- Kannada News Photo gallery Break for sound nuisance in Chikkaballapur, police destroy bike silencers using Road roller, Kannada News
ಚಿಕ್ಕಬಳ್ಳಾಪುರದಲ್ಲಿ ಸೌಂಡ್ ಕಿರಿಕಿರಿಗೆ ಬ್ರೇಕ್; ಸೈಲೆನ್ಸರ್ಗಳ ಮೇಲೆ ರೋಡ್ ರೋಲರ್ ಹತ್ತಿಸಿ ಎಚ್ಚರಿಕೆ
ಶಾಲಾ-ಕಾಲೇಜು, ಲೇಡಿಸ್ ಹಾಸ್ಟೆಲ್ ಸೇರಿದಂತೆ ಕಾಲೇಜು ಕನ್ಯೆಯರು ಸಂಚರಿಸುವ ರಸ್ತೆಗಳಲ್ಲಿ ಐಶಾರಾಮಿ ಬೈಕ್ಗಳನ್ನೇರಿ, ಅವುಗಳ ಸೈಲೆನ್ಸರ್ ಮಾಡಿಫೈ ಮಾಡಿ ದೊಡ್ಡ ಶಬ್ದಮಾಡಿಕೊಂಡು ಹುಡುಗಿಯರಿಗೆ ಚಮಕ್ ಕೊಡುತ್ತಿದ್ದ ರೋಡ್ ರೋಮಿಯೋಗಳಿಗೆ ಪೊಲೀಸರು ಬುದ್ದಿ ಕಲಿಸಿ ಎಚ್ಚರಿಕೆ ನೀಡಿದರು. ಅದು ಹೇಗೆ ಅಂತೀರಾ? ಈ ವರದಿ ಓದಿ.
Updated on: Aug 28, 2024 | 5:54 PM

ಮಾಡಿಫೈ ಮಾಡಿಸಿದ ಸೈಲೆನ್ಸರ್ಗಳನ್ನ ಐಷಾರಾಮಿ ಬೈಕ್ಗಳಿಗೆ ಅಳವಡಿಸಿ ಶಾಲಾ-ಕಾಲೇಜು, ಲೇಡಿಸ್ ಹಾಸ್ಟೆಲ್ ಸೇರಿದಂತೆ ಕಾಲೇಜು ಕನ್ಯೆಯರು ಸಂಚರಿಸುವ ರಸ್ತೆಗಳಲ್ಲಿ ಬೈಕ್ಗಳನ್ನೇರಿ ಕಾಲೇಜು ಯುವತಿಯರಿಗೆ ಚಮಕ್ ಕೊಡುತ್ತಿದ್ದ ಪುಂಡರಿಗೆ ಪೊಲೀಸರು ಬುದ್ದಿ ಕಲಿಸಿದ್ದಾರೆ.

ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ನಿರ್ಬಂಧಿತ ಬೈಕ್ಗಳ ಸೈಲೆನ್ಸ್ರ್ಗಳನ್ನ ಕಿತ್ತು ಬರೋಬ್ಬರಿ 138 ಬೈಕ್ಗಳ ಸೈಲೆನ್ಸರ್ಗಳ ಮೇಲೆ ರೋಡ್ ರೋಲರ್ ಹತ್ತಿಸಿ ನಾಶಗೊಳಿಸುವ ಮೂಲಕ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

5 ಸಾವಿರದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವರೆಗೂ ಸೈಲೆನ್ಸ್ರ್ಗಳನ್ನ ಮಾಡಿಫೈ ಮಾಡಿಕೊಂಡು ಬೈಕ್ಗಳಿಗೆ ಅಳವಡಿಸಿ, ಹೆದ್ದಾರಿಗಳು, ಜನನಿ ಬೀಡರಸ್ತೆಗಳು, ಕಾಲೇಜು ಕ್ಯಾಂಪಸ್ ಗಳು ಸೇರಿದಂತೆ ಹಲವೆಡೆ ರೂಂಂಂ.. ರೂಂಂಂ ಎಂದು ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದರು.

ಇನ್ನು ಇತ್ತೀಚೆಗೆ ಕೋಲಾರದಲ್ಲಿ ಬೈಕ್ ವೀಲಿಂಗ್ಗೆ ವ್ಯಕ್ತಿಯೊಬ್ಬ ಬಲಿಯಾದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡು ರಸ್ತೆ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದವರಿಗೆ ಖಡಕ್ ಎಚ್ಚರಿಕೆ ಮೂಲಕ ತಿಳಿಸಿದ್ದಾರೆ.

ಇದೀಗ ಸೈಲೆನ್ಸ್ರ್ಗಳ ಮೂಲಕ ಪರಿಸರ ಮಾಲಿನ್ಯ ಉಂಟುಮಾಡಿ ಪುಂಡಾಟ ಮೆರೆದಿದ್ದ ಬೈಕ್ ಸವಾರರಿಗೆ, ಪೊಲೀಸರು ಎಚ್ಚರಿಗೆ ನೀಡಿದ್ದಾರೆ.

ರಸ್ತೆ ಸಾರಿಗೆ, ಸಂಚಾರ ನಿಯಮಗಳನ್ನ ಉಲ್ಲಂಘಿಸಿ ಮನಸೋ ಇಚ್ಚೆ ಸೈಲೆನ್ಸ್ರ್ಗಳನ್ನ ಮಾರ್ಪಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಪುಂಡರಿಗೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ಸರಿಯಾಗಿ ಬುದ್ದಿ ಕಲಿಸಿದ್ದಾರೆ.




