ICC T20I Rankings: ಐಸಿಸಿ ರ‍್ಯಾಂಕಿಂಗ್ ಅಗ್ರಸ್ಥಾನದಂಚಿನಲ್ಲಿ ಅಭಿಷೇಕ್ ಶರ್ಮಾ
ICC T20I Rankings 2025: ಐಸಿಸಿ ಟಿ20 ಬ್ಯಾಟರ್ಗಳ ನೂತನ ಶ್ರೇಯಾಂಕ ಪಟ್ಟಿ ಪ್ರಕಟಿಸಿದ್ದು, ಈ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೂವರು ಬ್ಯಾಟರ್ಗಳು ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಭಾರತ ತಂಡದ ಯುವ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಈ ಬಾರಿ ಟಾಪ್-3 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
Updated on:Feb 05, 2025 | 2:04 PM

ಐಸಿಸಿ ಟಿ20 ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಕೂಡ ಆಸ್ಟ್ರೇಲಿಯಾದ ಎಡಗೈ ದಾಂಡಿಗ ಟ್ರಾವಿಸ್ ಹೆಡ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಭಾರತ ತಂಡದ ಹೊಡಿಬಡಿ ದಾಂಡಿಗ ಅಭಿಷೇಕ್ ಶರ್ಮಾ.

ಇಲ್ಲಿ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ನಡುವಣ ಅಂತರ ಕೇವಲ 26 ಪಾಯಿಂಟ್ಸ್ ಅಷ್ಟೇ. ಅಂದರೆ ಟ್ರಾವಿಸ್ ಹೆಡ್ 855 ರೇಟಿಂಗ್ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇದೀಗ ಅಭಿಷೇಕ್ ಶರ್ಮಾ 829 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಮೂರನೇ ಸ್ಥಾನದಲ್ಲಿರುವುದು ಟೀಮ್ ಇಂಡಿಯಾದ ಮತ್ತೋರ್ವ ದಾಂಡಿಗ ತಿಲಕ್ ವರ್ಮಾ. ಕಳೆದ ಬಾರಿ 2ನೇ ಸ್ಥಾನದಲ್ಲಿದ್ದ ತಿಲಕ್ ಈ ಬಾರಿ 803 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಇಂಗ್ಲೆಂಡ್ ದಾಂಡಿಗ ಫಿಲ್ ಸಾಲ್ಟ್ (798) 4ನೇ ಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರ್ಯ ಒಟ್ಟು 738 ಅಂಕಗಳನ್ನು ಪಡೆದಿದ್ದಾರೆ.

ಇಂಗ್ಲೆಂಡ್ನ ಜೋಸ್ ಬಟ್ಲರ್ (729), ಪಾಕಿಸ್ತಾನದ ಬಾಬರ್ ಆಝಂ (712), ಶ್ರೀಲಂಕಾದ ಪಾತುಮ್ ನಿಸ್ಸಂಕಾ (707), ಹಾಗೂ ಪಾಕಿಸ್ತಾನದ ಮೊಹಮ್ಮದ್ ರಿಝ್ವಾನ್ (704) ಕ್ರಮವಾಗಿ 6,7,8 ಮತ್ತು 9ನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಟಾಪ್-10 ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಶ್ರೀಲಂಕಾದ ಕುಸಾಲ್ ಪೆರೇರಾ (675) ಕಾಣಿಸಿಕೊಂಡಿದ್ದಾರೆ.
Published On - 2:03 pm, Wed, 5 February 25



















