ಜನರ ಪ್ರೀತಿ ನೋಡಿ ಅಚ್ಚರಿಗೊಂಡ ಭವ್ಯಾ ಗೌಡ; ಭಾವುಕ ಪೋಸ್ಟ್
ನಟಿ ಭವ್ಯಾ ಗೌಡ ಅವರು ಈಗ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು, ‘ಕರ್ಣ’ ಧಾರಾವಾಹಿ. ಈ ಧಾರಾವಾಹಿಯಲ್ಲಿ ಅವರು ನಿಧಿ ಹೆಸರಿನ ಪಾತ್ರ ಮಾಡಿದ್ದು, ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ಅವರ ಪಾತ್ರವನ್ನು ಜನರು ಕೊಂಡಾಡುತ್ತಿದ್ದಾರೆ. ಈ ಪ್ರೀತಿ ನೋಡಿ ಅವರಿಗೆ ಖುಷಿಯಾಗಿದೆ.
Updated on: Jul 11, 2025 | 2:47 PM

ಭವ್ಯಾ ಗೌಡ ಅವರು ‘ಕರ್ಣ’ ಧಾರಾವಾಹಿಯಲ್ಲಿ ಭವ್ಯಾ ಗೌಡ ಅವರು ನಿಧಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅವರದ್ದು ವೈದ್ಯ ವೃತ್ತಿ ಕಲಿಯುತ್ತಿರುವ ವಿದ್ಯಾರ್ಥಿನಿ ಪಾತ್ರ. ಈ ಪಾತ್ರಕ್ಕೆ ಜನರಿಂದ ಮೆಚ್ಚುಗೆ ಸಿಕ್ಕಿದೆ. ಜನರ ಪ್ರೀತಿ ನೋಡಿ ಅವರು ಭಾವುಕರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿ ಸೆಟ್ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಭವ್ಯಾ ಅವರು ಡಾಕ್ಟರ್ ಲುಕ್ನಲ್ಲಿ ಇದ್ದಾರೆ. ರೋಗಿಗೆ ಇಂಜೆಕ್ಷನ್ ಕೊಡಲು ಅವರು ರೆಡಿ ಆಗುತ್ತಿರುವ ರೀತಿಯಲ್ಲಿ ಲುಕ್ ಇದೆ.

ಇನ್ಸ್ಟಾಗ್ರಾಮ್ನಲ್ಲಿ ಭವ್ಯಾ ಅವರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ‘ನೀವೆಲ್ಲರೂ ಮೆಚ್ಚಿರುವ ನಿಧಿ ಕಡೆಯಿಂದ ಒಂದು..’ ಎಂದು ಬರೆದು ಹಾರ್ಟ್ ಮಾರ್ಕ್ ಹಾಕಿದ್ದಾರೆ. ಈ ಮೂಲಕ ಪ್ರೀತಿ ಕೊಟ್ಟ ಫ್ಯಾನ್ಸ್ಗೆ ತಿರುಗಿ ಪ್ರೀತಿಯನ್ನೇ ನೀಡಿದ್ದಾರೆ.

ಭವ್ಯಾ ಗೌಡ ಅವರು ಈ ಬಾರಿ ಬಿಗ್ ಬಾಸ್ನಲ್ಲಿ ಭಾಗವಹಿಸಿದ್ದರು. ಈ ಒಪ್ಪಂದ ಮುಗಿಯುವ ಮೊದಲೇ ಅವರು ‘ಕರ್ಣ’ ಧಾರಾವಾಹಿ ಮಾಡಿದ್ದರು. ಧಾರಾವಾಹಿ ಪ್ರಸಾರದ ವೇಳೆ ಈ ಒಪ್ಪಂದಿಂದ ಸಮಸ್ಯೆ ಆಯಿತು. ಈಗ ಒಪ್ಪಂದದ ಅವಧಿ ಪೂರ್ಣಗೊಂಡಿದೆ.

ಭವ್ಯಾ ಗೌಡ ಅವರು ಈ ಮೊದಲು ಕಲರ್ಸ್ ಕನ್ನಡದ ‘ಗೀತಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿ ಎಲ್ಲರ ಜನಮನ್ನಣೆ ಪಡೆದಿತ್ತು. ಇದರಲ್ಲಿ ಅವರು ಆ್ಯಕ್ಷನ್ ಮೆರೆದು ಗಮನ ಸೆಳೆದಿದ್ದರು. ಈಗ ಅವರಿಗೆ ‘ಕರ್ಣ’ದಿಂದ ಮೆಚ್ಚುಗೆ ಸಿಕ್ಕಿದೆ.




