
ಶಿವರಾಜ್ಕುಮಾರ್ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಶಿವಣ್ಣ ಅವರ ಆರೋಗ್ಯವನ್ನು ಸಿದ್ದರಾಮಯ್ಯ ಅವರು ವಿಚಾರಿಸಿದ್ದಾರೆ. ಅವರಿಗೆ ಗಿಡ ನೀಡುವ ಮೂಲಕ ಶಿವಣ್ಣನ ಸ್ವಾಗತಿಸಿದ್ದಾರೆ. ಆ ಸಂದರ್ಭದ ಫೋಟೋ ಗಮನ ಸೆಳೆದಿದೆ.

ಜನವರಿ 27ರಂದು ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಶಿವರಾಜ್ಕುಮಾರ್ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಶಿವರಾಜ್ಕುಮಾರ್ ಅವರ ಆರೋಗ್ಯವನ್ನು ಸಿದ್ದರಾಮಯ್ಯ ವಿಚಾರಿಸಿದರು. ವಿಶ್ರಾಂತಿ ಪಡೆದು ಚಿತ್ರರಂಗಕ್ಕೆ ಮರಳುವಂತೆ ಕೋರಿದರು.

ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ನವರು. ಅವರು ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದರು. ಈ ಸಂದರ್ಭದಲ್ಲಿ ಶಿವರಾಜ್ಕುಮಾರ್ ಅವರು ಪ್ರಚಾರಕ್ಕೆ ತೆರಳಿದ್ದರು. ಹೀಗಾಗಿ, ಕಾಂಗ್ರೆಸ್ ಜೊತೆ ಅವರಿಗೆ ಒಳ್ಳೆಯ ನಂಟು ಬೆಳೆದಿದೆ.

ಶಿವರಾಜ್ಕುಮಾರ್ ಅವರಿಗೆ ಕ್ಯಾನ್ಸರ್ ಆಗಿತ್ತು. ಇದರ ವಿರುದ್ಧ ಹೋರಾಡಿ ಸಂಪೂರ್ಣ ಕ್ಯಾನ್ಸರ್ ಮುಕ್ತರಾಗಿ ಅವರು ಹೊರಹೊಮ್ಮಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ಕೊಟ್ಟಿದೆ

ಡಾಲಿ ಧನಂಜಯ್ ಅವರು ಕೂಡ ಶಿವಣ್ಣನ ಭೇಟಿ ಆಗಿದ್ದಾರೆ. ಇಬ್ಬರೂ ‘ಟಗರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಸಾಕಷ್ಟು ಗಮನ ಸೆಳೆದಿತ್ತು. ಈ ಚಿತ್ರದಿಂದ ಡಾಲಿ ವೃತ್ತಿ ಬದುಕು ಬದಲಾಯಿತು.
Published On - 1:06 pm, Mon, 27 January 25