- Kannada News Photo gallery Chaitra Kundapur start breaking rules in Bigg Boss house Sudeep May Take Class Entertainment News In Kannada
ಮೊದಲ ದಿನವೇ ಕಿರಿಕ್ ಮಾಡಿಕೊಂಡ ಚೈತ್ರಾ ಕುಂದಾಪುರ; ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಫಿಕ್ಸ್
ಚೈತ್ರಾ ಕುಂದಾಪುರ ಅವರು ಉದ್ಯಮಿಯೊಬ್ಬರಿಗೆ ಟಿಕೆಟ್ ಕೊಡಿಸೋದಾಗಿ ಹೇಳಿ 5 ಕೋಟಿ ರೂಪಾಯಿ ವಂಚಿಸಿದ್ದರು. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಬಂದಿದ್ದರು. ಈಗ ಅವರು ಬಿಗ್ ಬಾಸ್ ಮನೆ ಸೇರಿ ಸುದ್ದಿ ಆಗಿದ್ದಾರೆ.
Updated on:Oct 01, 2024 | 12:52 PM

ನಟಿ ಚೈತ್ರಾ ಕುಂದಾಪುರ ಅವರ ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಅವರು ಹೊರಗೆ ವಿವಾದಗಳ ಮೂಲಕವೇ ಸುದ್ದಿ ಆಗಿದ್ದರು. ಈಗ ಅವರು ಮೊದಲ ದಿನವೇ ಸಹ ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಅವರು ಉದ್ಯಮಿಯೊಬ್ಬರಿಗೆ ಟಿಕೆಟ್ ಕೊಡಿಸೋದಾಗಿ ಹೇಳಿ 5 ಕೋಟಿ ರೂಪಾಯಿ ವಂಚಿಸಿದ್ದರು. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಬಂದಿದ್ದರು. ಈಗ ಅವರು ಬಿಗ್ ಬಾಸ್ ಮನೆ ಸೇರಿ ಸುದ್ದಿ ಆಗಿದ್ದಾರೆ.

ಈ ಬಾರಿಯ ಬಿಗ್ ಬಾಸ್ನಲ್ಲಿ ನರಕ ಹಾಗೂ ಸ್ವರ್ಗ ಎನ್ನುವ ಎರಡು ಕಾನ್ಸೆಪ್ಟ್ ಇದೆ. ಚೈತ್ರಾ ಅವರು ನರಕದಲ್ಲಿ ಇದ್ದಾರೆ. ಅವರಿಗೆ ಬಿಗ್ ಬಾಸ್ ಮನೆ ಕ್ಲೀನಿಂಗ್ ಮಾಡುವ ಕೆಲಸ ನೀಡಲಾಗಿತ್ತು. ಈ ವೇಳೆ ಅವರು ಪೇರಲೆಕಾಯಿ ಕದ್ದು ತಿಂದಿದ್ದಾರೆ.

‘ಸ್ವರ್ಗ’ದ ಕ್ಯಾಟಗರಿಯ ಸ್ಪರ್ಧಿಗಳು ಚೈತ್ರಾ ಕುಂದಾಪುರ ಅವರ ವಿರುದ್ಧ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ತಾವು ಮಾಡಿದ್ದು ಸರಿ ಎಂದು ವಾದಿಸಿದ್ದಾರೆ. ಈ ವಿಚಾರ ವೀಕೆಂಡ್ನಲ್ಲಿ ಚರ್ಚೆ ಆಗೋ ಸಾಧ್ಯತೆ ಇದೆ. ಚೈತ್ರಾಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಮತ್ತಷ್ಟು ಕಿರಿಕ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಅವರು ಮಾತಿನ ಮೂಲಕ ಎಲ್ಲವನ್ನೂ ಗೆಲ್ಲಬಹುದು ಎಂದು ಅವರು ಅಂದುಕೊಂಡಿದ್ದಾರೆ.
Published On - 12:52 pm, Tue, 1 October 24




