Bhavana Ramanna: ಕನ್ನಡದ ಜನಪ್ರಿಯ ನಟಿ ಭಾವನಾ ರಾಮಣ್ಣ ವಯಸ್ಸು 40 ಆದರೂ ಮದುವೆ ಅಗಿಲ್ಲ, ಆದರೆ ಅವರು ಐವಿಎಫ್ ತಂತ್ರಜ್ಞಾನದ ಮೂಲಕ ನಟಿ ಭಾವನಾ ರಾಮಣ್ಣ ಗರ್ಭ ಧರಿಸಿದ್ದರು. ಅವರು ಅವಳಿ ಮಕ್ಕಳಿಗೆ ತಾಯಿ ಆಗುವವರಿದ್ದರು. ಈ ವಿಷಯವನ್ನು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದ ನಟಿಗೆ ಆಘಾತವಾಗಿದೆ.
ಭಾವನಾ ರಾಮಣ್ಣ ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ಭಾವನಾ ಅವರು ನಟಿಯಾಗಿರುವ ಜೊತೆಗೆ ರಾಜಕಾರಣಿಯೂ ಹೌದು. ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ.
1 / 7
ಭಾವನಾ ರಾಮಣ್ಣ ಮದುವೆ ಆಗಿಲ್ಲ. ಆದರೆ ತಾಯಿಯಾಗುವ ಬಯಕೆ ಅವರಲ್ಲಿ ಅದಮ್ಯವಾಗಿತ್ತು. ಹಾಗಾಗಿ ಅವರು ಕೃತಕ ಗರ್ಭಧಾರಣೆ ಮೂಲಕ ತಾಯಿ ಆಗುವ ಕನಸು ಕಂಡಿದ್ದರು.
2 / 7
ಐವಿಎಫ್ ತಂತ್ರಜ್ಞಾನದ ಮೂಲಕ ನಟಿ ಭಾವನಾ ರಾಮಣ್ಣ ಗರ್ಭ ಧರಿಸಿದ್ದರು. ಅವರು ಅವಳಿ ಮಕ್ಕಳಿಗೆ ತಾಯಿ ಆಗುವವರಿದ್ದರು. ಈ ವಿಷಯವನ್ನು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ತಮ್ಮ ನಿರ್ಧಾರಕ್ಕೆ ಬಂದ ಟೀಕೆಗಳನ್ನು ವಿರೋಧಿಸಿದ್ದರು.
3 / 7
ಭಾವನಾ ರಾಮಣ್ಣ ಅವರು ಇತ್ತೀಚೆಗಷ್ಟೆ ಸೀಮಂತ ಸಹ ಮಾಡಿಕೊಂಡಿದ್ದರು. ಅವರ ಆಪ್ತರು, ಕುಟುಂಬದವರು ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರಿಗೆ ಹರಿಸಿದ್ದರು.
4 / 7
ಆದರೆ ಭಾವನಾ ರಾಮಣ್ಣ ಅವರಿಗೆ ಅವರ ಪ್ರಸವದ ಏಳನೇ ತಿಂಗಳಲ್ಲಿ ಆಘಾತ ಎದುರಾಯ್ತು, ಸ್ಕ್ಯಾನಿಂಗ್ನಲ್ಲಿ ಗರ್ಭದಲ್ಲಿದ್ದ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಸಮಸ್ಯೆ ಎದುರಾಗಿತ್ತು.
5 / 7
ಹೀಗಾಗಿ ವೈದ್ಯರ ಸಲಹೆಯಂತೆ ಎಂಟನೇ ತಿಂಗಳಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿ, ಅವಳಿ ಮಕ್ಕಳಲ್ಲಿ ಒಂದು ಮಗು ನಿಧನ ಹೊಂದಿದ್ದು ಇನ್ನೊಂದು ಮಗು ಆರೋಗ್ಯವಾಗಿದೆ. ಭಾವನಾ ಸಹ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
6 / 7
ಅಂದಹಾಗೆ ಭಾವನಾ ಅವರಿಗೆ ಹೆಣ್ಣು ಮಗುವಿನ ಜನನವಾಗಿದೆ. ಜೋಡಿ ಮಕ್ಕಳ ತಾಯಿಯಾಗುವ ನಿರೀಕ್ಷೆಯಲ್ಲಿದ್ದ ಭಾವನಾ ಅವರು ಈಗ ಒಂದು ಮಗುವನ್ನು ಕಳೆದುಕೊಂಡಿದ್ದಾರೆ.