- Kannada News Photo gallery Bollywood stars who welcomes their child through surrogacy images and list is here
ಆಮಿರ್, ಶಾರುಖ್ ಸೇರಿದಂತೆ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದಾರೆ ಹಲವು ಬಾಲಿವುಡ್ ತಾರೆಯರು; ಇಲ್ಲಿದೆ ವಿವರ
ಬಾಡಿಗೆ ತಾಯ್ತನ ಬಾಲಿವುಡ್ಗೆ ಹೊಸದಲ್ಲ. ಆಮಿರ್ ಖಾನ್, ಶಾರುಖ್ ಖಾನ್, ಶಿಲ್ಪಾ ಶೆಟ್ಟಿ, ಸನ್ನಿ ಲಿಯೋನ್ ಸೇರಿದಂತೆ ಖ್ಯಾತ ತಾರಾ ಜೋಡಿ ಈ ವಿಧಾನದ ಮೂಲಕ ಮಕ್ಕಳಿಗೆ ಪೋಷಕರಾಗಿದ್ದಾರೆ. ಅಂತಹ ತಾರಾ ಜೋಡಿ ಹಾಗೂ ಅವರ ಮಕ್ಕಳ ಸಚಿತ್ರ ವಿವರ ಇಲ್ಲಿದೆ.
Updated on:Jan 23, 2022 | 12:51 PM

ಬಹುಭಾಷಾ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಜನವರಿ 21ರ ಶುಕ್ರವಾರ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದನ್ನು ಘೋಷಿಸಿದ್ದಾರೆ.

ನಟ ಶಾರುಖ್ ಖಾನ್ ಹಾಗೂ ಗೌರಿ ಖಾನ್ 2013ರಲ್ಲಿ ಮೂರನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದರು.

ಕರಣ್ ಜೋಹರ್ ಮಕ್ಕಳಾದ ಯಶ್ ಹಾಗೂ ರೂಹಿ ಕೂಡ ಬಾಡಿಗೆ ತಾಯ್ತನದ ಮೂಲಕ ಜನಿಸಿದವರು.

ಬಾಡಿಗೆ ತಾಯ್ತನದ ಮೂಲಕ ಜನಿಸಿದ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಪುತ್ರ ಆಜಾದ್.

ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ತಮ್ಮ ಮೊದಲ ಪುತ್ರಿ ನಿಶಾಳನ್ನು ದತ್ತುಪಡೆದರು. ನಂತರ ಆಶೆರ್ ಹಾಗೂ ನೋಹಾ ಎಂಬ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದರು.

ನಿರ್ದೇಶಕಿ ಫರಾ ಖಾನ್ ಪ್ರನಾಳ ಶಿಶು ವಿಧಾನದ ಮೂಲಕ ಮೂರು ಮಕ್ಕಳನ್ನು ಪಡೆದಿದ್ದಾರೆ.

ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಬಾಡಿಗೆ ತಾಯ್ತನದ ಮೂಲಕ ಪುತ್ರಿಯನ್ನು ಕುಟುಂಬಕ್ಕೆ ಸ್ವಾಗತಿಸಿದ್ದರು.

ಇತ್ತೀಚೆಗಷ್ಟೇ ನಟಿ ಪ್ರೀತಿ ಜಿಂಟಾ ಬಾಡಿಗೆ ತಾಯ್ತನ ವಿಧಾನದ ಮೂಲಕ ಅವಳಿ ಮಕ್ಕಳನ್ನು ಕುಟುಂಬಕ್ಕೆ ಸ್ವಾಗತಿಸಿದ್ದರು.

ನಿರ್ಮಾಪಕಿ ಏಕ್ತಾ ಕಪೂರ್ ಕೂಡ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದಾರೆ.
Published On - 12:48 pm, Sun, 23 January 22




