- Kannada News Photo gallery Bidar Various discoveries that caught the attention of the Children's Science Festival bidar news in kannada
ಬೀದರ್: ಮಕ್ಕಳ ವಿಜ್ಞಾನ ಹಬ್ಬದಲ್ಲಿ ರಾಕೆಟ್ ಉಡಾವಣೆ ಮಾಡಿದ ಮಕ್ಕಳು
ಗುರುನಾನಕ್ ಸ್ಕೋಲ್ನಲ್ಲಿ ಆಯೋಜಿಸಿದ ಮಕ್ಕಳ ವಿಜ್ಞಾನ ಹಬ್ಬದಲ್ಲಿ ಮಕ್ಕಳೇ ಆವಿಷ್ಕರಿಸಿದ ವಿವಿಧ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.
Updated on:Nov 29, 2022 | 9:48 AM

Bidar Various discoveries that caught the attention of the Children's Science Festival bidar news in kannada

Bidar Various discoveries that caught the attention of the Children's Science Festival bidar news in kannada

ಮಕ್ಕಳು ಕ್ರೇಫ್ ಕಾಗದದಲ್ಲಿ ವಿವಿಧ ತರಹದ ಹೂವುಗಳು, ವಿವಿಧ ವಿನ್ಯಾಸದ ಹಡಗುಗಳು, ಕಿರೀಟ, ಬಾಜು ಬಂದ್ ಆಕರ್ಷಿಸುತ್ತಿದ್ದವು. ಕಾಗದದಲ್ಲಿ ರಾಕೆಟ್, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮನುಷ್ಯನ ಜೀರ್ಣಾಂಗ, ಜೀವಕೋಶ ಸೇರಿದಂತೆ ಹತ್ತಾರು ವಸ್ತುಗಳನ್ನು ತಯಾರಿಸಿ ಗಮನ ಸೆಳೆದರು.

ಎರಡು ದಿನಗಳ ಕಾಲ ನಡೆದ ವಿಜ್ಞಾನ ಆಟ ಪಾಠ ಮತ್ತು ವ್ಯಕ್ತಿತ್ವ ವಿಕಸನದಂತಹ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿ ಖುಷಿ ಪಟ್ಟರು. ಇನ್ನೂ ವಿಜ್ಞಾನ ಚಟುವಟಿಕೆಯ ಜೊತೆಗೆ ಬೀದರ್ ಜಿಲ್ಲೆಯ ಸಂಸ್ಕೃತಿಯನ್ನ ಬಿಂಬಿಸುವ ಅವರುಗಳನ್ನ ಒಂದೆ ಸೂರಿನಡಿ ತೋರಿಸುವ ಉದ್ದೇಶದಿಂದ ಬೀದರ್ ಕೋಟೆ, ಮಹಮಹ್ಮದ್ ಗವಾನ್ ಪುರಾತನ ವಿಶ್ವವಿದ್ಯಾಲಯ, ಚೌಬಾದ್ ಹಾಗೂ ಅಷ್ಟೂರಿನಲ್ಲಿರುವ ಬಹುಮನಿ ಸುಲ್ತಾನರ ಸ್ಮಾರಕ, ನರಸಿಂಹ ಝರಣಾ, ಗುರುನಾನಕ ಝೀರಾ, ಬಸವಕಲ್ಯಾಣ ಕೋಟೆ, ಜಲಸಂಗ್ವಿ ಹಾಗೂ ನಾರಾಯಣಪುರದ ಐತಿಹಾಸಿಕ ಶಿವನ ದೇವಾಲಯಗಳನ್ನ ಮಕ್ಕಳು ತಯಾರಿಸಿ ಜನರಿಗೆ ತಮ್ಮ ಜಿಲ್ಲೆಯ ಐತಿಹಾಸಿಕ ಸ್ಥಳವನ್ನ ಪರಿಚಯಿಸಲಾಯಿತು.

ವಿಜ್ಞಾನ ಹಬ್ಬದ ಮೂಲಕ ಮಕ್ಕಳಲ್ಲಿನ ವಿಜ್ಞಾನ ಅಧ್ಯಯನ ಆಸಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಮಕ್ಕಳು ವಿಜ್ಜಾನದ ಬಗ್ಗೆ ಶಾಲೆಯಲ್ಲಿ ಓದಿದ್ದನ್ನು ತಾವೇ ಪ್ರಯೋಗ ಮಾಡಿನೋಡಿ ವಿಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳುಲು ಇದು ಉಪಯೋಗವಾಗಿದೆ. ಕಳೆದ ಹತ್ತಾರು ವರ್ಷದಿಂದ ಪ್ರತಿ ವರ್ಷವೂ ವಿಜ್ಞಾನ ಹಬ್ಬವನ್ನ ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. (ವರದಿ: ಸುರೇಶ್ ನಾಯಕ್, ಟಿವಿ9 ಬೀದರ್)
Published On - 9:48 am, Tue, 29 November 22




