ಗೌರವ ಡಾಕ್ಟರೇಟ್ ಪಡೆದ ಸ್ಯಾಂಡಲ್ವುಡ್ ವಸ್ತ್ರ ವಿನ್ಯಾಸಕ ಫಾರೆವರ್ ನವೀನ್ ಕುಮಾರ್
ಫ್ಯಾಷನ್ ವಿನ್ಯಾಸ ಹಾಗೂ ಉಡುಪು ನಿರ್ವಹಣೆಯಲ್ಲಿ ನವೀನ್ ಕುಮಾರ್ ಅವರ ಕೆಲಸವನ್ನು ಗುರುತಿಸಿದ ಅಮೆರಿಕ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾರೆವರ್ ನವೀನ್ ಕುಮಾರ್ ಅವರು ಗೌರವ ಡಾಕ್ಟರೇಟ್ ಪದವಿ ಸ್ವೀಕರಿದರು.
Updated on: Jun 22, 2025 | 6:37 PM

ಕನ್ನಡ ಚಿತ್ರರಂಗದಲ್ಲಿ ಕಳೆದ ಹತ್ತಕ್ಕೂ ಅಧಿಕ ವರ್ಷಗಳಿಂದ ವಸ್ತ್ರ ವಿನ್ಯಾಸಕರಾಗಿ ಎಂ. ನವೀನ್ ಕುಮಾರ್ (ಫಾರೆವರ್ ನವೀನ್ ಕುಮಾರ್) ಅವರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.

ನವರಸ ನಾಯಕ ಜಗ್ಗೇಶ್ ಸೇರಿದಂತೆ ಕನ್ನಡದ ಹಲವಾರು ಸ್ಟಾರ್ ಕಲಾವಿದರಿಗೆ ವಸ್ತ್ರ ವಿನ್ಯಾಸಕರಾಗಿ ನವೀನ್ ಕುಮಾರ್ ಅವರು ಕೆಲಸ ಮಾಡಿದ್ದಾರೆ. ಅಲ್ಲದೇ, ಕಿರುತೆರೆಯ ರಿಯಾಲಿಟಿ ಶೋನಲ್ಲೂ ಕೆಲಸ ಮಾಡಿದ್ದಾರೆ.

ಎಂ. ನವೀನ್ ಕುಮಾರ್ ಅವರು ಅಮೆರಿಕ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಈ ಸಮಾರಂಭದಲ್ಲಿ ಬಾಲಿವುಡ್ ನಿರ್ಮಾಪಕ ಮೆಹುಲ್ ಕುಮಾರ್ ಮತ್ತು ಗೋವಾದ ಸಮಾಜ ಕಲ್ಯಾಣ ಸಚಿವ ಸುಭಾಷ್ ದೇಸಾಯಿ ಅವರು ನವೀನ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ನವೀನ್ ಕುಮಾರ್ ಅವರ ತಂದೆ ಕೆ.ಎಸ್ ಮೋಹನ್ ಅವರು ಗಾರ್ಮೆಂಟ್ಸ್ ಉದ್ಯಮದಲ್ಲಿ ತೊಡಗಿಕೊಂಡವರು. ಆದ್ದರಿಂದಲೇ ನವೀನ್ ಕುಮಾರ್ ಅವರಿಗೆ ಫ್ಯಾಷನ್ ಕ್ಷೇತ್ರದ ಕಡೆಗೆ ಆಸಕ್ತಿ ಬೆಳೆಯಿತು.




