- Kannada News Photo gallery Bidar Fort getting weak day by day by trees grow on fort People are worried
Bidar Fort: ಬೀದರ್ ಕೋಟೆ ಮೇಲೆ ಗಿಡ-ಗಂಟಿಗಳ ಆಕ್ರಮಣ; ಕೋಟೆ ಶಿಥಿಲಗೊಳ್ಳುವ ಆತಂಕದಲ್ಲಿ ಜನ
ಬೀದರ್ ಕೋಟೆಯ ಮೇಲ್ಭಾಗದಲ್ಲಿ ಗಿಡಗಳು ಸಮೃದ್ಧವಾಗಿ ಬೆಳೆದು ನಿಂತು, ಬೇರು ಬಿಟ್ಟಿವೆ. ಇದರಿಂದ ಗೋಡೆ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ. ಗೋಡೆ ಬಿರುಕು ಬಿಟ್ಟರೆ ಮತ್ತೆ ಅದರ ದುರಸ್ತಿ ಕಾರ್ಯ ಅಸಾಧ್ಯವಾಗಲಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದ್ದು ಕೂಡಲೆ ಗಿಡಗಳನ್ನ ಕಟ್ ಮಾಡಿ ಎಂದು ಇಲ್ಲಿನ ಜನರು ಮನವಿ ಮಾಡಿದ್ದಾರೆ.
Updated on: Aug 20, 2023 | 3:11 PM

ಬೀದರ್ ಕೋಟೆಯನ್ನ ಪುರಾತತ್ವ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಐತಿಹಾಸಿಕ ಬೀದರ್ ಕೋಟೆಯ ಒಂದು ಕಡೆಯ ಬೃಹದಾಕಾರದ ಗೋಡೆಯ ಮೇಲೆ ಗಿಡ- ಗಂಟಿಗಳು ಬೆಳೆದು ನಿಂತಿದ್ದು, ಇಡೀ ಗೋಡೆಯೇ ಶಿಥಿಲಗೊಳ್ಳುವ ಆತಂಕ ಎದುರಾಗಿದೆ.

ಎತ್ತರದ ಗೋಡೆಯ ಮೇಲ್ಭಾಗದಲ್ಲಿ ಗಿಡಗಳು ಸಮೃದ್ಧವಾಗಿ ಬೆಳೆದು ನಿಂತು, ಬೇರು ಬಿಟ್ಟಿವೆ. ಇದರಿಂದ ಗೋಡೆ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ.

ಜಿಲ್ಲಾಧಿಕಾರಿ ನಿವಾಸದಿಂದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಡೆಗೆ ಸಾಗುವ ಮಾರ್ಗದ ಕೋಟೆಯ ಬೃಹತ್ ಗೋಡೆಯ ಮೇಲೆ ಗಿಡಗಳು ಹುಲುಸಾಗಿ ಪೊದೆಯಂತೆ ಬೆಳೆದಿದ್ದರಿಂದ ಇಡೀ ಗೋಡೆ ಹಸುರಿನಿಂದ ಕಂಗೊಳಿಸುವಂತಾಗಿದೆ.

ಗಿಡ- ಗಂಟಿಗಳಿಂದ ಐತಿಹಾಸಿಕ ಸ್ಮಾರಕವಾದ ಕೋಟೆ ಸೌಂದರ್ಯಕ್ಕೆ ಧಕ್ಕೆ ಎದುರಾಗುವ ಅಪಾಯವೂ ಇದೆ.

ಗೋಡೆ ಬಿರುಕು ಬಿಟ್ಟರೆ ಮತ್ತೆ ಅದರ ದುರಸ್ತಿ ಕಾರ್ಯ ಅಸಾಧ್ಯವಾಗಲಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದ್ದು ಕೂಡಲೆ ಗಿಡಗಳನ್ನ ಕಟ್ ಮಾಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.

ಬೀದರ್ ಕರ್ನಾಟಕದ ಉತ್ತರದ ತುದಿಯಲ್ಲಿರುವ ಕರ್ನಾಟಕದ ಕಿರೀಟ ಎಂದು ಕರೆಯಲ್ಪಡುವ ಜಿಲ್ಲೆ. ಬೀದರ್, ಕೋಟೆ ಮತ್ತು ಗುರುದ್ವಾರಕ್ಕೆ ಹೆಸರುವಾಸಿಯಾಗಿದೆ.

ಬೀದರ್ ಕೋಟೆಯಲ್ಲಿ ಇಸ್ಲಾಮಿಕ್ ಮತ್ತು ಪರ್ಷಿಯನ್ ವಾಸ್ತುಶಿಲ್ಪ, ಮಸೀದಿಗಳು ಮತ್ತು ಮಹಲ್‌ಗಳು, ಮೂವತ್ತಕ್ಕೂ ಹೆಚ್ಚು ಇಸ್ಲಾಮಿಕ್ ಸ್ಮಾರಕಗಳನ್ನು ನೋಡಬಹುದು.

ಬೀದರ್ಗೆ ರೈಲು, ರಸ್ತೆ ಹಾಗು ವಿಮಾನ ಮಾರ್ಗದ ಮೂಲಕ ಸುಲಭವಾಗಿ ಭೇಟಿ ಕೊಡಬಹುದು. ಬೆಂಗಳೂರಿನಿಂದ ಬೀದರ್ 690 ಕಿ.ಮೀ ದೂರದಲ್ಲಿದೆ.

ಬೀದರ್ಗೆ ಅತಿ ಸಮೀಪದ ವಿಮಾನ ನಿಲ್ದಾನವೆಂದರೆ ಹೈದ್ರಾಬಾದ್‍ನ ರಾಜೀವ್‍ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.



