ಕೊಪ್ಪಳದಲ್ಲಿ ಘಮ ಘಮಿಸಿದ ಪಾಕಗಳು: ಸಿರಿಧಾನ್ಯಗಳಲ್ಲಿ ಕೇಕ್, ಪಿಜ್ಜಾ, ಬರ್ಗರ್​

| Updated By: ಗಂಗಾಧರ​ ಬ. ಸಾಬೋಜಿ

Updated on: Dec 05, 2024 | 3:41 PM

ಕೊಪ್ಪಳದಲ್ಲಿ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ನೂರಾರು ಆಹಾರ ಪದಾರ್ಥಗಳ ಸ್ಪರ್ಧೆ ನಡೆಯಿತು. ನೂರಾರು ಮಹಿಳೆಯರು ಭಾಗವಹಿಸಿ ವಿವಿಧ ತಿನಿಸುಗಳನ್ನು ಪ್ರದರ್ಶಿಸಿದರು. ಪಾಶ್ಚಾತ್ಯ ಖಾದ್ಯಗಳಿಗೆ ಪರ್ಯಾಯವಾಗಿ ಸಿರಿಧಾನ್ಯಗಳ ಉಪಯೋಗವನ್ನು ಉತ್ತೇಜಿಸುವ ಉದ್ದೇಶವಾಗಿತ್ತು. ಈ ಕಾರ್ಯಕ್ರಮ ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ ನೀಡುವುದಾಗಿದೆ.

1 / 7
ಇತ್ತೀಚೆಗೆ ಎಲ್ಲಿ ಹೋದರು ಪಿಜ್ಜಾ, ಬರ್ಗರ್, ಮೋಮೋಸ್ ಸೇರಿದಂತೆ ಪಾಶ್ಚತ್ಯ ಊಟ, ಉಪಹಾರ, ತಿನಿಸುಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಆರೋಗ್ಯಕ್ಕೆ ಅನಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಬ್ರೇಕ್ ಹಾಕಬೇಕು ಅನ್ನೋ ಕಾರಣದಿಂದ ಕೊಪ್ಪಳದಲ್ಲಿ ಸಿರಿಧಾನ್ಯಗಳ ಬಳಕೆ ಮಾಡಿಕೊಂಡು ತಯಾರಿಸಬಹುದುದಾ ನೂರಾರು ಬಗೆಯ ಆಹಾರಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನೂರಾರು ಮಹಿಳೆಯರು, ಸಿರಿಧಾನ್ಯಗಳಲ್ಲಿ ವಿವಿಧ ತಿನಿಸುಗಳನ್ನು ಮಾಡಿದ್ದು ವಿಶೇಷವಾಗಿತ್ತು.

2 / 7
ಎಲ್ಲಿ ನೋಡಿದರೆ ತಿನ್ನಬೇಕು ಅನ್ನಿಸೋ ರೀತಿಯಲ್ಲಿರುವ ಕೇಕ್, ಬರ್ಗರ್ ಸೇರಿದಂತೆ ಅನೇಕ ಸಿಹಿ ತಿಂಡಿಗಳಿದ್ದವು. ಕೆಲ ಮಹಿಳೆಯರು ನಿಪ್ಟಟ್ಟು, ಚಕ್ಕುಲಿ, ಕೋಡಬಳೆ ಸೇರಿದಂತೆ ಅನೇಕ ಕುರುಕುಲ ತಿಂಡಿಗಳನ್ನು ಸಿದ್ದಗೊಳಿಸಿದ್ದರೆ, ಇನ್ನು ಕೆಲ ಮಹಿಳೆಯರು ಮುಂಜಾನೆ ಬ್ರೇಕ್-ಫಾಸ್ಟ್, ಮಧ್ಯಾಹ್ನ ಊಟ, ಸಂಜೆಯ ತಿನಿಸು, ರಾತ್ರಿಯ ಊಟಕ್ಕೆ ಬೇಕಾದ ವಿವಿಧ ಆಹಾರಗಳನ್ನು ಸಿದ್ಧಗೊಳಿಸಿದ್ದರು. ಇವೆಲ್ಲವನ್ನು ನೋಡುತ್ತಿದ್ದ ಅನೇಕರಿಗೆ ಬಾಯಲ್ಲಿ ನೀರು ಬರ್ತಿತ್ತು. ಹೀಗಾಗಿ ಅನೇಕರು ತಮಗಿಷ್ಟವಾದ ಸಿಹಿತಿನಿಸು, ಕುರುಕಲು ತಿಂಡಿಗಳನ್ನು ತಿಂದು ಬಾಯಿ ಕೂಡಾ ಚಪ್ಪರಿಸಿದ್ರು. ಇಂತಹದೊಂದು ಬಗೆಬಗೆಯ ಆಹಾರಗಳು ಸಿದ್ದವಾಗಿದ್ದು ಕೊಪ್ಪಳ ನಗರದಲ್ಲಿರುವ ಕೃಷಿ ವಿಸ್ತರಣಾ ಕೇಂದ್ರದಲ್ಲಿ. ಇನ್ನು ಇವೆಲ್ಲವನ್ನು ಮಾಡಿದ್ದು ಸಿರಿಧಾನ್ಯಗಳಿಂದ ಅನ್ನೋದು ವಿಶೇಷ.

