinkles On your Face Naturally
Skin Care: ಮುಖದ ಸುಕ್ಕು ನಿವಾರಣೆಗೆ ಇಲ್ಲಿ 8 ನೈಸರ್ಗಿಕ ಸೂತ್ರಗಳು
ನಿಮ್ಮ ತ್ವಚೆಯನ್ನು ಸುಕ್ಕುಮುಕ್ತವಾಗಿಡಲು ಒಂದು ಸುಲಭವಾದ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು. ತ್ವಚೆಯನ್ನು ಹೈಡ್ರೀಕರಿಸಲು ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ. ಆಲಿವ್ ಎಣ್ಣೆ ಸುಕ್ಕುಗಳಿಗೆ ಮತ್ತೊಂದು ನೈಸರ್ಗಿಕ ಮತ್ತು ಪರಿಣಾಮಕಾರಿ ಮನೆಮದ್ದು.
Updated on: Sep 09, 2023 | 3:33 PM

ಮುಖದಲ್ಲಿ ಸುಕ್ಕುಗಳು ಮೂಡತೊಡಗಿದಂತೆ ನಮ್ಮ ಆತ್ಮವಿಶ್ವಾಸವೂ ಕಡಿಮೆಯಾಗುತ್ತಾ ಹೋಗುತ್ತದೆ. ಮುಖದಲ್ಲಿ ಸುಕ್ಕು ಮೂಡಲು ವಯಸ್ಸಾಗಲೇ ಬೇಕೆಂದೇನೂ ಇಲ್ಲ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಮಾಲಿನ್ಯ, ಧೂಮಪಾನ ಅಥವಾ ಪೌಷ್ಟಿಕಾಂಶದ ಕೊರತೆಗಳು ಮುಖದ ಮೇಲಿನ ಸುಕ್ಕುಗಳಿಗೆ ಕಾರಣವಾಗುವ ಕೆಲವು ಅಂಶಗಳಾಗಿವೆ. ಸರಳವಾದ ಮನೆಮದ್ದುಗಳ ಸಹಾಯದಿಂದ ನೀವು ನಿಮ್ಮ ಮುಖದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದರ ಮಾಹಿತಿ ಇಲ್ಲಿದೆ.

1. ಮೊಟ್ಟೆಯ ಬಿಳಿಭಾಗ: ಮೊಟ್ಟೆಗಳು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ನಿಮ್ಮ ಚರ್ಮದ ಸೌಂದರ್ಯಕ್ಕೆ ಮೊಟ್ಟೆಯ ಬಿಳಿಭಾಗವು ನೈಸರ್ಗಿಕ ಪರಿಹಾರವಾಗಿದೆ.

ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗವನ್ನು ಹಾಕಿಕೊಂಡು ಅದನ್ನು ನೇರವಾಗಿ ನಿಮ್ಮ ಚರ್ಮದ ಮೇಲೆ ಹಚ್ಚಿರಿ. ನಂತರ ಲಘುವಾಗಿ ಮಸಾಜ್ ಮಾಡಿ ಮತ್ತು 15 ನಿಮಿಷಗಳ ಕಾಲ ಕುಳಿತುಕೊಳ್ಳಿ. ನಂತರ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಟ್ಟೆಯಲ್ಲಿನ ಪ್ರೋಟೀನ್, ವಿಟಮಿನ್ ಬಿ ಮತ್ತು ಇ ನಿಮ್ಮ ಮುಖದ ಚರ್ಮವನ್ನು ಬಿಗಿಗೊಳಿಸುತ್ತದೆ.

2. ಆಲಿವ್ ಎಣ್ಣೆ: ಆಲಿವ್ ಎಣ್ಣೆ ಸುಕ್ಕುಗಳಿಗೆ ಮತ್ತೊಂದು ನೈಸರ್ಗಿಕ ಮತ್ತು ಪರಿಣಾಮಕಾರಿ ಮನೆಮದ್ದು. ಮಲಗುವ ಮುನ್ನ ನಿಮ್ಮ ಚರ್ಮದ ಮೇಲೆ ಈ ಎಣ್ಣೆಯ ಕೆಲವು ಹನಿಗಳಿಂದ ಮಸಾಜ್ ಮಾಡಿ. ಬಳಿಕ ಅದನ್ನು ಟವೆಲ್ನಿಂದ ಸ್ವಚ್ಛಗೊಳಿಸಿ.

