- Kannada News Photo gallery Cheating Case Accused Chaitra Kundapura And Govind Babu Met Hala Swamiji Photos Goes viral
ಮಠದಲ್ಲೇ ಟಿಕೆಟ್ ಡೀಲ್ ನಡೆದಿತ್ತಾ? ಗೋವಿಂದ್ ಬಾಬು, ಚೈತ್ರಾ-ಸ್ವಾಮೀಜಿ ಭೇಟಿ ಫೋಟೋಸ್ ವೈರಲ್
ಚೈತ್ರಾ ಕುಂದಾಪುರ ಅಂದಾಕ್ಷಣ ಥಟ್ ಅಂತ ನೆನಪಿಗೆ ಬರುವುದೇ ಆಕೆಯ ಭಾಷಣ. ಮಾತಿನಲ್ಲೇ ಬೆಂಕಿ...ಭಾಷಣದಲ್ಲೇ ಕಿಡಿ...ಈ ಸ್ವಯಂಘೋಷಿತ ಹಿಂದು ಫೈರ್ ಬ್ರ್ಯಾಂಡ್‌ನ ಒಂದೊಂದೇ ಮುಖವಾಡಗಳು ಬಯಲಿಗೆ ಬರುತ್ತಿವೆ. ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಎನ್ನುವರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಇದೀಗ ಸಿಸಿಬಿ ಬಲೆಗೆ ಬಿದ್ದಿದ್ದಾಳೆ. ಇನ್ನು ಈ ಪ್ರಕರಣದಲ್ಲಿ ಸ್ವಾಮೀಜಿಯೊಬ್ಬರು ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಸ್ವಾಮೀಜಿ ಹಾಗೂ ಚೈತ್ರಾ ಸೇರಿಕೊಂಡೇ ಗೋವಿಂದ್ ಬಾಬುಗೆ ಉಂಡೆ ನಾಮ ಹಾಕಿದ್ದಾರೆ. ಈ ಪ್ರಕರಣಕ್ಕೆ ಪೂರಕವಾದ ಮತ್ತಷ್ಟು ಸ್ಫೋಟ ಅಂಶಗಳು ಬೆಳಕಿಗೆ ಬಂದಿವೆ.
Updated on: Sep 14, 2023 | 10:52 AM

ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ತೀವ್ರಗೊಳಿಸಿದ ಬೆನ್ನಲ್ಲೇ ಇದೀಗ ಮೋಸ ಹೋದ ಗೋವಿಂದ್ ಬಾಬು ಹಾಗೂ ವಂಚಕಿ ಚೈತ್ರಾ ಕುಂದಾಪುರ ಹಾಲಮಠಕ್ಕೆ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿವೆ.

ವಿಧಾನಸಭಾ ಚುನಾವಣೆಗೂ ಮುನ್ನ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ಮಠಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋವಿಂದಬಾಬು ಹಾಗೂ ಚೈತ್ರಾ ಕುಂದಾಪುರ ಭೇಟಿ ನೀಡಿದ್ದರು.

ಹಾಲ ಮಠಕ್ಕೆ ಚೈತ್ರಾ ಕುಂದಾಪುರ ಜೊತೆಗೆ ಬಂದಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋವಿಂದ ಬಾಬು ಬಂದಿದ್ದರು.

ಟಿಕೆಟ್ ಕೊಡಿಸಲು ಅಭಿನವ ಹಾಲಶ್ರೀ ಶಿಫಾರಸು ಮುಖ್ಯ. ಹೀಗಾಗಿ ಅವರಿಗೂ ಹಣ ಕೊಡಬೇಕು ಎಂದು ಚೈತ್ರಾ ಕುಂದಾಪುರ ಗೋವಿಂದ್ ಬಾಬು ಪೂಜಾರಿಗೆ ಹೇಳಿದ್ದಳು.

ಅದರಂತೆ ಉದ್ಯಮಿ ಗೋವಿಂದ್ ಬಾಬು ಪೂಜಾರಿ ಸಹ ಅಭಿನವ ಹಾಲಶ್ರೀಗೆ ಸಹ ಹಣ ನೀಡಿದ್ದರು.

ಮಠಕ್ಕೆ ಬಂದಿದ್ದ ಗೋವಿಂದ್ ಬಾಬು ಹಾಗೂ ಚೈತ್ರಾ ಕುಂದಾಪುರಗೆ ಹಾಲಶ್ರೀ ಶಾಲು ಹಾಕಿ ಸನ್ಮಾನಿಸಿ ಆಶೀರ್ವಾದ ಮಾಡಿದ್ದರು.

ಹೀಗಾಗಿ ಎಂಎಲ್ಎ ಟಿಕೆಟ್ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಮಠದಲ್ಲಿಯೇ ಮಾತುಕತೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.




