ಅಗ್ನಿಪರೀಕ್ಷೆಯಿಂದ ಬಿಗ್ ಬಾಸ್ ಮನೆಗೆ ಕಾಲಿಟ್ಟ ನಾಲ್ವರು ಇವರೇ ನೋಡಿ

Edited By:

Updated on: Sep 09, 2026 | 7:54 AM

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಅಗ್ನಿಪರೀಕ್ಷೆ ಎದುರಿಸಿದ 60 ಸ್ಪರ್ಧಿಗಳಲ್ಲಿ ನಾಲ್ವರು ದೊಡ್ಮನೆಗೆ ಆಯ್ಕೆಯಾಗಿದ್ದಾರೆ. ಕಿರಣ್ ಶಾಸ್ತ್ರಿ, ಲಿಖಿತ್ ಗೊಂದಿ, ಧನುಷ್ ಹಾಗೂ ಮಹಾಕವಿ ಮಂಜು ಅವರು ಸುದೀಪ್ ಸಮ್ಮುಖದಲ್ಲಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.

1 / 5
‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭ ಆಗಿದೆ. ಅದಕ್ಕೂ ಮೊದಲು ನಡೆದ ಅಗ್ನಿಪರೀಕ್ಷೆಯಲ್ಲಿ 60 ಜನ ಸ್ಪರ್ಧಿಗಳು ಇದ್ದರು. ಈ ಪೈಕಿ ನಾಲ್ವರು ಮಾತ್ರ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.  ಅವರು ಯಾರು ಎಂಬುದನ್ನು ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಮೇಲೆ ರಿವೀಲ್ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭ ಆಗಿದೆ. ಅದಕ್ಕೂ ಮೊದಲು ನಡೆದ ಅಗ್ನಿಪರೀಕ್ಷೆಯಲ್ಲಿ 60 ಜನ ಸ್ಪರ್ಧಿಗಳು ಇದ್ದರು. ಈ ಪೈಕಿ ನಾಲ್ವರು ಮಾತ್ರ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಯಾರು ಎಂಬುದನ್ನು ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಮೇಲೆ ರಿವೀಲ್ ಮಾಡಿದ್ದಾರೆ.

2 / 5

ಕಿರಣ್ ಶಾಸ್ತ್ರಿ ಅವರು ಉತ್ತರ ಕರ್ನಾಟಕದವರು. ಅವರು ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಸಿದ್ದರು. ಅವರು ತಮ್ಮ ಮಾತು ಹಾಗೂ ಆಟದ ಮೂಲಕ ಗಮನ ಸೆಳೆದವರು. ಅವರು ಈಗ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟವರು ಕಿರಣ್ ಶಾಸ್ತ್ರಿ.

3 / 5

ಲಿಖಿತ್ ಗೊಂದಿ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿ ಪರೀಕ್ಷೆ ಎಂಬ ದೊಡ್ಡ ಪರೀಕ್ಷೆಯನ್ನು ದಾಟಿ ಅವರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ಅವರು ಟಾಸ್ಕ್​​ಗಳನ್ನು ಉತ್ತಮವಾಗಿ ಆಡಿದ್ದರು.

4 / 5

ಗಿನ್ನೆಸ್ ದಾಖಲೆ ಬರೆದ ಧನುಷ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಿವಿಧ ದೇಶಗಳಿಂದ ಸೈಕಲ್ ಹೊಡೆದು ಅವರು ಈ ದಾಖಲೆ ಬರೆದಿದ್ದರು. ಅವರು ಅಗ್ನಿಪರೀಕ್ಷೆಗೆ ಬಂದು ಈಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

5 / 5

ಮಾಡರ್ನ್ ಮಹಾಕವಿ ಮಂಜು ಎಂದೇ ಫೇಮಸ್ ಆದವರು ಇವರು. ಇವರು ಅಗ್ನಿಪರೀಕ್ಷೆಗೆ ಬಂದಾಗ ಅರ್ಧ ತಲೆ ಬೋಳಿಸಿಕೊಂಡಿದ್ದರು. ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿ ಪರೀಕ್ಷೆಯಿಂದ ವೇದಿಕೆ ಏರಿದ ನಾಲ್ಕನೇ ಸ್ಪರ್ಧಿ ಇವರು. ಜಡ್ಜ್​ಗಳ ಆಯ್ಕೆಯಿಂದ ಇವರು ದೊಡ್ಮನೆ ಸೇರಿದ್ದಾರೆ.

Published On - 11:20 pm, Sun, 6 September 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us