Benefits Of Sleeping Early: ರಾತ್ರಿ ಬೇಗ ನಿದ್ರೆ ಮಾಡುವುದರಿಂದ ಎಷ್ಟೇಲ್ಲ ಪ್ರಯೋಜನಗಳಿವೆ ಗೊತ್ತಾ..? ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 13, 2022 | 8:00 AM

ಬಿಡುವಿಲ್ಲದ ಇಂದಿನ ಜೀವನದಲ್ಲಿ ಜನರು ಹೆಚ್ಚಾಗಿ ರಾತ್ರಿ ತಡವಾಗಿ ಮಲಗುತ್ತಾರೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಪಾಯಕಾರಿ ಎಂದು ಸಾಬೀತಾಗಿದೆ.

1 / 5
ಬಿಡುವಿಲ್ಲದ ಇಂದಿನ ಜೀವನದಲ್ಲಿ ಜನರು ಹೆಚ್ಚಾಗಿ ರಾತ್ರಿ ತಡವಾಗಿ ಮಲಗುತ್ತಾರೆ. ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸುಂದರ ರಾತ್ರಿಯನ್ನು ಕಳೆಯುತ್ತಾರೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಪಾಯಕಾರಿ ಎಂದು ಸಾಬೀತಾಗಿದೆ. ಇದರಿಂದ ನೀವು ದಿನವಿಡೀ ಆಯಾಸವನ್ನು ಅನುಭವಿಸುವುದು ಮಾತ್ರವಲ್ಲ, ನೀವು ಹೆಚ್ಚಿನ ಒತ್ತಡಕ್ಕೂ ಒಳಗಾಗಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಮಲಗುವುದು ಬಹಳ ಮುಖ್ಯ. ರಾತ್ರಿ ಬೇಗ ಮಲಗುವುದರಿಂದ ಆಗುವ ಲಾಭಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

2 / 5
ಅಧ್ಯಯನದ ಪ್ರಕಾರ ಸಾಕಷ್ಟು ನಿದ್ರೆ ಮಾಡದ ಕಾರಣ ತೂಕವು ಹೆಚ್ಚಾಗಬಹುದು ಎನ್ನಲಾಗುತ್ತಿದೆ. ನೀವು ಕಡಿಮೆ ನಿದ್ರೆ ಮಾಡಿದರೆ ತೂಕವನ್ನು ಕಳೆದುಕೊಳ್ಳುವುದು ಹೆಚ್ಚು ಕಷ್ಟಕರವಾಗಿರುತ್ತದೆ. ನಿದ್ರೆಯ ಕೊರತೆಯಿಂದಾಗಿ ನಿಮ್ಮ ತೂಕವೂ ಹೆಚ್ಚಾಗಬಹುದು. ಅದಕ್ಕಾಗಿಯೇ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದು ಬಹಳ ಮುಖ್ಯ.

3 / 5
ನಿದ್ರೆಯ ಕೊರತೆಯಿಂದಾಗಿ ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದರಿಂದ ನೀವು ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗಬಹುದು. ಅದಕ್ಕಾಗಿಯೇ ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವೈರಲ್ ಅಥವಾ ಸೋಂಕಿನ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ.

4 / 5
ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡದಿರುವುದರಿಂದ ನೀವು ಮಧುಮೇಹ, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡದಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ. ಇದರೊಂದಿಗೆ ನೀವು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

5 / 5
ಸರಿಯಾದ ನಿದ್ದೆ ಮಾಡದ ಕಾರಣ, ನೀವು ದಿನವಿಡೀ ದಣಿದಿರುವಂತೆ ಕಾಣುತ್ತೀರಿ. ಜೊತೆಗೆ ನೀವು ಒತ್ತಡದ ಜೀವನ ಬದುಕುತ್ತೀರಿ ಎಂದು ಕಂಡುಬರುತ್ತದೆ. ನೀವು ಕೆಲವೊಮ್ಮೆ ವಿಷಯಗಳ ಬಗ್ಗೆ ನಕಾರಾತ್ಮಕವಾಗಿರಬಹುದು. ಮತ್ತೊಂದೆಡೆ, ನೀವು ಸಮಯಕ್ಕೆ ಮಲಗಿದಾಗ, ನೀವು ದಿನವಿಡೀ ಶಕ್ತಿಯುತವಾಗಿರುತ್ತೀರಿ.