Updated on: Dec 06, 2023 | 10:07 PM
ಬಿಗ್‌ಬಾಸ್ ಮನೆಯ ರಕ್ಕಸ-ಗಂಧರ್ವರ ಟಾಸ್ಕ್‌ನ ಎರಡನೇ ಮುಖ ಆರಂಭಗೊಂಡಿದೆ. ನಾಣ್ಯದ ಬದಿಗಳು ಅದಲುಬದಲಾಗಿವೆ. ರಕ್ಕಸರು ಗಂಧರ್ವರಾಗಿದ್ದಾರೆ. ಗಂಧರ್ವರು ರಾಕ್ಷಸರಾಗಿದ್ದಾರೆ.
ಮಂಗಳವಾರ ಸಂಗೀತಾ ತಂಡದ ಸದಸ್ಯರು ರಾಕ್ಷಸರಾಗಿ ಇಡೀ ಮನೆಯಲ್ಲಿ ಮೆರೆದಾಡಿದ್ದರು. ವರ್ತೂರು ತಂಡದ ಗಂಧರ್ವರನ್ನು ಬಗೆಬಗೆಯಾಗಿ ಗೋಳು ಹೊಯ್ದುಕೊಂಡಿದ್ದರು.
ಬಾವುಟ ನೆಡುವ ಟಾಸ್ಕ್‌ನಲ್ಲಿ ಕೂಡ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಟಾಸ್ಕ್‌ನಲ್ಲಿ ರಾಕ್ಷಸರೇ ಗೆದ್ದಿದ್ದರು.
ಬುಧವಾರದ ಎಪಿಸೋಡ್ನಲ್ಲಿ ರಾಕ್ಷಸರು ಗಂಧರ್ವರ ವೇಷ ತೊಟ್ಟಿದ್ದಾರೆ. ಗಂಧರ್ವರಾಗಿದ್ದವರು ರಾಕ್ಷಸರಾಗಿ ಅಟ್ಟಹಾಸ ಮೆರೆಯುತ್ತಿದ್ದಾರೆ.
ವರ್ತೂರು ತಂಡದ ಸದಸ್ಯರು ನಿನ್ನೆಅನುಭವಿಸಿದ ಅವಮಾನ-ನೋವುಗಳನ್ನೆಲ್ಲ ಬಡ್ಡಿಸಮೇತ ತೀರಿಸಿಕೊಂಡಂತಿದೆ. ಕಾರ್ತಿಕ್ ಬಳಿ ವಿನಯ್, ಆನೆ ಬೀಳಿಸಿದ್ದಕ್ಕೆ ಕ್ಷಮೆ ಕೇಳಿಸಿಕೊಳ್ಳುತ್ತಿದ್ದಾರೆ.
ರಾಕ್ಷಸರಾಗಿ ಮೆರೆದಾಡಿದ್ದ ಕಾರ್ತಿಕ್ ಅವರನ್ನೇ ಗಂಧರ್ವ ತಂಡ ಟಾರ್ಗೆಟ್ ಮಾಡಿಕೊಂಡು ಬಗೆಬಗೆಯ ಶಿಕ್ಷೆಗಳನ್ನು ನೀಡುತ್ತಿರುವಂತಿದೆ.
ಬುಧವಾರದ ಎಪಿಸೋಡ್ನಲ್ಲಿ ಅದಲು-ಬದಲಾದ ಪಾತ್ರಗಳನ್ನು ಸ್ಪರ್ಧಿಗಳು ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ.