- Kannada News Photo gallery Chakda Xpress actress Anushka Sharma shares new photoshoot pics with Virat Kohli
Anushka Sharma: ಹೊಸ ಫೋಟೋಶೂಟ್ನಲ್ಲಿ ಮಿಂಚಿದ ಅನುಷ್ಕಾ ಶರ್ಮಾ; ‘ಎಂದೆಂದಿಗೂ ನೀವೇ ನಮ್ಮ ಫೇವರಿಟ್’ ಎಂದ ಫ್ಯಾನ್ಸ್
ಅನುಷ್ಕಾ ಶರ್ಮಾ ಹಂಚಿಕೊಂಡ ಫೋಟೋಗಳು ಸಿಂಪಲ್ ಆಗಿದ್ದರೂ ಕೂಡ ಅಭಿಮಾನಿಗಳ ಗಮನ ಸೆಳೆದಿವೆ. ಲಕ್ಷಾಂತರ ಜನರು ಮೆಚ್ಚುಗೆ ಸೂಚಿಸಿದ್ದಾರೆ.
Updated on: Mar 24, 2023 | 2:24 PM

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಎಂದೆಂದಿಗೂ ನೀವೇ ನಮ್ಮ ಫೇವರಿಟ್ ನಟಿ’ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ಫೋಟೋಸ್ ವೈರಲ್ ಆಗಿವೆ.

ಮದುವೆ, ಮಗು, ಕುಟುಂಬದ ಕಾರಣಕ್ಕಾಗಿ ಅನುಷ್ಕಾ ಶರ್ಮಾ ಅವರು ನಟನೆಯಿಂದ ಕೊಂಚ ದೂರು ಉಳಿದುಕೊಂಡಿದ್ದಾರೆ. ಆದಷ್ಟು ಬೇಗ ಮತ್ತೆ ಅವರನ್ನು ದೊಡ್ಡ ಪರದೆ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಕಾದಿದ್ದಾರೆ.

ಅನುಷ್ಕಾ ಶರ್ಮಾ ಅವರು 2018ರಲ್ಲಿ ತೆರೆಕಂಡ ‘ಜೀರೋ’ ಸಿನಿಮಾದಲ್ಲಿ ನಟಿಸಿದ ಬಳಿಕ ದೊಡ್ಡ ಗ್ಯಾಪ್ ತೆಗೆದುಕೊಂಡರು. ಆ ನಂತರ ಅವರ ಯಾವುದೇ ಚಿತ್ರ ತೆರೆ ಕಂಡಿಲ್ಲ. ‘ಚೆಕ್ದಾ ಎಕ್ಸ್ಪ್ರೆಸ್’ ಮೂಲಕ ಅವರು ಕಬ್ಬ್ಯಾಕ್ ಮಾಡಲಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ತಮ್ಮದೇ ಫೌಂಡೇಷನ್ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ.