3. ನಿಂಬೆ ರಸ: ವಿಟಮಿನ್ ಸಿ ಸಮೃದ್ಧವಾಗಿರುವ ಲಿಂಬೆ ಹಣ್ಣು ನೈಸರ್ಗಿಕವಾಗಿ ಸುಕ್ಕುಗಳಿಗೆ ಚಿಕಿತ್ಸೆ ನೀಡಲು ಉತ್ತಮ ಮಾರ್ಗವಾಗಿದೆ. ಸ್ವಲ್ಪ ನಿಂಬೆಹಣ್ಣನ್ನು ತುಂಡು ಮಾಡಿ ಮತ್ತು ಅದರ ರಸವನ್ನು ನಿಮ್ಮ ಮುಖದ ಎಲ್ಲಾ ಕಡೆ ಮಸಾಜ್ ಮಾಡಿ.

ನಿಂಬೆಯಲ್ಲಿರುವ ಆಮ್ಲೀಯ ಗುಣಗಳು ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಕಾಣಲು ಸಹಾಯ ಮಾಡುತ್ತದೆ ಮತ್ತು ಸುಕ್ಕುಗಳನ್ನು ತಗ್ಗಿಸುತ್ತದೆ.

4. ಅಲೋವೆರಾ: ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದನ್ನು ನಿಮ್ಮ ಚರ್ಮಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಅಥವಾ ಅದು ಒಣಗುವವರೆಗೆ ಕಾಯಿರಿ. ನಂತರ ಅದನ್ನು ತೊಳೆಯಿರಿ. ನೀವು ಈ ಜೆಲ್ ಅನ್ನು ಕೆಲವು ವಿಟಮಿನ್ ಇ ಎಣ್ಣೆಯೊಂದಿಗೆ ಕೂಡ ಬೆರೆಸಬಹುದು.

5. ಬಾಳೆಹಣ್ಣುಗಳು: ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ ನಮ್ಮ ಸೌಂದರ್ಯಕ್ಕೂ ಅಷ್ಟೇ ಉಪಯುಕ್ತವಾದುದು. ಎರಡು ಬಾಳೆಹಣ್ಣುಗಳನ್ನು ಮ್ಯಾಶ್ ಮಾಡಿ ಮತ್ತು ಪೇಸ್ಟ್ ಮಾಡಿ. ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಅರ್ಧ ಗಂಟೆ ಬಿಟ್ಟು ನಂತರ ತೊಳೆಯಿರಿ.

6. ಕ್ಯಾರೆಟ್: ಕ್ಯಾರೆಟ್‌ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರಿಂದಾಗಿ ಚರ್ಮವನ್ನು ನಯವಾಗಿ ಮತ್ತು ಸುಕ್ಕು ಮುಕ್ತವಾಗಿ ಇರಿಸುತ್ತದೆ.

ನೀವು ಪ್ರತಿದಿನ ನಿಮ್ಮ ಮುಖಕ್ಕೆ ಕ್ಯಾರೆಟ್ ಪೇಸ್ಟ್ ಅನ್ನು ಹಚ್ಚಿಕೊಳ್ಳಬಹುದು. ಕ್ಯಾರೆಟ್ ಅನ್ನು ಬೇಯಿಸಿ, ಸ್ವಲ್ಪ ಜೇನುತುಪ್ಪದೊಂದಿಗೆ ಪೇಸ್ಟ್ ಆಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ನಂತರ ತೊಳೆಯಿರಿ.

7. ಅನಾನಸ್: ಅನಾನಸ್ ಕಿಣ್ವಗಳನ್ನು ಹೊಂದಿದ್ದು ಅದು ನಿಮ್ಮ ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈ ಕಿಣ್ವಗಳು ಚರ್ಮದ ತೇವಾಂಶವನ್ನು ಸುಧಾರಿಸುತ್ತದೆ. ಇದು ಫೈಬರ್, ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.

8. ನೀರು ಕುಡಿಯಿರಿ: ನಿಮ್ಮ ತ್ವಚೆಯನ್ನು ಸುಕ್ಕುಮುಕ್ತವಾಗಿಡಲು ಒಂದು ಸುಲಭವಾದ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು.

ತ್ವಚೆಯನ್ನು ಹೈಡ್ರೀಕರಿಸಲು ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ. ನಿಮ್ಮ ಚರ್ಮವನ್ನು ಸುಕ್ಕುಗಳಿಂದ ಮುಕ್ತವಾಗಿಡಲು ಪ್ರತಿದಿನ 2 ಲೀಟರ್ ನೀರು ಕುಡಿಯಿರಿ.
























