AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: ಸೂಪರ್-8 ಸುತ್ತಿಗೆ 5 ತಂಡಗಳ ಎಂಟ್ರಿ

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ಕಣಕ್ಕಿಳಿದ 20 ತಂಡಗಳಲ್ಲಿ 8 ತಂಡಗಳು ಮಾತ್ರ ಮುಂದಿನ ಹಂತಕ್ಕೇರಲಿದೆ. ಅಂದರೆ ಇಲ್ಲಿ ಪ್ರತಿ ತಂಡಗಳನ್ನು ನಾಲ್ಕು ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದ್ದು, ಈ ಗ್ರೂಪ್​ನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ​ ಸುತ್ತಿಗೆ ಪ್ರವೇಶಿಸಲಿದೆ.

ಝಾಹಿರ್ ಯೂಸುಫ್
|

Updated on: Feb 17, 2026 | 8:26 AM

Share
T20 World Cup 2026: ಟಿ20 ವಿಶ್ವಕಪ್ 2026ರ ಮೊದಲ ಸುತ್ತಿನ ಮುಕ್ತಾಯಕ್ಕೂ ಮುನ್ನವೇ ಐದು ತಂಡಗಳು ಸೂಪರ್-8 ಹಂತಕ್ಕೇರಿದೆ. ಇದೇ ವೇಳೆ ಮತ್ತೈದು ತಂಡಗಳು ಮೊದಲ ಸುತ್ತಿನಲ್ಲೇ ಹೊರಬಿದ್ದಿವೆ. ಹೀಗೆ ಮುಂದಿನ ಹಂತಕ್ಕೇರಿದ ಮತ್ತು ಹೊರಬಿದ್ದ ತಂಡಗಳಾವುವು ಎಂದು ನೋಡುವುದಾದರೆ...

1 / 7
ಸೌತ್ ಆಫ್ರಿಕಾ: ಈ ಬಾರಿಯ ವಿಶ್ವಕಪ್​ನಲ್ಲಿ ಗ್ರೂಪ್-ಡಿ ನಲ್ಲಿ ಕಣಕ್ಕಿಳಿದಿರುವ ಸೌತ್ ಆಫ್ರಿಕಾ ತಂಡವು ಕೆನಡಾ, ಅಫ್ಘಾನಿಸ್ತಾನ್ ಹಾಗೂ ನ್ಯೂಝಿಲೆಂಡ್ ವಿರುದ್ಧ ಗೆಲುವು ದಾಖಲಿಸಿದೆ. ಈ ಮೂರು ಗೆಲುವುಗಳೊಂದಿಗೆ ಒಟ್ಟು 6 ಅಂಕಗಳನ್ನು ಪಡೆದು ಸೂಪರ್-8 ಹಂತಕ್ಕೇರಿದೆ.

2 / 7
ವೆಸ್ಟ್ ಇಂಡೀಸ್: ಗ್ರೂಪ್- ಸಿ ನಲ್ಲಿ ಕಣಕ್ಕಿಳಿದಿರುವ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಸ್ಕಾಟ್ಲೆಂಡ್, ಇಂಗ್ಲೆಂಡ್ ಹಾಗೂ ನೇಪಾಳ ವಿರುದ್ಧ ಗೆದ್ದು ಒಟ್ಟು 6 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ.

3 / 7
ಇಂಗ್ಲೆಂಡ್: ವೆಸ್ಟ್ ಇಂಡೀಸ್ ಜೊತೆ ಗ್ರೂಪ್-ಸಿ ಯಿಂದ ಸೂಪರ್-8 ಹಂತಕ್ಕೇರಿದ ಎರಡನೇ ತಂಡ ಇಂಗ್ಲೆಂಡ್. ನೇಪಾಳ, ಸ್ಕಾಟ್ಲೆಂಡ್ ಹಾಗೂ ಇಟಲಿ ವಿರುದ್ಧ ಗೆದ್ದು ಹ್ಯಾರಿ ಬ್ರೂಕ್ ಪಡೆ ಒಟ್ಟು 6 ಅಂಕಗಳೊಂದಿಗೆ ಮುಂದಿನ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.

4 / 7
ಶ್ರೀಲಂಕಾ: ಗ್ರೂಪ್- ಬಿ ನಲ್ಲಿ ಕಣಕ್ಕಿಳಿದಿರುವ ಶ್ರೀಲಂಕಾ ತಂಡವು ಐರ್ಲೆಂಡ್, ಒಮಾನ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಬಗ್ಗು ಬಡಿದು ಒಟ್ಟು 6 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಸೂಪರ್-8 ಹಂತಕ್ಕೇರುವಲ್ಲಿ ಲಂಕಾ ಪಡೆ ಯಶಸ್ವಿಯಾಗಿದೆ. 

5 / 7
ಭಾರತ: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಗ್ರೂಪ್-ಎ ನಲ್ಲಿ ಕಣಕ್ಕಿಳಿದಿರುವ ಟೀಮ್ ಇಂಡಿಯಾ ಆಡಿರುವ ಮೂರು ಮ್ಯಾಚ್​ಗಳಲ್ಲೂ ಜಯ ಸಾಧಿಸಿದೆ. ಯುಎಸ್​ಎ, ನಮೀಬಿಯ ಹಾಗೂ ಪಾಕಿಸ್ತಾನ್ ವಿರುದ್ಧ ಗೆದ್ದಿರುವ ಭಾರತ ಒಟ್ಟು 6 ಅಂಕಗಳೊಂದಿಗೆ ಸೂಪರ್-8 ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.

6 / 7
ಇನ್ನು ಈ ಬಾರಿ ಟಿ20 ವಿಶ್ವಕಪ್​​ನಿಂದ ಈವರೆಗೆ ಎಲಿಮಿನೇಟ್ ಆದ ತಂಡಗಳೆಂದರೆ... ನಮೀಬಿಯ, ಒಮಾನ್, ಸ್ಕಾಟ್ಲೆಂಡ್, ಇಟಲಿ ಮತ್ತು ನೇಪಾಳ. ಇನ್ನುಳಿದ ಆಸ್ಟ್ರೇಲಿಯಾ, ಪಾಕಿಸ್ತಾನ್, ಝಿಂಬಾಬ್ವೆ, ಅಫ್ಘಾನಿಸ್ತಾನ್, ನ್ಯೂಝಿಲೆಂಡ್, ಐರ್ಲೆಂಡ್, ಯುಎಸ್​ಎ ತಂಡಗಳು ಇನ್ನೂ ಸಹ ಸೂಪರ್-8 ಹಂತಕ್ಕೇರುವ ರೇಸ್​ನಲ್ಲಿದ್ದಾರೆ.

7 / 7