AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Autophagy: ಈ ಮೇರು ನಟ 14 ವರ್ಷಗಳಿಂದ ಊಟವನ್ನೇ ಮಾಡಿಲ್ಲ.. ಹಸಿವು ತಡೆಯಲು 2 ಬಿಸ್ಕತ್ ತಿಂದು ನೀರು ಕುಡಿಯುತ್ತಾರಂತೆ!

Manoj Bajpayee: ಕಳೆದ 14 ವರ್ಷಗಳಿಂದ ರಾತ್ರಿ ಊಟ ಮಾಡಿಲ್ಲ ಎಂದು ಬಾಲಿವುಡ್ ನಟ ಮನೋಜ್ ಬಾಜಪೇಯಿ ಹೇಳಿದ್ದಾರೆ!

ಸಾಧು ಶ್ರೀನಾಥ್​
|

Updated on: May 11, 2023 | 5:44 PM

Share
ಫ್ಯಾಮಿಲಿ ಮ್ಯಾನ್-2 ಮೂಲಕ ಪ್ಯಾನ್ ಇಂಡಿಯಾ ಕ್ರೇಜ್ ಗಳಿಸಿದ ಬಾಲಿವುಡ್ ನಟ ಮನೋಜ್ ಬಾಜಪೇಯಿ ಎಲ್ಲರಿಗೂ ಪರಿಚಿತರು. ಇದೇ ಸಿನಿಮಾದಲ್ಲಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿ ಕುಳಿತಿರುವ ನಟ ಮನೋಜ್ ಬಾಜಪೇಯಿ ಅವರು ಆ ಚಿತ್ರದ ಸಂಭಾವನೆಯ ರೂಪದಲ್ಲಿ ಹತ್ತಾರು ಕೋಟಿ ರೂಪಾಯಿ ಜೇಬಿಗಿಳಿಸಿದ್ದಾರೆ. ಆದರೆ ಅವರು ತಮ್ಮ ಹೊಟ್ಟೆಗೆ ಮಾತ್ರ ಅರೆಕಾಸಿನ ಮಜ್ಜಿಗೆ ಎಂಬಂತೆ ಬರೀ 2 ಬಿಸ್ಕತ್ ತಿಂದು ನೀರು ಕುಡಿದುಕೊಂಡು ಇದ್ದಾರೆ. ಅಂದಹಾಗೆ ಇದು ಅವರ ರಾತ್ರಿ ಊಟದ ದಿನಚರಿಯಂತೆ! ಅದೇ ನಿನ್ನೆ ಮೊನ್ನೆ ಬಂದು ಮಹಾನ್​ ನಟರು ಎಂಬಂತೆ ಪೋಸು ಕೊಡುವ ಇಂದಿನ ತಲೆಮಾರು ನಟರು ರಾತ್ರಿ ವೇಳೆ ಮದಿರೆಯ ಮಡಿಲಲ್ಲಿ ಮುಳುಗುವುದನ್ನು ವಾಡಿಕೆ ಮಾಡಿಕೊಂಡಿರುತ್ತಾರೆ.

1 / 5
ಆದರೆ ಮನೋಜ್ ಬಾಜಪೇಯಿ ಎಂಬ ಈ ಅದ್ಭುತ ಕಲಾವಿದ ತಮ್ಮ ವಿಶಿಷ್ಟ ನಟನೆಯಿಂದ ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ. ಮನೋಜ್ ಬಾಜಪೇಯಿ ಟಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪ್ರೇಮಕಥಾ’ ಚಿತ್ರದಲ್ಲಿ ಸುಮಂತ್‌ ನಟಿಸಿದ್ದರೆ, ‘ಹ್ಯಾಪಿ’ ಚಿತ್ರದಲ್ಲಿ ಬನ್ನಿ ನಾಯಕನಾಗಿ ನಟಿಸಿದ್ದರು. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅವರು ತಮ್ಮ ಆರೋಗ್ಯದ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

2 / 5
ನಾನು ಕಳೆದ 13-14 ವರ್ಷಗಳಿಂದ ನನ್ನ ಅಜ್ಜನ ಆಹಾರ ಕ್ರಮವನ್ನು ಅನುಸರಿಸುತ್ತಿದ್ದೇನೆ. ನಾನು ರಾತ್ರಿಯ ಊಟವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟೆ. ಹಾಗಾಗಿಯೇ 54ರ ಹರೆಯದಲ್ಲೂ ನಾನು ತುಂಬಾ ಫಿಟ್ ಮತ್ತು ಆರೋಗ್ಯವಂತನಾಗಿದ್ದೇನೆ. ಆರಂಭದಲ್ಲಿ ದಿನಕ್ಕೆ 12-14 ಗಂಟೆಗಳ ಉಪವಾಸವಿತ್ತು. ಹಸಿವಾದಾಗ 2 ಬಿಸ್ಕತ್ತು ತಿನ್ನುತ್ತಿದ್ದರಂತೆ. ಹೊಟ್ಟೆ ತುಂಬಾ ಬರಿ ನೀರು ಕುಡಿಯುತ್ತಿದ್ದಾರಂತೆ. ಮೊದಮೊದಲು ಇದು ಕಠಿಣವಾಗುತ್ತಿತ್ತು.

3 / 5
ಕ್ರಮೇಣ ನಾನು ರಾತ್ರಿಯ ಊಟವನ್ನು ನಿಲ್ಲಿಸಿದೆ. ಈಗ ಊಟದ ನಂತರ, ನಮ್ಮ ಅಡುಗೆ ಮನೆಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ನನ್ನ ಮಗಳು ಹಾಸ್ಟೆಲ್‌ನಿಂದ ಬಂದಾಗ ಮಾತ್ರ ಅಲ್ಲಿ ಒಂದಷ್ಟು ಚಟುವಟಿಕೆ ಕಂಡುಬರುತ್ತದೆ. ಬೆಳಗ್ಗೆ ತಿಂಡಿ ಬಿಡುವುದಕ್ಕಿಂತ ರಾತ್ರಿ ಊಟ ಬಿಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇಲ್ಲದಿದ್ದರೆ, ತಿಂದ ಆಹಾರವು ಹೊಟ್ಟೆಯಲ್ಲಿ ಉಳಿಯುತ್ತದೆ.

4 / 5
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಉಪವಾಸ ಮಾಡುತ್ತಾರೆ. ಆದರೆ ನಾನು ಅದನ್ನು ವರ್ಷಗಳಿಂದಲೇ ಅನುಸರಿಸುತ್ತಿದ್ದೇನೆ. ನಾನು ಪ್ರತಿದಿನ ಸುಮಾರು 18 ಗಂಟೆಗಳ ಕಾಲ ಉಪವಾಸ ಮಾಡುತ್ತೇನೆ. ನಾನು ಆರೋಗ್ಯಕರ ಆಹಾರವನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಮಾತ್ರ ಸೇವಿಸುತ್ತೇನೆ. ಹೀಗೆ ಮಾಡುವುದರಿಂದ ನನ್ನ ತೂಕವನ್ನು ಹತೋಟಿಯಲ್ಲಿಟ್ಟುಕೊಂಡು ಚೈತನ್ಯ ಹೊಂದಲು ಸಾಧ್ಯವಾಗುತ್ತಿದೆ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ. ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಫ್ಯಾಮಿಲಿ ಮ್ಯಾನ್-3 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಮನೋಜ್ ಬಾಜಪೇಯಿ.

5 / 5
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್

ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್

ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು

ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ

ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ

ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ

ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?

ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?