3 / 7
ಹೌದು.. ಈ ಹಿಂದೆ ಹೆಚ್ಚಿನ ಜನರು ತಮ್ಮ ಊಟಕ್ಕೆ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಜೋಳ, ಸಜ್ಜೆ, ಸಾವೆ ಸೇರಿದಂತೆ ಅನೇಕ ಸಿರಿಧಾನ್ಯಗಳನ್ನು ಬಳಸಿದ್ರೆ ಹಳೆ ಮೈಸೂರು ಭಾಗದಲ್ಲಿ ರಾಗಿ ಸೇರಿದಂತೆ ಅನೇಕ ಸಿರಿಧಾನ್ಯಗಳನ್ನು ರೈತರು ಹೆಚ್ಚಾಗಿ ಬೆಳೆಯುತ್ತಿದ್ದರು. ಆದರೆ ಇತ್ತೀಚೆಗೆ ಹೆಚ್ಚಿನ ರೈತರು ಸಿರಿಧಾನ್ಯಗಳ ಬೆಳೆಯೋದನ್ನು ಕಡಿಮೆ ಮಾಡಿದ್ದಾರೆ. ಜೊತೆಗೆ ಹೆಚ್ಚಿನ ಜನರು ಸಿರಿಧಾನ್ಯಗಳ ಬಳಕೆ ಕೂಡಾ ಕಡಿಮೆ ಮಾಡಿದ್ದಾರೆ. ಇದರಿಂದ ಚಿಕ್ಕ ವಯಸ್ಸಿಗೆ ಶುಗರ್ ಸೇರಿದಂತೆ ಅನೇಕ ಖಾಯಿಲೆಗಳು ವಕ್ಕರಿಸುತ್ತಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ, ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕೊಪ್ಪಳ ಕೃಷಿ ಇಲಾಖೆ ಇಂದು ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಆಯೋಜಿಸಿತ್ತು.

4 / 7
ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಹಲವಡೆಯಿಂದ ನೂರಾರು ಮಹಿಳೆಯರು, ಮಹಿಳಾ ಸ್ವಸಹಾಯ ಸಂಘದವರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ತಾವು ಸಿದ್ದಗೊಳಿಸಿಕೊಂಡು ಬಂದಿದ್ದ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು. ಜೊತೆಗ ಯಾವ ತಿಂಡಿಗಳನ್ನು ಯಾವ ಸಿರಿಧಾನ್ಯಗಳಿಂದ ಹೇಗೆ ಮಾಡಬಹುದು ಅನ್ನೋದರ ಮಾಹಿತಿ ಕೂಡ ನೀಡಿದರು. 

5 / 7
ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಮಹಿಳೆಯರು, ಸಿರಿಧಾನ್ಯಗಳನ್ನು ಬಳಸಿ ಕೇಕ್, ಪಿಜ್ಜಾ, ಬರ್ಗರ್ ಸೇರಿದಂತೆ ಅನೇಕ ಪಾಶ್ಚತ್ಯ ಶೈಲಿಯ ತಿನಿಸುಗಳನ್ನು ಕೂಡ ಮಾಡಿದ್ದರು. ಇದರ ಜೊತೆಗೆ ಆರೋಗ್ಯಕ್ಕೆ ಉತ್ತಮವಾಗಿರೋ ರಾಗಿಯಿಂದ ಮಾಡಬಹುದಾದ ಅನೇಕ ಪದಾರ್ಥಗಳನ್ನು ಸಿದ್ದಗೊಳಿಸಿದ್ದರು. ಜೋಳದಿಂದ ರೊಟ್ಟಿ ಮಾತ್ರವಲ್ಲಾ, ಜೋಳದಿಂದ ಹತ್ತಾರು ರೀತಿಯ ತಿನಿಸುಗಳನ್ನು ಕೂಡ ಮಾಡಬಹುದು ಅನ್ನೋದನ್ನು ತೋರಿಸಿದ್ರು. ಜೊತೆಗೆ ನವಣೆ, ಸಜ್ಜೆ, ಬರಗು, ಸಾಮೆ,ಅಗಸೆ ಸೇರಿದಂತೆ ಅನೇಕ ಸಿರಿಧಾನ್ಯಗಳಿಂದ ನೂರಾ ಆರಕ್ಕೂ ಹೆಚ್ಚು ವಿಧದ ಆಹಾರಗಳನ್ನು ಸಿದ್ದಗೊಳಿಸಿದ್ದರು.

6 / 7
ವಿಜೇತರಿಗೆ ಇಲಾಖೆಯಿಂದ ಬಹುಮಾನ ಕೂಡ ನೀಡಲಾಯಿತು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡ್ವೇ ಸೇರಿದಂತೆ ಅನೇಕ ಅಧಿಕಾರಿಗಳು  ಮಹಿಳೆಯರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

7 / 7
ಸಿರಿಧಾನ್ಯಗಳ ಬಳೆಕಯನ್ನು ಜನರು ದೈನಂದಿನ ಆಹಾರದಲ್ಲಿ ಹೆಚ್ಚಿಸಿಕೊಂಡರೆ, ಆರೋಗ್ಯ ಸುಧಾರಣೆಯಾಗುತ್ತದೆ. ಜೊತೆಗೆ ಭೂಮಿ ಕೂಡ ರಾಸಾಯನಿಕ ಮುಕ್ತವಾಗುತ್ತದೆ. ಈ ನಿಟ್ಟಿನಲ್ಲಿ ಜನರು ಹೆಚ್ಚಿನ ಸಿರಿಧಾನ್ಯಗಳ ಬಳಕೆ ಮಾಡಬೇಕು, ರೈತರು ಹೆಚ್ಚಾಗಿ ಸಿರಿಧಾನ್ಯಗಳನ್ನು ಬೆಳೆಯುವ ಕೆಲಸ ಮಾಡಬೇಕಿದೆ.