- Kannada News Photo gallery Bigg Boss 15 finalist Who will be the winner Here is the photos of Top 6 contestants
‘ಬಿಗ್ ಬಾಸ್ 15’ ಫಿನಾಲೆಯಲ್ಲಿ ಶಮಿತಾ ಶೆಟ್ಟಿ; ವಿನ್ನರ್ ಪಟ್ಟಕ್ಕಾಗಿ ಹಣಾಹಣಿ ನಡೆಸುತ್ತಿರೋದು ಯಾರೆಲ್ಲ?
ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ‘ಹಿಂದಿ ಬಿಗ್ ಬಾಸ್’ 15ನೇ ಸೀಸನ್ ಈಗ ಫಿನಾಲೆ ಹಂತ ತಲುಪಿದೆ. ಫೈನಲಿಸ್ಟ್ಗಳಲ್ಲಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕೂಡ ಇದ್ದಾರೆ.
Updated on: Jan 28, 2022 | 1:10 PM

Bigg Boss 15 finalist Who will be the winner Here is the photos of Top 6 contestants

Bigg Boss 15 finalist Who will be the winner Here is the photos of Top 6 contestants

ಕಿರುತೆರೆ ನಟ ಕರಣ್ ಕುಂದ್ರಾ ಅವರು ಫಿನಾಲೆಯಲ್ಲಿ ಹಣಾಹಣಿ ನೀಡುತ್ತಿದ್ದಾರೆ. ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅನುಭವ ಹೊಂದಿದ್ದ ಅವರು ಬಿಗ್ ಬಾಸ್ನಲ್ಲೂ ಜನಮನ ಗೆಲ್ಲಲು ಪ್ರಯತ್ನಿಸಿದ್ದಾರೆ.

‘ಬಿಗ್ ಬಾಸ್ 15’ ಫಿನಾಲೆಯಲ್ಲಿ ನಿಶಾಂತ್ ಭಟ್ ಕೂಡ ಪ್ರಬಲ ಸ್ಪರ್ಧಿ ಆಗಿದ್ದಾರೆ. ವೃತ್ತಿಯಲ್ಲಿ ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ ಆಗಿರುವ ಅವರು ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆ ಮೂಲಕ ಫಿನಾಲೆ ಪ್ರವೇಶಿಸಿದ್ದಾರೆ.

ಪ್ರತೀಕ್ ಸೆಹಜ್ಪಾಲ್ ಅವರು ಕೂಡ ಬಿಗ್ ಬಾಸ್ ಫಿನಾಲೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿದ್ದಾರೆ. ‘ಬಿಗ್ ಬಾಸ್ ಒಟಿಟಿ’ಯಲ್ಲೂ ಮೋಡಿ ಮಾಡಿದ್ದ ಅವರು ಈಗ ‘ಬಿಗ್ ಬಾಸ್ 15’ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ.

ಹಿಂದಿ ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ನಟಿ ತೇಜಸ್ವಿ ಪ್ರಕಾಶ್ ಅವರು ‘ಹಿಂದಿ ಬಿಗ್ ಬಾಸ್’ 15ನೇ ಸೀಸನ್ನಲ್ಲಿ ಮಿಂಚಿದ್ದಾರೆ. ಇತರೆ ಸ್ಪರ್ಧಿಗಳ ಮೇಲೆ ಹೆಚ್ಚು ಡಿಪೆಂಡ್ ಆಗಿರದೇ ತಮ್ಮ ಸ್ವಂತ ಆಟದಿಂದ ಅವರು ಗುರುತಿಸಿಕೊಂಡಿದ್ದಾರೆ.

ಈ ಸೀಸನ್ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿದ ನಟಿ ರಶ್ಮಿ ದೇಸಾಯಿ ಕೂಡ ಫಿನಾಲೆಯಲ್ಲಿ ಸ್ಪರ್ಧೆ ನೀಡುತ್ತಿದ್ದಾರೆ. ಅವರ ಖ್ಯಾತಿ ಕೂಡ ದೊಡ್ಡದಿದೆ. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರು ಟ್ರೋಫಿ ಗೆದ್ದ ಉದಾಹರಣೆ ಇಲ್ಲ.




