- Kannada News Photo gallery Bigg Boss Kannada OTT Ex contestant Akshata Kuki ties the knot Avinash: Marriage pics go viral
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ ಅಕ್ಷತಾ ಕುಕ್ಕಿ; ಇಲ್ಲಿದೆ ಫೋಟೋ ಗ್ಯಾಲರಿ
Akshata Kuki Marriage: ನಟಿ ಅಕ್ಷತಾ ಕುಕ್ಕಿ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅವಿನಾಶ್ ಜೊತೆ ಅವರ ವಿವಾಹ ನೆರವೇರಿದೆ. ಮದುವೆಯ ಕಲರ್ಫುಲ್ ಫೋಟೋಗಳು ಇಲ್ಲಿವೆ..
Updated on:Mar 29, 2023 | 3:29 PM

‘ಬಿಗ್ ಬಾಸ್ ಕನ್ನಡ ಒಟಿಟಿ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಅಕ್ಷತಾ ಕುಕ್ಕಿ ಅವರು ಜನಪ್ರಿಯತೆ ಪಡೆದರು. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಾರ್ಚ್ 27ರಂದು ಅಕ್ಷತಾ ಕುಕ್ಕಿ ಅವರು ಅವಿನಾಶ್ ಜೊತೆ ಸಪ್ತಪದಿ ತುಳಿದಿದ್ದಾರೆ. ಮದುವೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ಈ ಖುಷಿಯ ಸಮಾಚಾರವನ್ನು ತಿಳಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಷತಾ ಕುಕ್ಕಿ ಹಾಗೂ ಅವಿನಾಶ್ ಅವರಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ವಿವಾಹ ಸಮಾರಂಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

2022ರಲ್ಲಿ ಮೊದಲ ಬಾರಿಗೆ ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೊದಲ ಸೀಸನ್ ಪ್ರಸಾರ ಆಯಿತು. ಅದರಲ್ಲಿ ಸ್ಪರ್ಧಿಸುವ ಅವಕಾಶ ಅಕ್ಷಕಾ ಕುಕ್ಕಿ ಅವರಿಗೆ ಸಿಕ್ಕಿತ್ತು. ಆದರೆ ಟ್ರೋಫಿ ಗೆಲ್ಲಲು ಅವರಿಗೆ ಸಾಧ್ಯವಾಗಲಿಲ್ಲ.

ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುವ ಮೂಲಕ ಅಕ್ಷತಾ ಕುಕ್ಕಿ ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೊದಲ ಸೀಸನ್ನಲ್ಲಿ ಗಮನ ಸೆಳೆದಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಅಕ್ಷತಾ ಅವರು ಎಂಗೇಜ್ಮೆಂಟ್ ವಿಷಯ ತಿಳಿಸಿದ್ದರು.
Published On - 3:29 pm, Wed, 29 March 23



















